Belagavi News In Kannada | News Belgaum

ಜಿಲ್ಲೆ ಕಂಡ ಸರಳ ಸಜ್ಜನಿಕೆಯ ರಾಜಕೀಯ ಸಂತ ಕೇಂದ್ರ ಸಚಿವ ಸುರೇಶ್ ಅಂಗಡಿಯವರನ್ನ ಕಳೆದುಕೊಂಡು ಎರಡು ವರ್ಷಗಳು

ನಾವೆಲ್ಲರೂ ಮುನ್ನಡೆಯೊಣ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ್ ಹೇಳಿದರು.

ಬೆಳಗಾವಿ: ಜಿಲ್ಲೆ ಕಂಡ ಸರಳ ಸಜ್ಜನಿಕೆಯ ರಾಜಕೀಯ ಸಂತ ಕೇಂದ್ರ ಸಚಿವ ಸುರೇಶ್ ಅಂಗಡಿಯವರನ್ನ ಕಳೆದುಕೊಂಡು ಎರಡು ವರ್ಷಗಳು ಗತಿಸಿದ್ದು ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯೊಣ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ್ ಹೇಳಿದರು.
ಸಮೀಪದ ಸಾವಗಾಂವದಲ್ಲಿಯ ಅಂಗಡಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ದಿ.ಸುರೇಶ್ ಅಂಗಡಿಯವರಿಗೆ ಜಿಲ್ಲಾ ಬಿಜೆಪಿ ಘಟಕದಿಂದ ಎರಡನೆ ವರ್ಷದ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ನಾಲ್ಕು ಬಾರಿ ಸಂಸದರಾಗಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೆ ಕೊಡುಗೆ ನೀಡಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅರಳಿಸುವ ಕನಸ್ಸು ಖಂಡಿತ ಧೀಮಂತ ನಾಯಕನ ಕನಸ್ಸು ನನಸು ಮಾಡುವತ್ತ ಕಾರ್ಯಕರ್ತರು ಶ್ರಮಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸೋಣ. ಅವರು ಅನುಪಸ್ಥಿತಿ ನಮಗೆಲ್ಲ ನೊವು ತಂದಿದೆ. ಅವರ ಮಾರ್ಗದರ್ಶನ ಅವರು ಮಾಡಿದ ಯೋಜನೆಗಳು ಇಂದು ನಮಗೆಲ್ಲ ಶ್ರೀ ರಕ್ಷೆಯಾಗಿದ್ದು ಜನ ಸಾಮಾನ್ಯರು ಅವರ ಹತ್ತಿರ ಬಂದಾಗ ನಗು ಮುಖದಿಂದ ಮಾತಾಡುವದರೊಂದಿಗೆ ಎಲ್ಲರಿಗೂ ಸ್ಪಂದನೆ ನೀಡುತಿದ್ದ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮಿಯೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ ಮಾತನಾಡಿ, ಕಾರ್ಯಕರ್ತರ ಹೃದಯದಲ್ಲಿ ಅಚ್ಚುಳಿಯುವಂತೆ ಉಳಿದಿರುವ ಸುರೇಶ್ ಅಂಗಡಿಯವರನ್ನು ಸ್ಮರಣೆ ಮಾಡಬೇಕಾದ ಕರ್ತವ್ಯ ಎಲ್ಲ ಕಾರ್ಯಕರ್ತರದ್ದಾಗಿದ್ದು ಅವರು ಎಂದು ಮರೆಯಲಾಗದ ಮಾಣಿಕ್ಯವಾಗಿ ನಮ್ಮಲ್ಲಿ ಉಳಿದ್ದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಕೋಷಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ, , ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ವೈದ್ಯಕೀಯ ಪ್ರಕೊಷ್ಟಾದ ಡಾ.ಗುರುಪ್ರಸಾದ ಕೋತಿನ ಸಾಮಾಜಿಕ ಜಾಲಾತಾಣದ ನೀತಿನ ಚೌಗಲೆ, ಸಂತೋಷ ದೇಶನೂರ ರಾಷ್ಟ್ರೀಯ ಒಬಿಸಿ ಪದಾಧಿಕಾರಿ ಲಕ್ಷ್ಮಣ ತಪಸಿ, ವಿರಭದ್ರಯ್ಯ ಪೂಜಾರಿ, ಯಲ್ಲೇಶ್ ಕೊಲಕಾರ ಸಂಸ್ಥೆಯ ಅಡಳಿತಾಧಿಕಾರಿ ರಾಜು ಜೋಶಿ ಮುಂತಾದವರು ಇದ್ದರು.