Belagavi News In Kannada | News Belgaum

ಒಂದು ಗುಂಟೆ ಭೂಮಿಗಾಗಿ ಹೆತ್ತತಂದೆಯನ್ನೇ ಕೊಂದ ಮಗ

ಬಾಗಲಕೋಟ: ಒಂದು ಗುಂಟೆ ಭೂಮಿಗಾಗಿ ಹೆತ್ತತಂದೆಯನ್ನೇ ಕೊಂದ ಮಗ ಬಾಗಲಕೋಟ ಜಿಲ್ಲೆಯ ಬನಹಟ್ಟಿ ಪಠ್ಠಣದಲ್ಲಿ ಈ ಘಟನೆ ನಡೆದಿದೆ.ಕೊಲೆಯಾದವರು ಬನಹಟ್ಟಿಯ ಮಾಳಪ್ಪ ಹಳ್ಳೂರ (65) ಎಂದು ಗುರುತಿಸಲಾಗಿದೆ. ಇನ್ನೂ ತುಕ್ಕಪ್ಪ ಹಳ್ಳೂರ(24) ಎಂಬಾತನೇ ಕೊಲೆ ಮಾತ್ರ ಮಾಡಿದ ಮಗನಾಗಿದ್ದಾನೆ.ಬನಹಟ್ಟಿ ಪಟ್ಟಣದ ಕೆರೆ ಸಮೀಪವಿದ್ದ ಒಂದು ಗುಂಟೆ ಜಾಗವನ್ನು ನನಗೆ ಬಿಟ್ಟು ಕೊಡು ಎಂದು ತಂದೆಯ ಬಳಿ ಆಗಾಗ ಜಗಳವಾಡುತ್ತಿದ್ದ ತುಕ್ಕಪ್ಪ ಹಲವು ಬಾರಿ ತಂದೆಯೊಂದಿಗೆ ಜಗಳ ಮಾಡಿದ್ದನು ಎಂದು ತಿಳಿದುಬಂದಿದೆ.
ಆದರೆ ಇಂದು ಮಧ್ಯಾಹ್ನ ತಂದೆ ಮಾಳಪ್ಪ ಅದೇ ಜಾಗದಲ್ಲಿರುವ ಶೆಡ್‌ನಲ್ಲಿ ಮಲಗಿದ್ದರು. ಆಗ ಅಲ್ಲಿಗೆ ಬಂದ ಮಗ ತುಕ್ಕಪ್ಪ, ತಂದೆಯ ತಲೆಗೆ ಕಟ್ಟಿಗೆಯ ತುಂಡಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.ಸ್ಥಳಕ್ಕಾಗಮಿಸಿದ ಬನಹಟ್ಟಿ ಠಾಣೆಯ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ. ಘಟನೆಯ
ಕುರಿತು ಪ್ರಕರಣ ದಾಖಲಾಗಿದೆ.