Belagavi News In Kannada | News Belgaum

ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ ನೇತೃತ್ವದಲ್ಲಿ ಸವದತ್ತಿ, ಬೈಲಹೊಂಗಲ, ರಾಮದುರ್ಗ ತಹಶೀಲ್ದಾರರ ಹಾಗೂ ರೈತರ ಸಭೆ ಬುಧವಾರ ನಡೆಯಿತು.

ಬೈಲಹೊಂಗಲ: ‘ರೈತರು ನಡೆಸುತ್ತಿರುವ ಹೋರಾಟ, ಬೇಡಿಕೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಕೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು.

ಅವರು ಪಟ್ಟಣದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಮಲಪ್ರಭಾ ಏತ ನೀರಾವರಿ ಬಳಕೆದಾರರ ಸಂಘದಿಂದ ನಡೆಯುತ್ತಿರುವ ರೈತರ ಮೂರನೇ ದಿನದ ಹೋರಾಟದಲ್ಲಿ ಮಂಗಳವಾರ ಸವದತ್ತಿ, ರಾಮದುರ್ಗ, ಬೈಲಹೊಂಗಲ ತಹಶೀಲ್ದಾರರ ಸಭೆ ಕರೆದು ಚರ್ಚಿಸಿ ಮಾತನಾಡಿದರು.

‘ರೈತರಿಂದ ಮಲಪ್ರಭಾ ಜಲಾನಯನ ಯೋಜನೆಗೆ ಭೂಸ್ವಾಧೀನ ಮಾಡಿ ಡೈರಿ ಮಾಡಲಾಗಿದೆ. ಆದರೆ ಈ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಪವಾರ್ಡ್ ಪತ್ರ ಪರಿಶೀಲನೆ ಮಾಡದೆ 11 ಇ ಸ್ಕೆಚ್, ಹದ್ದುಬಸ್ತ್ ಗುರುತು ಮಾಡದೆ ಪೆÇೀಡಿ ಮಾಡಿದ್ದಾರೆ. ರೈತರ ಮಾಲೀಕತ್ವದ ಕಾಲಂನಲ್ಲಿ ಕರ್ನಾಟಕ ನೀರಾವರಿ ನಿಗಮ ಎಂದು ನಮೂದಿಸಿದ್ದಾರೆ. ಇದು ಕಾನೂನು ಬಾಹಿರವಾಗಿದೆ ಎಂದು ರೈತರ ವಾದವಾಗಿದೆ. ಈ ಕುರಿತು ಮೂರು ತಾಲ್ಲೂಕಗಳ ತಹಶೀಲ್ದಾರ, ರೈತರು ಸಭೆ ಕರೆದು ಚರ್ಚಿಸಲಾಗುತ್ತಿದೆ’ ಎಂದರು.

ರೈತ ಮುಖಂಡ ಬಿ.ಎಂ.ಚಿಕ್ಕನಗೌಡರ, ಸಿದ್ದಗೌಡ ಮೋದಗಿ, ಮಲ್ಲಿಕಾರ್ಜುನ ಹುಂಬಿ, ಸುರೇಶ ಸಂಪಗಾಂವ ಮಾತನಾಡಿ, ’50 ವರ್ಷಗಳ ಹಿಂದೆ ಭೂಸ್ವಾಧೀನ ಮಾಡಿಕೊಂಡ ರೈತರ ಜಮೀನುಗಳಿಗೆ ದಾಖಲಾತಿಗಳನ್ನು ಸಂಗ್ರಹಿಸಿ ಡೈರಿ ಮಾಡಲಾಗಿದೆ. ಇದು ನಿಯಮ ಬಾಹಿರವಾಗಿದೆ. ಅಧಿಕಾರಿಗಳು ತಮ್ಮ ತಪ್ಪು ಒಪ್ಪಿಕೊಳ್ಳದೆ ರದ್ಧು ಮಾಡುವುದಕ್ಕೆ ಬರುವುದಿಲ್ಲ ಅಂತ ಹೇಳುತ್ತಿದ್ದಾರೆ. ರೈತರ ಹೋರಾಟ ಗಾಂಭೀರ್ಯತೆ ಪಡೆಯಬಾರದು ಎಂದಾದರೆ ಸಭೆಯಲ್ಲಿ ಚರ್ಚಿಸುವ ವಿಷಯಗಳ ಕುರಿತು ನಡಾವಳಿ ನೀಡಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚರ್ಚಿಸುವ ವಿಷಯ ಕುರಿತು ನಡಾವಳಿ ನೀಡಲಾಗುತ್ತದೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಚರ್ಚಿಸುವ ವಿಷಯಗಳ ಕುರಿತು ನೀವು ಏಕೆ ನಡವಾಳಿ ಕೊಡುವುದಿಲ್ಕೊಲ. ನಮಗೆ ನಡಾವಳಿ ನೀಡಲೇಬೇಕು. ತಹಶಿಲ್ದಾರರು ಲೋಪದೋಷ ಮಾಡಿದಾಗ ಗಮನಕ್ಕೆ ಬಂದಾಗ ಅದನ್ನು ಸರಿಪಡಿಸೋದ ಮೇಲಾಧಿಕಾರಿಗಳ ಜವಾಬ್ದಾರಿ’ ಎಂದರು.//////