Belagavi News In Kannada | News Belgaum

ಪೌರಕಾರ್ಮಿಕರು ನಿಜವಾದ ಶ್ರಮಜೀವಿಗಳು: ಬಸವರಾಜ ಮನಗೂಳಿ 

ಬೆಳಗಾವಿ:  ಸ್ವಚ್ಛತೆ ಕಾಪಾಡಲು ತಮ್ಮ ಜೀವವನ್ನೇ ಲೆಕ್ಕಿಸದಿರುವ ಪೌರಕಾರ್ಮಿಕರು ನಿಜವಾದ ಶ್ರಮಜೀವಿಗಳು. ಅಂತಹ ಸೇವಾ ನಿರತ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರದ ವತಿಯಿಂದ ಆಚರಿಸುತ್ತಾ ಬರುತ್ತಿರುವದು ಅತ್ಯಂತ ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಅಂಕಲಗಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಬಸವರಾಜ ಮನಗೂಳಿ ಅವರು ಹೇಳಿದರು.
ಅಂಕಲಗಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಶುಕ್ರವಾರ (ಸೆ.23) ನಡೆದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶಂಕರ ಗೊಡಗೇರಿ, ಶಾಂತಪ್ಪಾ ಕುಡಜೋಗಿ, ಉದಯ ಪಾಟೀಲ, ನಾಸಿರ ಕೋತವಾಲ, ಬಸವರಾಜ ಕಟ್ಟೀಮನಿ, ಆನಂದ ಹರಿಜನ, ರೂಪಾ ಪಾಟೀಲ, ಪ್ರಕಾಶ ಜನಕಟ್ಟಿ, ಪ್ರಕಾಶ ಮರಾ ಮರಾಠೆ ಉಪಸ್ಥಿತರಿದ್ದರು.//////