Belagavi News In Kannada | News Belgaum

ಚಿನ್ನದ ಪದಕ ಪುರಸ್ಕೃತೆ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವೈಷ್ಣವಿ ವಿಭೂತೆ ಅವರಿಗೆ ಸನ್ಮಾನ

ಬೆಳಗಾವಿ :ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 3 ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ವೈಷ್ಣವಿ ಪಿ.ವಿಭೂತೆ ಚಿನ್ನದ ಪದಕ ಪುರಸ್ಕೃತಗೊಂಡಿದ್ದಾರೆ.

 ಎಂ.ಕೆ.ನಂಬಿಯಾರ್  ಸ್ಮಾರಕ ಚಿನ್ನದ ಪದಕವನ್ನು ದೇಶದ ಅಟಾರ್ನಿ ಜನರಲ್ ಪದ್ಮವಿಭೂಷಣ ಕೆ.ಕೆ. ವೇಣುಗೋಪಾಲ್ ಅವರು ಸ್ಥಾಪಿಸಿದ್ದಾರೆ.  ಭಾರತೀಯ ಸಂವಿಧಾನದ ಕಾನೂನಿನ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಸ್ಮಾರಕ ಬಹುಮಾನವನ್ನು ನೀಡಲಾಗುತ್ತದೆ.ಈ ಬಾರಿ ಈ ಬಹುಮಾನ

 ಶ್ರೀಮತಿ ವೈಷ್ಣವಿ ಪಿ.ವಿಭೂತೆ ಅವರ ಪಾಲಾಗಿದೆ. 200 ಅಂಕಗಳಲ್ಲಿ 142 ಅಂಕಗಳನ್ನು ಪಡೆದುಕೊಂಡಿದ್ದು, 2021-22ನೇ ಶೈಕ್ಷಣಿಕ ವರ್ಷದ ಎಂ.ಕೆ.ನಂಬಿಯಾರ್ ಸ್ಮಾರಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಆರ್.ಎಲ್.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ  ಎ.ಎಚ್.ಹವಾಲ್ದಾರ್, ಪ್ರಕಾಶ, ಅಪರ್ಣಾ, ಗುರುಪ್ರಸಾದ್ ವಿಭೂತೆ ಸೇರಿದಂತೆ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಬಹುಮಾನ ವಿಜೇತೆ ವೈಷ್ಣವಿ ವಿಭೂತೆ ಅವರನ್ನು ಅಭಿನಂದಿಸಿದರು./////