Belagavi News In Kannada | News Belgaum

ಶಾಂತ ರೀತಿಯಲ್ಲಿ ದಸರಾ ಆಚರಣೆಗೆ ಎಪಿಎಂಸಿ ಪೊಲೀಸ್ ಠಾಣಾ ಪಿಐ ಮಂಜುನಾಥ್ ಹಿರೇಮಠ ಕರೆ

 

ಬೆಳಗಾವಿ: ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ದಸರಾ ನವರಾತ್ರಿ ದಾಂಡಿಯ ಕಾರ್ಯಕ್ರಮದ ಕಮಿಟಿ ಸಾರ್ವಜನಿಕರನ್ನು ಕರೆಯಿಸಿ ಶಾಂತತ ಸಭೆ ನಡೆಸಿದ ಪಿಐ ಮಂಜುನಾಥ್ ಶಾಂತ ರೀತಿಯಲ್ಲಿ ದಸರಾ ಆಚರಣೆಗೆ ಕರೆ ನೀಡಿದರು.

ಸದರಿ ಶಾಂತದ ಸಭೆಯಲ್ಲಿ ದಾಂಡ್ಯ ಕಾರ್ಯಕ್ರಮ ನಡೆಸುತ್ತಿರುವ ಕಮಿಟಿಯವರು ಎಲ್ಲರೂ ಭಾಗಿಯಾಗಿದ್ದರು.

ಕಮಿಟಿಯ ಕೆಲವು ಸದಸ್ಯರು ಮಾತನಾಡಿ ಎರಡು ವರ್ಷ ಇಲ್ಲದ ಈ ದಸರಾ ನಿಮಿತ್ಯ ನಾವು ಮಾಡುತ್ತಿರುವ ದಾಂಡ್ಯ ಕಾರ್ಯಕ್ರಮಕ್ಕೆ ಹೆಚ್ಚಿಗೆ ವೇಳೆ ಅನುಮತಿ ನೀಡಿ ಎಂದು ಕೇಳಿದಾಗ, ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಹಿರೇಮಠ ಅವರು ನಾವು ನೀವು ಎಲ್ಲಾ ಕಾನೂನನ್ನ ಪಾಲನೆ ಮಾಡಬೇಕಾಗಿದ್ದು ಅತಿ ಅವಶ್ಯಕವಾಗಿದೆ.

ಅದಕ್ಕಾಗಿ ಒಂದು ದಾಂಡ್ಯ ಕಾರ್ಯಕ್ರಮಕ್ಕೆ ಎರಡು ಸೌಂಡ್ ಬಾಕ್ಸ್ ಗಳನ್ನ ರಾತ್ರಿ 7 ಗಂಟೆಯಿಂದ 10 ಗಂಟೆಗೆ ಮಾತ್ರಾ ಅಳವಡಿಸಿ, ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಮಿತ್ಯ ಮ್ಯಾಜಿಕ್ ಬಂದ್ ಮಾಡಿ ಎಂದು ತಿಳಿ ಹೇಳಿದರು.

ಅದೇ ರೀತಿ ಇನ್ನುಳಿದ ದಾಂಡ್ಯ ನಡೆಸುವ ಕಮಿಟಿಯವರು ಎರಡು ದಿನದಲ್ಲಿ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಪಿಎಸ್ಐ ಮಂಜುನಾಥ್ ಭಜಂತ್ರಿ, ಎನ್ಎಸ್ ಪಾಟೀಲ್ ಹಾಗೂ ಎಪಿಎಂಸಿ ಠಾಣೆಯ ವ್ಯಾಪ್ತಿಯ ನಗರಗಳ ದಾಂಡಿಯ ಕಾರ್ಯಕ್ರಮದ ಅಧ್ಯಕ್ಷರುಗಳು ಸದಸ್ಯರುಗಳು ಭಾಗವಹಿಸಿದ್ದರು.
***