Belagavi News In Kannada | News Belgaum

ಸೇವಾ ಪಾಕ್ಷಿಕ ನಿಮಿತ್ಯ ಬೂಸ್ಟರ ಡೋಸ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ :ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ದಿನಾಂಕ 24-09-2022 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ನಿಮಿತ್ಯ ಸೇವಾ ಪಾಕ್ಷಿಕ ಕಾರ್ಯಕ್ರಮದಡಿಯಲ್ಲಿ ಬೆಳಗಾವಿಯ ಗಾಂಧೀ ನಗರದಲ್ಲಿ ಉಚಿತ ಬೂಸ್ಟರ ಡೋಸ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾದ ಅನಿಲ ಬೆನಕೆ, ಉತ್ತರ ಮಂಡಳ ಅಧ್ಯಕ್ಷ ವಿಜಯ ಕೋಡಗನೂರ, ನಾಗೇಶ ಲಂಗರಖಾಂಡೆ, ನಗರಸೇವಕ ಶ್ರೇಯಸ ನಾಕಾಡಿ, ವಿಜಯ ಭದ್ರಾ, ಅಶೋಕ ಥೊರಾಟ, ಶೀಲಾ ಗಡಕರಿ, ಸವೀತಾ ಕರಡಿ, ಕಲ್ಪನಾ ಇಟಗಿ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.//////