Belagavi News In Kannada | News Belgaum

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ವಧುವರ ಪಾಲಕರ ಸಮಾವೇಶ

ಅಖಿಲಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಹಾಗೂ ಕೆ.ಎಲ್. ಇ. ಸಂಸ್ಥೆಯ ಸಹಯೋಗದಲ್ಲಿ ವೀರಶೈವ ಲಿಂಗಾಯತ ವಧು ವರ ಅನ್ವೇಷಣ ಕೇಂದ್ರದ ವತಿಯಿಂದ 10 ನೆಯ ವಿಧವೆ, ವಿಧುರ, ವಿಚ್ಛೇದಿತ, ವಿಳಂಬ ಮರುಮದುವೆ ಬಯಸುವ ವಧು ವರ ಪಾಲಕರ ಸಮಾವೇಶವು ಶಿವಬಸವನಗರದ ಲಿಂಗಾಯತ ಭವನದಲ್ಲಿ ಜರುಗಿತು.

ಸಮಾವೇಶವನ್ನು ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದವರು ಮಾತನಾಡುತ್ತಾ ಅಖಿಲಭಾರತ ವೀರಶೈವ ಮಹಾಸಭೆ ಮತ್ತು ಕೆ ಎಲ್ ಇ ಸಂಸ್ಥೆಗಳ ಸಾಮಾಜಿಕ ಕಾಳಜಿ ಮತ್ತು ಸೇವೆ ಅಪೂರ್ವ. ವೀರಶೈವ ಲಿಂಗಾಯತ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಎರಡು ಸಂಸ್ಥೆಗಳು ತನುಮನ ಧನದಿಂದ ಶ್ರಮಿಸುತ್ತಿರುವುದು ಸರ್ವವಿಧಿತ.

ಅಧ್ಯಕ್ಷತೆವಹಿಸಿದ್ದ ವೀರಶೈವ ಲಿಂಗಾಯತ ವಧು ವರ ಅನ್ವೇóಷಣ ಕೇಂದ್ರದ ಅಧ್ಯಕ್ಷರಾದ ಡಾ. ಎಫ್ ವ್ಹಿ ಮಾನ್ವಿ ಯವರು ಬಸವಾದಿ ಶರಣರು ತನು ಮನ ಮತ್ತು ಧನವನ್ನು ಗುರುಲಿಂಗ ಜಂಗಮರಿ ಗೆ ಅರ್ಪಿಸಿದರೆ ಭುವಿಯ ಮೇಲಿನ ಜೀವನ ಸಾರ್ಥಕವಾಗುತ್ತದೆ ಎನ್ನುವ ಮಾತನ್ನು ಆಚರಣೆಗಿಳಿಸಿರುವ ವೀರಶೈವ ಲಿಂಗಾಯತ ಮಹಾಸಭೆ ಮತ್ತು ಕೆ ಎಲ್ ಇ ಸಂಸ್ಥೆಗಳು ಸಮಾಜ ಭಾಂದವರ ಕಲ್ಯಾಣ ಮಹೋತ್ಸವಕ್ಕಾಗಿ ಸಮಾಜ ಭಾಂದವರ ಸಹಾಯ ಸಹಕಾರದೊಂದಿಗೆ ವರ್ಷಕ್ಕೆ ಎರಡು ಸಲ ಬ್ರಹತ್ ವಧು ವರ ಪಾಲಕರ ಸಮ್ಮೇಳನಗಳನ್ನು ಏರ್ಪಡಿಸುತ್ತಿವೆ.

ದುಕಿನಲ್ಲಿ ಯಾವುದೋ ಕಣ್ಣಿಗೆ ಕಾಣದ ಶಕ್ತಿಯ ಕಾರಣದಿಂದ ವೈವಾಹಿಕ ಸಂಬಂದಗಳು

ಆಘಾತಕ್ಕೆ ಒಳಗಾಗಿ ನಲುಗಿದವರಿಗೆ ಹೊಸ ಬದುಕನ್ನು ಕಟ್ಟಿ ಕೊಡಲು ಕಟಿಬದ್ಧವಾಗಿರುವ ವೀರಶೈವ ಲಿಂಗಾಯತ ವಧುವರ ಅನ್ವೇಷಣ ಕೇಂದ್ರವು ನೆರವೇರಿಸುವ ಸಮಾವೇಶಗಳಲ್ಲಿ ಸಾವಿರಾರು ವಧು ವರ ಪಾಲಕರು ಪಾಲ್ಗೊಂಡು ಪ್ರಯೋಜನ ಪಡೆಯುತ್ತಿರುವುದು ಮತ್ತು ವರ್ಷದಿಂದ ವರ್ಷಕ್ಕೆ ಪ್ರಯೋಜನ ಪಡೆಯುತ್ತಿರುವವರ ಸಂಖೈ ಹೆಚ್ಚುತ್ತಿರುವುದು ಕೇಂದ್ರದ ಸಮಾಜ ಭಾಂದವರ ಸೇವೆಯ ಸಾರ್ಥಕತೆಯನ್ನು ಸಾರುತ್ತದೆ ಎಂದರು .

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಶ್ರೇಯೋಭಿವೃಧ್ದಿಗೆ ಅಹರ್ನಿಶಿ ಶ್ರಮಿಸುತ್ತಿರುವ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ಉಪಕಾರವನ್ನು ವೇದಿಕೆ ಮೇಲಿನ ಗಣ್ಯರು ಶ್ರಮಿಸಿಕೊಂಡರು.

ಪ್ರಾರಂಭದಲಿ  ಶರಣೆ ಆಶಾ ಯಮಕನಮರಡಿ ಪ್ರಾರ್ಥಿಸಿದರು ವಧು ವರ ಅನ್ವೇóಷಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಡಾ. ಗುರುದೇವಿ ಹುಲೆಪ್ಪನವರವ್ಮಠರವರು ಪ್ರಾಸ್ತಾವಿಕ ನುಡಿ

ಗಳನ್ನಾಡಿದರು ಡಾ. ಭಾರತಿ ಮಠ ದ ವಂದಿಸಿದರು ಸಮಾವೇಶದಲ್ಲಿ ಶ್ರೀಮತಿ ಜಯಶೀಲಾ ಬ್ಯಾಕೊಡಿ ಶ್ರೀಮತಿ ಸುಧಾ ಪಾಟೀಲ ಶ್ರೀಮತಿ  ಜ್ಯೋತಿ ಬದಾಮಿ ಮುಂತಾದವರು ಉಪಸ್ಥಿತರಿದ್ದರು ಸಮಾವೇಶದಲ್ಲಿ ನೂರಾರು ವಧು ವರ ಪಾಲಕರು ಉಪಸ್ಥಿತರಿದ್ದು ಪ್ರಯೋಜನ ಪಡೆದರು.//////