Belagavi News In Kannada | News Belgaum

ಉಮೇಶ್ ಕತ್ತಿ ನಿಧನ ಹಿನ್ನೆಲೆ ಸರಳವಾಗಿ ದಸರಾ ಆಚರಣೆಗೆ ನಿರ್ಧಾರ: ಹುಕ್ಕೇರಿ ಹಿರೇಮಠ ಶ್ರೀ

ಬೆಳಗಾವಿ: ಹುಕ್ಕೇರಿ ಮತಕ್ಷೇತ್ರದ ಶಾಸಕ ಹಾಗೂ ಸಚಿವರಾಗಿದ್ದ ಉಮೇಶ್ ಕತ್ತಿ ಅವರು ಅಕಾಲಿಕ ನಿಧನರಾದ ಹಿನ್ನೆಲೆ ಹುಕ್ಕೇರಿ ಹಿರೇಮಠದ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹುಕ್ಕೇರಿ ಹಿರೇಮಠದ  ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ಹುಕ್ಕೇರಿ ಹಿರೇಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ನಂತರದಲ್ಲಿ ಹುಕ್ಕೇರಿ ಹಿರೇಮಠ ದಸರಾ ಉತ್ಸವ ಉತ್ತರ ಕರ್ನಾಟಕ  ಭಾಗದಲ್ಲಿ ಹೆಸರಾಗಿದೆ. ಪ್ರತಿ ವರ್ಷ ವಿಭಿನ್ನವಾದ ಕಾರ್ಯಕ್ರಮದ ಮೂಲಕ ಹಿರೇಮಠದ ದಸರಾ ಉತ್ಸವ ವೈಶಿಷ್ಟ್ಯ ಹಾಗೂ ಅದ್ದೂರಿಯಾಗಿ ನಡೆದು ಬಂದಿತ್ತು. ದಿವಂಗತ ಉಮೇಶ್ ಕತ್ತಿ ಅವರು ಹಿರೇಮಠದ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಅವರ ನಿಧನದ ಹಿನ್ನೆಲೆ ಸರಳವಾಗಿ ದಸರಾ ಆಚರಣೆಗೆ  ನಿರ್ಧರಿಸಲಾಗಿದೆ ಎಂದರು.
ಧಾರ್ಮಿಕವಾಗಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರ ನವರಾತ್ರಿ ಉತ್ಸವ ಸರಳವಾಗಿ ಜರುಗಲಿದೆ. ಶ್ರೀ ಮಠದಲ್ಲಿ 108 ವಟುಗಳು, ಪುರೋಹಿತರು ಹಾಗೂ ಭಕ್ತರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿ, ವಿಧಾನಗಳು ಜರುಗಲಿವೆ. ವಿಶೇಷವಾಗಿ ಬ್ರಾಹ್ಮಣ ಹಾಗೂ ವೀರಶೈವ ಪುರೋಹಿತರು ಸೇರಿಕೊಂಡು ಒಂಭತ್ತು ದಿನಗಳ ಕಾಲ ಚಂಡಿಕಾಯಾಗ ನಡೆಸಲಿದ್ದಾರೆ ಎಂದರು.///////