Belagavi News In Kannada | News Belgaum

ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು ಆಕಾಶ್ ಬೈಜೂಸ್‍ನಿಂದ ಎಲ್ಲರಿಗೂ ಶಿಕ್ಷಣ ಪ್ರಾರಂಭ  

ಬೆಳಗಾವಿ : ಆಕಾಶ್ ಬೈಜೂಸ್, ಖಾಸಗಿ ಕೋಚಿಂಗ್ ರಂಗದಲ್ಲಿ ವಿದ್ಯಾರ್ಥಿನಿಯರ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಕಡೆಗೆ ಪ್ರಮುಖ ಹೆಜ್ಜೆಯನ್ನು ಇಡುತ್ತಿದೆ. ‘ಎಲ್ಲರಿಗೂ ಶಿಕ್ಷಣ’ ದ ಮೂಲಕ ಉನ್ನತ ಶಿಕ್ಷಣ, ರಾಷ್ಟ್ರವ್ಯಾಪಿ ಯೋಜನೆಯಾದ ಎನ್ ಇಇಟಿ ಮತ್ತು ಜೆಇಇ ಕೋಚಿಂಗ್ ಮತ್ತು ಸುಮಾರು 2,000 ಬಡ ವರ್ಗದ ಗಿII-ಘಿII ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತದೆ.

ಯೋಜನೆಯ ಪ್ರಕಾರ, ಗುರುತಿಸಲಾದ ಎಲ್ಲಾ ವಿದ್ಯಾರ್ಥಿಗಳು ಆಕಾಶ್ ಬೈಜೂಸ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ – 2022 (ಎ ಎನ್ ಟಿ ಎಚ್ ಇ 2022), ಪ್ರಮುಖ ವಿದ್ಯಾರ್ಥಿವೇತನ ಪರೀಕ್ಷೆಗೆ ಹಾಜರಾಗುತ್ತಾರೆ. ಇದು 2022ರ ನವೆಂಬರ್ 5 ರಿಂದ 13 ರ ನಡುವೆ ದೇಶಾದ್ಯಂತ ಆನ್ಲೈನ್ ಮತ್ತು ಆಫ್ಲೈನ್ ಮೋಡನಲ್ಲಿ ನಡೆಯಲಿದೆ. 2,000 ವಿದ್ಯಾರ್ಥಿಗಳಿಗೆ ವಿಶೇಷ ಪರಿಗಣನೆಗಳ ಆಧಾರದ ಮೇಲೆ ಆಕಾಶ್ ಬೈಜೂಸ್ ಹೆಚ್ಚು ಬೇಡಿಕೆಯಿರುವ ಎನ್ ಇಇಟಿ ಮತ್ತು ಐಐಟಿ-ಜೆಇಇ ಕೋಚಿಂಗ್ ಕಾರ್ಯಕ್ರಮಗಳಿಗೆ ಉಚಿತ ತರಬೇತಿ ನೀಡಲಿದೆ.

‘ಎಲ್ಲರಿಗೂ ಶಿಕ್ಷಣ’ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಆಕಾಶ್ ಬೈಜೂಸ್ ನ ವ್ಯವಸ್ಥಾಪಕ ನಿರ್ದೇಶಕ .ಆಕಾಶ್ ಚೌಧರಿ, ಈ ಕೋಚಿಂಗ್ ಪೆÇ್ರೀಗ್ರಾಂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಹೆಣ್ಣುಮಕ್ಕಳು ಶಿಕ್ಷಣಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ‘ಎಲ್ಲರಿಗೂ ಶಿಕ್ಷಣ’ದ ಮೂಲಕ ಈ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಿಗೆ ತರಬೇತಿ ನೀಡಿ ಅವರ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅವಕಾಶಗಳನ್ನು ವಿಸ್ತರಿಸಲು ನಾವು ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದರು.

ಎ ಎನ್ ಟಿ ಎಚ್ ಇ ಒಂದು ಗಂಟೆಯ ಪರೀಕ್ಷೆ. ಎ ಎನ್ ಟಿ ಎಚ್ ಇ ಆನ್ಲೈನ್ ಪರೀಕ್ಷೆಯು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 7ರ ಮಧ್ಯೆ ನಡೆಯಲಿದೆ. ಆಫ್ಲೈನ್ ಪರೀಕ್ಷೆ ನವೆಂಬರ್ 6 ಮತ್ತು 13, 2022 ರಂದು ಎರಡು ಸೆಷನ್ ಗಳಲ್ಲಿ ನಡೆಯಲಿದೆ. ಬೆಳಿಗ್ಗೆ 10:30ರಿಂದ 11:30  ಮತ್ತು ಸಂಜೆ 4ರಿಂದ 5. ಆಕಾಶ್ ಃಙಎU’S ನ ಎಲ್ಲಾ 285 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ತಮಗೆ ಅನುಕೂಲಕರವಾದ ಒಂದು ಗಂಟೆಯ ಸ್ಲಾಟ್ ಅನ್ನು ಆಯ್ಕೆ ಮಾಡಬಹುದು.

ಎ ಎನ್ ಟಿ ಎಚ್ ಇ ಒಟ್ಟು 90 ಅಂಕಗಳನ್ನು ಹೊಂದಿರುತ್ತದೆ. ಇದು 35 ಬಹು-ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದೆ. ಅದು ಗ್ರೇಡ್ ಅನ್ನು ಆಧರಿಸಿದೆ ಮತ್ತು ವಿದ್ಯಾರ್ಥಿಗಳು ಅಪೇಕ್ಷಿಸುವ ಸ್ಟ್ರೀಮ್‍ಗಳನ್ನು ಹೊಂದಿದೆ. ಗಿII-Iಘಿ ತರಗತಿಯ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮಥ್ರ್ಯದ ವಿಷಯಗಳನ್ನು ಒಳಗೊಂಡಿದೆ. ವೈದ್ಯಕೀಯ ಶಿಕ್ಷಣವನ್ನು ಬಯಸುವ ಘಿ ತರಗತಿಯ ವಿದ್ಯಾರ್ಥಿಗಳಿಗೆ, ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಮಾನಸಿಕ ಸಾಮಥ್ರ್ಯದ ವಿಷಯಗಳನ್ನು ಒಳಗೊಂಡಿದೆ.  ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮಥ್ರ್ಯದ ವಿಷಯಗಳಿವೆ. ಎನ್ ಇಇಟಿ ಬಯಸುವ ಘಿI-ಘಿII ತರಗತಿಯ ವಿದ್ಯಾರ್ಥಿಗಳಿಗೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಿಂದ ಮತ್ತು ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಿಂದ ಪ್ರಶ್ನೆಗಳು ಇರುತ್ತವೆ.//////