Belagavi News In Kannada | News Belgaum

ಬೆಳಗಾವಿ ದಸರಾ ಉತ್ಸವÀವು ವಿಭಿನ್ನವಾದುದು : ಅನಿಲ ಬೆನಕೆ

ಬೆಳಗಾವಿ :  ದಸರಾ ಉತ್ಸವವನ್ನು ಮೈಸೂರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಾರೆ ಆದರೆ ಬೆಳಗಾವಿಯ ಜನರು ದಸರಾ ಉತ್ಸವವನ್ನು ಗಾರ್ಬಾ, ದಾಂಡಿಯಾ ಹೀಗೆ ಬೇರೆ ಬೇರೆ ಮನರಂಜನಾ ಕಾರ್ಯಕ್ರಮ ಹಾಗೂ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಬೆಳಗಾವಿಯ ದಸರಾ ಉತ್ಸವವಕ್ಕೆ ಮಹಾರಾಷ್ಟ್ರ, ಗುಜರಾತ ಮತ್ತು ರಾಜಸ್ಥಾನ ರಾಜ್ಯಗಳ ಪ್ರಭಾವ ಹೆಚ್ಚಾಗಿದೆ ಎಂದು ಶಾಸಕ ಅನಿಲ ಬೆನಕೆ ಇಂದಿಲ್ಲಿ ಹೇಳಿದರು.
ರೋಟರಿ ಕ್ಲಬ್ ಆಫ್ ಬೆಳಗಾಮ್ ಮಿಡ್ ಟೌನ್ ದವರು ನಿನ್ನೆ ದಿ. 26 ಸೋಮವಾರದಂದು ಖಾನಾಪೂರ ರಸ್ತೆಯ ಜಕ್ಕೇರಿ ಹೊಂಡದ ಹತ್ತಿರವಿರುವ ಸಂತ ತುಕಾರಾಮ್ ಮಹರಾಜ್ ಸಂಸ್ಕøತಿ ಭವನದಲ್ಲಿ ದಸರಾ ಉತ್ಸಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆನಕೆಯವರು ಮೇಲಿನಂತೆ ಹೇಳಿದರು.
ಮುಂದೆ ಮಾತನಾಡುತ್ತ ಬೆನಕೆಯವರು, ನಾನು ಎಂ.ಎಲ್.ಎ.ಯಾದ ನಂತರ ಶಿವಾಜಿ ಜಯಂತಿ, ಬಸವ ಜಯಂತಿ, ಗಣೇಶ ಹಬ್ಬದ ಸಂದರ್ಭದಲ್ಲಿ ಎಲ್ಲಿಯೂ ಕಲ್ಲು ತೂರಾಟವಾದ ಉದಾಹರಣೆಗಳು ಕಾಣಸಿಗುವುದಿಲ್ಲ. ಭಾಷೆಗಳ ನಡುವೆ, ಧರ್ಮಗಳ ನಡುವೆ ಸಾಮರಸ್ಯವನ್ನು ನಾವೀಗ ಕಾಣುತ್ತಿದ್ದೇವೆ ಎಂದು ಹೇಳಿದರು.
ದೇಶದ ತುಂಬೆಲ್ಲಿ ಕೊರೊನಾ ಸಂಕಷ್ಟ ಅನುಭವಿಸುತ್ತಿದ್ದಾಗ, ಮನೆ ಬಿಟ್ಟು ಹೊರಬರಲಾಗದಂತಹ ಸಂದರ್ಭದಲ್ಲಿ ಅತಿ ಬಡುವರು ಹಾಗೂ ನಿಜವಾಗಲೂ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಹಲವಾರು ಜೀವಗಳನ್ನು ಉಳಿಸಿದ ಶ್ರೆಯಸ್ಸು ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್‍ಟೌನ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಜಿಲ್ಲಾ ಗವರ್ನರ್ ರೊ. ಬಬನ ದೇಶಪಾಂಡೆ ಭಾರತದ ತುಂಬೆಲ್ಲ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ನಮ್ಮ ಹಬ್ಬವೇ ಆಗಿರಲಿ ಅಥವಾ ಬೇರೆ ಬೆರೆ ಪ್ರದೇಶದ ಹಬ್ಬಗಳೇ ಇರಲಿ ಅವುಗಳನ್ನು ನಾವು ಪ್ರೀತಿಸಬೇಕು. ಆಚರಿಸಬೇಕು. ಇದರಿಂದ ರಾಜ್ಯ ರಾಜ್ಯದ ಜನರ ಮಧ್ಯದಲ್ಲಿಯ ಸ್ನೇಹ ಬೆಳೆಯುತ್ತದೆ, ಪ್ರೀತಿಯುಂಟಾಗುತ್ತದೆ ಎಂದು ಹೇಳಿದ ಅವರು ರೋಟರಿ ಕ್ಲಬ್ ಆಫ್ ಬೆಳಗಾಮ್ ಮಿಡ್ ಟೌನ್ ದವರು ಯಾವುದೇ ಫಲಾಪೇಕ್ಷೆಯಿಲ್ಲದೇ ಸಮಾಜಕ್ಕಾಗಿ ದುಡಿಯುವವರು ಎಂದು ಹೇಳಿದರು.
ಹಲವಾರು ಸಾಂಸ್ಕøತಿಕ ಕಾರ್ಯಕ್ರಮ, ಸ್ಫರ್ದೆಗಳು ಈ ಸಂದರ್ಭದಲ್ಲಿ ಜರುಗಿದವವು. ರೂಪಾ ದೇಶಪಾಂಡೆ ಪ್ರಾರ್ಥಿಸಿದರು. ಆನಂದ ಗುಮಾಸ್ತೆ ವಂದಿಸಿದರು. ವಿಜಯ ಪೂಜಾರ ಸ್ವಾಗಿಸಿದರು. ಯಷಿತಾ ಪೂಜಾರ ನಿರೂಪಿಸಿದರು
ಡಾ. ವಿಜಯ ಪುಜಾರ, ಸತೀಶ ಮಿಠಾರೆ, ಅಶೋಕ ಬದಾಮಿ, ಎಂ. ವಿ. ಜರರ್ತಾರಕರ, ನೀತಾ ಬೀಡಿಕರ, ಗುಲಾಬಚಂದ ಚೌಗಲೆ, ಚಂದ್ರಕಾಂತ ಬಾಂಡಗೆ, ರಾಜೀವ ದೇಶಪಾಂಡೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.//////