Belagavi News In Kannada | News Belgaum

ರುಂಡವಿಲ್ಲದ ಮುಂಡ ಖತರ್ನಾಕ ಆರೋಪಿಗಳನ್ನ ಜೈಲಿಗಟ್ಟಿದ ಹುಕ್ಕೇರಿ ಪೋಲಿಸರು

ಹುಕ್ಕೇರಿ:  ರುಂಡವಿಲ್ಲದ ಮುಂಡ ಖತರ್ನಾಕ ಆರೋಪಿಗಳನ್ನ ಜೈಲಿಗಟ್ಟಿದ ಹುಕ್ಕೇರಿ ಪೋಲಿಸರು. ಪೊಲೀಸ್ ಠಾಣಾ ಗುಡಸ ಗ್ರಾಮದ ಸರಹದ್ದಿನಲ್ಲಿ ಘಟಪ್ರಭಾ ನದಿಯಲ್ಲಿ ತೇಲಿ ಬಂದ ಅಪರಿಚಿತ ಬಾಲಕನ ರುಂಡವಿಲ್ಲದ ಮುಂಡ ಪತ್ತೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಎಂದು ಬೆಳಗಾವಿಯ ಎಸ್ ಪಿ ಡಾ. ಸಂಜೀವ್ ಪಾಟೀಲ್ ಬೆಳಗಾವಿ ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಎಸ್‌ಪಿ ಡಾ. ಸಂಜೀವ್ ಪಾಟೀಲ್ ರವರು ಹುಕ್ಕೇರಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಶಿರಢಾಣ ಜಂಗಟಿಹಾಳ ಗ್ರಾಮದ ಘಟಪ್ರಭಾ ನದಿಯಲ್ಲಿ ಅಪರಿಚಿತ ಬಾಲಕನ ರುಂಡವಿಲ್ಲದ ಮುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ೧೦ ರಿಂದ ೧೨ ವರ್ಷದ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಗೆ ಸಂಬಂಧಿಸಿದ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಪರಿಶೀಲನೆ ನಡೆಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆ ಬಾಲಕನ ಸೊಂಟಕ್ಕೆ ಕಟ್ಟಿದ ದಾರ ನೋಡಿದಾಗ ಅದು ಶಾಲಾ ಟೈ ಎಂದು ಕಂಡುಬಂತು. ಈ ಕುರಿತಂತೆ ಹುಕ್ಕೇರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರು. ಇನ್ನು ಪ್ರಕರಣದ ತನಿಖೆ ವೇಳೆ ಯಮಕನಮರ್ಡಿ ಪೋಲೀಸ್ ಠಾಣೆಯಲ್ಲಿ ದಾಖಲಾದ ಈ ಬಾಲಕನ ಕಾಣೆಯಾದ ಪ್ರಕರಣಕ್ಕೆ ಹೊಂದಾಣಿಕೆಯಾಗಿದ್ದು ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ ಡಾ. ಸಂಜೀವ್ ಪಾಟೀಲ್, ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಪ್ರಕರಣ ಬೇಧಿಸಲು ಕಾರ್ಯಪ್ರವೃತ್ತರಾಗಿದ್ದಾರು. ಈ ಪ್ರಕರಣ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಬಾಲಕನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.

ಇನ್ನು ಇದೇ ವೇಳೆ ಆರೋಪಿ ನೂರುದ್ದಿನ್ ಕೊಣ್ಣೂರು, ಈ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ತನ್ನ ಸ್ನೇಹಿತ ಹನುಮಂತ ದೇವನೂರು ಎಂಬಾತನ ಸಹಾಯ ಪಡೆದಿದ್ದ. ಈ ವೇಳೆ ಸಾಕ್ಷ್ಯ ನಾಶಕ್ಕೂ ಪ್ರಯತ್ನಿಸಿದ್ದಾನೆ. ಬಾಲಕನ ರುಂಡವನ್ನು ಕತ್ತರಿಸಿ ಶಾಲಾ ಸಮವಸ್ತ್ರವನ್ನು ಬಿಚ್ಚಿ ಬ್ಯಾಗ್ ಸಮೇತ ಕಿತ್ತುಕೊಂಡು ಕೊಲೆ ಮಾಡಿದ್ದಾನೆ. ಇನ್ನು ಶಾಲಾ ಬಾಲಕನ ಸೈಕಲ್‌ನ್ನು ಹೊಸುರ ಗ್ರಾಮದ ಒಂದು ಬಾವಿಗೆ ಎಸೆದಿದ್ದಾನೆ. ಈ ಮಾಹಿತಿ ಪಡೆದ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇನ್ನು ಬಾಲಕನ ರುಂಡ ಪತ್ತೆಗೆ ಹರಸಾಹಸ ನಡೆಸಿದ್ದು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ ಎಂದರು.
ಇನ್ನು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಗೋಕಾಕ ಡಿಎಸ್‌ಪಿ ಮನೋಜಕುಮಾರ ನಾಯಿಕ ಹಾಗೂ,ಹುಕ್ಕೇರಿ ಸರ್ಕಲ್ ಇನ್ಸ ಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್, ಯಮಕನಮರಡಿ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ ಛಾಯಾಗೋಳ್, ಸಂಕೇಶ್ವರ ಪೊಲೀಸ್ ಇನ್ಸ್ ಪೆಕ್ಟರ್ ಪ್ರಲ್ಹಾದ್ ಚೆನ್ನಗಿರಿ,ಘಟಪ್ರಭಾ ಇನ್ಸ್ಪೆಕ್ಟರ್ ಶ್ರೀಶೈಲ ಬ್ಯಾಕೊಡ ಹಾಗೂ ಹುಕ್ಕೇರಿ ಪೋಲಿಸ್ ಠಾಣೆಯ ಪೋಲಿಸ ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರೆ ಅಜೀತ ನಾಯಿಕ ರವಿ ಢಂಗ ಉಮೇಶ ಅರಬಾಂವಿ ಮುಸಾ ಅತ್ತಾರ ಎ ಎಸ್ ಸನದಿ ಗಜಾನಂದ ಕಾಂಬಳೆ ಮೈಲಾರಿ ಬೆಣ್ಣಿ ಚೌಗಲಾ ಅಮೀತ ಶಿರಗನ್ನವರ ರವರ ಕಾರ್ಯವನ್ನು ಎಸ್ ಪಿ ರವರು ಶ್ಲಾಘಿಸಿದ್ದಾರೆ.