Belagavi News In Kannada | News Belgaum

ರೋಡ ರಾಬರಿ ಢಕಾಯಿತರು ತಲೆಮರೆಸಿಕೊಂಡ ಆರೋಪಿಗಳ ಪತ್ತೆ

ಘಟಪ್ರಭಾ: ರೋಡ ರಾಬರಿ ಢಕಾಯಿತರು ರಾಡನಿಂದ ಹಲ್ಲೆ ಚಿನ್ನ ಹಣ ಕದ್ದು ಪರಾರಿಯಾಗಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಘಟಪ್ರಬಾ ಪೋಲಿಸರು. ಪೋಲಿಸರು.ದಿನಾಂಕ: 17/09/2022 ರಂದು ಪಿರ್ಯಾದಿ ಸಂಜೀವ ಸದಾನಂದ ಪೋತದಾರ ಸಾ ಸಿಂದಿದಿಕುರಬೇಟ ತಾಲುಕ ಗೋಕಾಕ ಇವರು ಘಟಪ್ರಭಾ ಪೋಲಿಸ್ ಠಾಣೆಗೆ ಹಾಜರಾಗಿ ಪಿರ್ಯಾದಿ ಕೊಟ್ಟದ್ದು ಅದರಲ್ಲಿ ಪಿರ್ಯಾದಿ ಹಾಗೂ ಅವನ ತಮ್ಮ ರವೀಂದ್ರ ಸದಾನಂದ ಪೊತದಾರ ಇವರಿಬ್ಬರೂ, ಎಂದಿನಂತೆ ತಮ್ಮ ಪತ್ತಾರಿಕೆ ಕೆಲಸ ಮುಗಿಸಿಕೊಂಡು ತಮ್ಮ ಬಳಿ ಇದ್ದ ಬಂಗಾರದ ಆಭರಣಗಳು ಹಾಗೂ ರೋಖ ಹಣ ಬ್ಯಾಗಿನಲ್ಲ ಹಾಕಿಕೊಂಡು, ಗೋಕಾಕ ಶಹರದಿಂದ ತಮ್ಮ ಸ್ವಂತ ಊರಾದ ಶಿಂದಿಕುರಬೇಟಗೆ ಹೋರಟಿದ್ದಾಗ, ಘಟಪ್ರಭಾ ಪೊಲೀಸ್ ಠಾಣೆಯ ಹದ್ದೆಯ ಲೋಳಸೂರಿನ ಕರೆಮ್ಮ ಗುಡಿಯ ಸಮೀಪ ಯಾರೋ 8 ಜನ ಆರೋಪಿತರು 4 ಮೋಟಾರ ಸೈಕಲ ಮೇಲೆ ಬಂದು ಅಡ್ಡಗಟ್ಟಿ ನಿಲ್ಲಸಿ, ಪಿರ್ಯಾದಿ ಹಾಗೂ ಆತನ ಸಹೋದರನಿಗೆ ರಾಡ್‌ ನಿಂದ ಹಲ್ಲೆ ಮಾಡಿ, ಗಾಯಪಡಿಸಿ ಅವರ ಬಳಿ ಇದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ ಅಂತಾ ಪಿರ್ಯಾದಿ ನೀಡಿದ್ದು, ಈ ಸಂಬಂಧ ಘಟಪ್ರಭಾ ಪೊಲೀಸ್‌ ಠಾಣಿಯಲ್ಲಿ ಕಲಂ 397 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಈ ಪ್ರಕರಣವು ಘೋರ ಸ್ವರೂಪದ್ದು ಆಗಿದ್ದರಿಂದ ಡಿಎಸ್‌ಪಿ ಗೋಕಾಕ ಮನೋಜಕುಮಾರ ನಾಯಿಕ ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಿ.ಐ. ಘಟಪ್ರಭಾ ಶ್ರಿಶೈಲ ಬ್ಯಾಕೊಡ ರವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ, ಪ್ರಕರಣವನ್ನು ಶೀಘ್ರವಾಗಿ ಭೇದಿಸಲು ಮಾನ್ಯ ಎಸ್ಪಿ ಪಾಟೀಲರು ನಿರ್ದೇಶನ ನೀಡಿರುತ್ತಾರೆ.

ತನಿಖಾಧಿಕಾರಿಯವರು ತಮಗೆ ದೊರೆತ ಮಾಹಿತಿ ಮೇರೆಗೆ ದಿನಾಂಕ: 24-09-2022 ರಂದು 6 ಜನ ಆರೋಪಿತರನ್ನು ವಶಕ್ಕೆ ಪಡೆದು ದಸ್ತಗೀರ ಮಾಡಿದ್ದು, ಅವರಿಂದ 240 ಗ್ರಾಂ ಚಿನ್ನ, 44,000/ ರೋಕ ಹಣ, ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್, 3 ಮೋಟಾರ್ ಸೈಕಲ್‌ಗಳು, ಕೃತ್ಯ ಎಸಗಿದ ಕಾಲಕ್ಕೆ ಆರೋಪಿತರ ಮೈಮೇಲೆ ಇದ್ದ ಜಾಕೇಟ್‌ಗಳನ್ನು ಮತ್ತು 01 ಮೊಬೈಲ್ ವಶಪಡಿಸಿಕೊಂಡಿದ್ದು ಇರುತ್ತದೆ. ನಂತರ ದಿನಾಂಕ: 27-09-2022 ರಂದು ಇನ್ನೂಂದ 4 ಜನ ಆರೋಪಿತರನ್ನು ದಸ್ತಗೀರ ಮಾಡಿ, ಅವರಿಂದ 71 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು ಇರುತ್ತದೆ. ಹೀಗೆ ಈ ಪ್ರಕರಣದಲ್ಲಿ ಒಟ್ಟು 35,50,000/ ರೂ ಕಿಮ್ಮತ್ತಿನ ಚಿನ್ನ, ಸುಮಾರು 6,00,000/- ಕಿಮ್ಮತ್ತಿನ ಮೋಟಾರ ಸೈಕಲಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಸದರಿಯವರು ಗೋಕಾಕ ಶಹರದಲ್ಲಿ ಬಂಗಾರ ಅಂಗಡಿಯಿಟ್ಟು ವ್ಯಾಪಾರ ಮಾಡುತ್ತಿದ್ದು, ಅವರು

ದಿನಾಲೂ ಶಿಂದಿಕುರಬೇಟದಿಂದ ಗೋಕಾಕಕ್ಕೆ ಮೋಟಾರ್ ಸೈಕಲ್ ಮೇಲೆ ಹೋಗಿ ಬಂದು ಮಾಡುತ್ತಿದ್ದು,

ಅವರು ಬಂಗಾರ ಅಂಗಡಿ ಹೋಗುವಾಗ ಬಂಗಾರದ ಆಭರಣಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು

ಗೋಕಾಕದಲ್ಲಿ ಇರುವ ಅಂಗಡಿಗೆ ಹೋಗಿ ಅಲ್ಲಿ. ತಮ್ಮ ಬ್ಯಾಗದಲ್ಲಿ ತೆಗೆದುಕೊಂಡು ಹೋದ ಬಂಗಾರದ
ಆಭರಣಗಳನ್ನು ಮಾರಾಟ ಮಾಡಿ ಉಳಿದ ಬಂಗಾರದ ಆಭರಣಗಳನ್ನು ಮತ್ತು ಹಣವನ್ನು ಮರು ರಾತ್ರಿತಮ್ಮೂರಿಗೆ ಬರುವಾಗ ಬ್ಯಾಗಿನಲ್ಲಿ ಹಾಕಿಕೊಂಡು ಒಂದೆ ಮೋಟರ್ ಸೈಕಲ್ ಮೇಲೆ ಇಬ್ಬರೂ, ತಮ್ಮೂರಿಗೆ ಹೋಗುವಾಗ ದಿ: 16,09,2022 ರಂದು ಲೋಳಸೂರ ಹದ್ದಿ ಕರೆಮ್ಮನ ಗುಡಿ ಸಮೀಪ ಯಾರೋ O೮ ಜನ ಆರೋಪಿತರು 4 ಮೋಟರ್ ಸೈಕಲ್ ಮೇಲೆ ಬಂದು ಅಡ್ಡಗಟ್ಟಿ ಪಿರ್ಯಾದಿ ಹತ್ತಿರ ಇದ್ದ ಬ್ಯಾಗ ಕಸಿದುಕೊಂಡು, ಪಿರ್ಯಾದಿ ಮತ್ತು ಅವನ ತಮ್ಮನಿಗೆ ಕಬ್ಬಿನದ ರಾಡದಿಂದ ಬಡಿದು ಗಾಯಪಡಿಸಿರುತ್ತಾರೆ, ಹಾಗೂ ಸುಮಾರು 500 ಗ್ರಾಂ ಬಂಗಾರದ ಆಭರಣಗಳು ಹಾಗೂ ರೋಖ ಹಣ 2,80,000/- ರೂ ಉಳ್ಳ ಪಿರ್ಯಾದಿಯ ಬಳಿ ಇದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 217/2022 ಕಲಂ 397 ಐಪಿಸಿ ನೇದ್ದಕ್ಕೆ ದಾಖಲೆ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶ್ರೀ ಮನೋಜಕುಮಾರ ನಾಯ್ಕ ಡಿ.ಎಸ್.ಪಿ. ಗೋಕಾಕ ರವರ ಮಾರ್ಗದರ್ಶನದಲ್ಲಿ ಪಿ.ಐ. ಘಟಪ್ರಭಾ ಶ್ರೀಶೈಲ್ ಕೆ. ಬ್ಯಾಕೂಡ ಇವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಿ, ಕ್ಷೀಪ್ರಗತಿಯಲ್ಲಿ, ಚಾಣಾಕ್ಷ ರೀತಿಯಿಂದ ತನಿಖೆ ಕೈಕೊಂಡ, ವಿಶೇಷ ತನಿಖಾ ತಂಡಗಳ ಪ್ರಯತ್ನದಿಂದ ‘ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಆರೋಪಿತರಾದ 1]ಸಿದ್ದಾರ್ಥ@ಸಿದ್ದು, ಚಾಂಗದೇವ ಕಡೋಲ್ಲರ ವಯಾ-21 ವರ್ಷ ಸಾ:ಕಣಬರ್ಗಿ ಕೊನವಾಳಗಲ್ಲಿ 2) ಪ್ರದೀಪ ಬಸವರಾಜ ಬೂಶಿ ವಯಾ-21 ವರ್ಷ ಸಾ:ಕಣಬರ್ಗಿ ಕಿತ್ತೂರಕಿಂಡಿ 2ನೇ ಬಸ್‌ನಿಲ್ದಾಣದ ಹತ್ತಿರ 3] ಮಾರುತಿ ರಾಜು ಸಾಳವಂಕೆ ವಯಾ-23 ವರ್ಷ ಸಾ:ಕಣಬರ್ಗಿ ಏಕಲವ್ಯನಗರ 41 ಸೌರಭ ಲಕ್ಷಣ ಮಾಲಾ 19 ವರ್ಷ ಸಾ:ಕಣಬರ್ಗಿ ಕೋನವಾಳಗಲ್ಲಿ 5] ನಿವೃತ್ತಿ ಅಪ್ಪಾರಾವ ಮುತಗೇಕರ ವಯಾ-24 ವರ್ಷ ಸಾ||ಶಿನ್ನೊಳಿ ಮಾರುತಿಗಲ್ಲ 6] ಅನಿಲ ರಾಮಚಂದ್ರ ಪತ್ತಾರ ಸಾ; ಮೆಳವಂಕಿ 7) ಪಂಕಜ ಖಾಂಡೇಕರ, ಸಾ: ಶಿನ್ನೋಳಿ 8) ವಿಜಯ ನಾಗೋಬಾ ಕದಂ, ಸಾ: ಕುದರೆಮನಿ 9) ಸಾಗರ ಪಾಟೀಲ, ಸಾ; ಕುದರೇಮನಿ 10] ಮನೋಹರ ಸೋನಾರ, ಇದರಲ್ಲಿ ಕುರ್ಕವಾಡಿ ಇವರಿಗೆ ದಿ: 24.09.2022 ರಂದು ದಸ್ತಗೀರ ಮಾಡಿದ್ದು ಇರುತ್ತದೆ.

ಇದರಲ್ಲಿ ಆರೋಪಿತನಾದ ಅನಿಲ ರಾಮಚಂದ್ರ ಪತ್ತಾರ ಸಾ: ಮೆಳವಂಕಿ ಇವನು ಪಿರ್ಯಾದಿ ಹಾಗೂ ಅವನ ತಮ್ಮ ಗೋಕಾಕದಿಂದ ಶಿಂಧಿಕುರಬೆಟಕ್ಕೆ ದಿನಾಲು ಮೋಟಾರ್ ಸೈಕಲ್ ಮೇಲೆ ಬಂಗಾರದ ಆಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗುವುದನ್ನು ನೋಡಿ ಅವನು ಉಳಿದ ಆರೋಪಿತರಿಗೆ ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮ ರವೀಂದ್ರ ಇವರು ಬಂಗಾರದ ಆಭರಣ ಹಾಗೂ ಹಣವನ್ನು ಬ್ಯಾಗಿನಲ್ಲ ಹಾಕಿಕೊಂಡು ದಿನಾಲೂ ಗೋಕಾಕದಿಂದ ತಮ್ಮ ಅಂಗಡಿ ಬಂದ್‌ ಮಾಡಿಕೊಂಡು ಮೋಟಾರ್ ಸೈಕಲ್ ಮೇಲೆ ಶಿಂಧಿಕುರಬೆಟಕ್ಕೆ ಹೋಗುವ ಮಾಹಿತಿ ತಿಳಿಸಿ ಅವರೆಲ್ಲರೂ ಕೂಡಿಕೊಂಡು ದರೋಡೆ ಮಾಡುವ ಒಳಸಂಚು ಮಾಡಿಕೊಂಡು ದಿ: 16.09,2022 ರಂದು ರಾತ್ರಿ 8.25 ಗಂಟೆಯ ಸುಮಾರಿಗೆ ಲೋಳಸೂರ ಗ್ರಾಮದ ಕರೆಮ್ಮನ ಗುಡಿಯ ಹತ್ತಿರ ಘಟಪ್ರಭಾ ಗೋಕಾಕ ರಸ್ತೆಯ ಮೇಲೆ ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮ ಗೋಕಾಕದಿಂದ ತಮ್ಮ ಮೋಟರ್ ಸೈಕಲ್ ಮೇಲೆ ಬಂಗಾರದ ಆಭರಣಗಳು ಮತ್ತು ಹಣ ಇದ್ದ ಬ್ಯಾಗ ತೆಗೆದುಕೊಂಡು ಶಿಂದಿಕುರಬೆಟಕ್ಕೆ ಹೋಗುವಾಗ ಆರೋಪಿತರು ಅವರಿಗೆ ಅಡ್ಡಗಟ್ಟಿ ನಿಲ್ಲಸಿ ಅವರಬ್ಯಾಗನ್ನು ಕಸಿದುಕೊಂಡು ಅವರಿಗೆ ರಾಡದಿಂದ ಬಡಿದು ಗಾಯಪಡಿಸಿ ತಮ್ಮ ತಮ್ಮ ಮೋಟಾರ್ ಸೈಕಲ್ ತೆಗೆದುಕೊಂಡು ಹೋಗಿದ್ದು ನಂತರ ದಸ್ತಗೀರದ ಆರೋಪಿತರ ಕಡೆಯಿಂದ ಬಂಗಾರದ ಆಭರಣಗಳನ್ನು ಮತ್ತು ರೋಖ ಹಣ 44,000/- ರೂ ಹಾಗೂ ಘಟನೆಗೆ ಉಪಯೋಗಿಸಿದ ರಾಡ ಮತ್ತು ಘಟನೆಗೆ ಉಪಯೋಗಿಸಿದ 3 ಮೋಟರ್ ಸೈಕಲ್‌ಗಳನ್ನು ಹಾಗೂ ಆರೋಪಿತರು ಘಟನೆಯ ಕಾಲಕ್ಕೆ ತಮ್ಮ ಮೈಮೇಲೆ ಇದ್ದ ಜಾಕೆಟಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಇದರಲ್ಲಿ ಇನ್ನೂ ಕೆಲವು ಆರೋಪಿತರನ್ನು ದಸ್ತಗೀರ ಮಾಡುವುದು ಅವರ ಕಡೆಯಿಂದ ರೋಖ ಹಣ ಹಾಗೂ ಇನ್ನೂ ಕೆಲವು ಬಂಗಾರದ ಆಭರಣಗಳನ್ನು ಜಪ್ತ ಮಾಡುವುದು ಬಾಕಿ ಇರುತ್ತದೆ. ಇದರ ಬಗ್ಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಅಧಿಕಾರಿ ಹಾಗೂ ಸಿಬ್ಬಂದಿ ಜನರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಅದೆ.

ಈ ಪ್ರಕರಣವನ್ನು ಭೇದಿಸಿದ ತನಿಖಾ ತಂಡಕ್ಕೆ ಮಾನ್ಯ ಎಸ್.ಪಿ.ಸಾಹೇಬರು ಬೆಳಗಾವಿ ರವರು ತನಿಖಾ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿ ಸೂಕ್ತ ಬುಹುಮಾನವನ್ನು ಮಂಜೂರಿಸಿರುತ್ತಾರೆ.ಕಾರ್ಯಾಚರಣೆಯಲ್ಲಿ ಘಟಪ್ರಭಾ ಪೋಲಿಸ ಸಿಬ್ಬಂದಿಗಳಾದ ರಾಮಕೃಷ್ಣ ಗಿಡ್ಡಪ್ಪಗೋಳ ಗೊಣಿ,ನಾಯಿಕ, ಕೋಳಿ,ಕರಣಿ,ಗಜಾನಂದ ಕಾಂಬಳೆ,ಪಡತಾರೆ,ಈ ಸಿಬ್ಬಂದಿಗಳು ಪ್ರಕರಣದ ಆರೋಪಿಗಳ ಪತ್ತೆಹಚ್ಚಲು ಹಗಲಿರುಳು ಶ್ರಮಿಸಿದ್ದಾರೆ ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ಶ್ರೀ ಸಂಜೀವ ಪಾಟೀಲರು ಪ್ರಂಶಸನೆ ವ್ಯಕ್ತ ಪಡಿಸಿ ಬಹುಮಾನ ಘೊಷಣೆ ಮಾಡಿದ್ದಾರೆ.