Belagavi News In Kannada | News Belgaum

ಎಂದಿನಂತೆ ರಂಗು ತುಂಬಿದ ಆಶ್ರಯ ಕಾಲನಿ ದಾಂಡಿಯಾ ಕಾರ್ಯಕ್ರಮ

ಬೆಳಗಾವಿ : ಶ್ರೀ ಸಾಯಿಬಾಬಾ ದೇವಸ್ಥಾನ ಅಭಿವೃದ್ದಿ ಹಾಗೂ ಸಾರಥಿ ನಗರ, ಆಶ್ರಯ ಕಾಲನಿ ರಹವಾಸಿಗಳ ಪಂಚ್ ಕಮಿಟಿ ಹಾಗೂ ಬದಲಾವಣೆ ಬೆಳಕು, ಮತ್ತು ಜಾನಪದ ಕಲಾ, ಕ್ರೀಡಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದಸರಾ ಹಬ್ಬದ ನಿಮಿತ್ಯ ದಾಂಡಿಯಾ ಹಾಗೂ ಜಾನಪದ ಗೀತೆ ಗೀತಾಂಜಲಿ ಕಾರ್ಯಕ್ರಮ ಸೆಪ್ಟೆಂಬರ್ 26 ರಿಂದ ಎಂದಿನಂತೆ ನಿನ್ನೆ ಕೂಡ ನಡನಡೆಯಿತು
ಅಧ್ಯಕ್ಷತೆ ಶಿವಪ್ಪ ಕಮತ್ಗಿ ಇವರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಾಗೂ ಕೆ ಎಸ್ ಆರ್ ಟಿ ಸಿ ಇಲಾಖೆಯಲ್ಲಿ ಅರವತ್ತು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೈಜು ಬಿಟ್ಸ್ ಸುಡೆ ರವರನ್ನು ಇದೆ ವೇದಿಕೆ ಮೇಲೆ ಕಮಿಟಿಯ ಪರವಾಗಿ ಹಿರಿಯರಿಂದ ಸನ್ಮಾನಿಸಲಾಯಿತು ಮುಖ್ಯ ಅತಿಥಿಗಳಾಗಿ ವೀರಭದ್ರಯ್ಯ ಜಿದ್ದಿ ಮಠ, ಚೆನ್ನಪ್ಪ ವಡ್ಡರ್, ಭೀಮಪ್ಪ ಮೆಲವಂಕಿ, ಕಮಲಾಕ್ಷಿ ಗಸ್ತಿ, ವಿದ್ಯಾನಗರದಿಂದ ಪ್ರಭಾ ಗೊಳ್ಳ, ಬಸವರಾಜ್ ಕಲಾದಗಿ, ಬದಲಾವಣೆ ಬೆಳಕು ಹಾಗೂ ಜಾನಪದ ಕಲಾ ಕ್ರೀಡಾ ಸಂಘದ ಅಧ್ಯಕ್ಷರಾದ ಶ್ರೀಮತಿ ಜನಾಭಾಯಿ ಗುಡಗೇನಟ್ಟಿ, ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿ ಹಾಗೂ ಆಸರೆ ಕಾಲೋನಿ, ಸಾರ್ಥಿ ನಗರ ರಹವಾಸಿಗಳ ಪಂಚ್ ಕಮಿಟಿಯ ಅಧ್ಯಕ್ಷರು ಸತೀಶ್ ಗುಡಗೆನಟ್ಟಿ ಹಾಗೂ ಸಂಘದ ಮತ್ತು ಕಮಿಟಿಯ ಪದಾಧಿಕಾರಿಗಳು ಸುತ್ತ ಮುತ್ತಿನ ನಗರದ ಹಿರಿಯರು ಉಪಸ್ಥಿತರಿದ್ದರು