Belagavi News In Kannada | News Belgaum

ನವರಾತ್ರಿ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಬೆಳಗಾವಿ : ನಗರದ ವಂಟಮೂರಿ ಕಾಲನಿ ಸಾಯಿ ಮಂದಿರ ಹತ್ತಿರವಿರುವ ಶಿವಶಂಕರಯ್ಯ ಸ್ವಾಮಿಗಳು ಹಿರೇಮಠ ಬೆಳಗಾವಿ ಕಾದರವಳ್ಳಿ ಇವರ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ 21ನೇ ವರ್ಷದ ಶ್ರೀದೇವಿ ಪೂಜಾ ಕಾರ್ಯಕ್ರಮ ಸೆ. 26ರಿಂದ ಆರಂಭಗೊಂಡಿದ್ದು. ಅ. 5ರವರೆಗೆ ನಡೆಯಲಿದೆ.
ಈ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಪ್ರತಿದಿನ ಬೆಳಿಗ್ಗೆ 6ಗಂಟೆಗೆ ಶ್ರೀದೇವಿ ಪೂಜೆಯೊಂದಿಗೆ ಪಾರಾಯಣ ನಡೆಯುತ್ತದೆ ಪ್ರತಿದಿನ 7ಗಂಟೆಗೆ ಶ್ರೀ ದೇವಿಯ ಕಥೆಯ ವಿವರಣೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಅ. 2ರಂದು ಬೆಳಿಗ್ಗೆ 8ಗಂಟೆಗೆ ಶ್ರೀವಂದ ಶಂಕರ ಪೂಜೆ, ಸೌಂದರ್ಯ ಲಹರಿ ಗ್ರೂಪ್ ಶಿವಬಸವನಗರ ಇವರಿಂದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಕ್ತಿಮಠ ಶ್ರೀ ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಭಾಗೋಜಿಕೊಪ್ಪ, ತಾರಿಹಾಳದ ಶ್ರೀ ಅಡವೀಶ್ವರ ದೇವರು ಸಾನಿಧ್ಯವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ನಡೆಯಲಿದೆ. ನಂತರ ಮಹಾಪ್ರಸಾದ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕ ಅನಿಲ ಬೆನಕೆ, ಪೋಲಿಸ್ ಇನ್ಸಪೆಕ್ಟರ್ ಸುನಿಲ ಪಾಟೀಲ, ನಗರ ಸೇವಕಿ ಲಕ್ಷ್ಮಿ ಮಹಾದೇವ ರಾಠೋಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಘೇಂದ್ರ ಗೌಡ ಪಾಟೀಲ, ಡಾ. ರವಿ ಪಾಟೀಲ, ಚಂದ್ರಶೇಖರ ಹಿರೇಮಠ, ರವಿ ಪಾಟೀಲ, ಡಾ. ದಿನೇಶ ನಾಶಿಪುಡಿ ಆಗಮಿಸುವರು.
ದಿ. 3ರಂದು ದುರ್ಗಾಷ್ಟಮಿ, ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಲಗ್ನಭಾಗ್ಯಗೋಸ್ಕರ ಉಡಿ ತುಂಬುವ ಕಾರ್ಯಕ್ರಮ ದಿ. 4ರಂದು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ 5ರಂದು ವಿಜಯದಶಮಿ ಕಾರ್ಯಕ್ರಮ ನಡೆಯಲಿದೆ.//////