Belagavi News In Kannada | News Belgaum

ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ಜನ ಸಂವಾದ ಕಾರ್ಯಕ್ರಮ

ಬೆಳಗಾವಿ  :ಇಲ್ಲಿಯ ಮಾರ್ಕಂಡೇಯ ನಗರದಲ್ಲಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜನ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಪಿ. ಮೋಹನ್ ರೆಡ್ಡಿ ಅವರು ಕಾನೂನಿನ ಮಹತ್ವ, ಕಾನೂನನ್ನು ಹೇಗೆ ಗೌರವಿಸಬೇಕು ಮತ್ತು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದರು.

ಮಾರ್ಕಂಡೇಯ ನಗರದಲ್ಲಿ ಸಮೀಕ್ಷೆ ಮತ್ತು ಸಂವಾದ ನಡೆಸಿ ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲಾಯಿತು. ಡಾ.ರವೀಂದ್ರ ತೋಟಗಾರ, ಡಾ.ಪ್ರಕಾಶ ಐಹೊಳೆ, ಸುರೇಶ ಗಾವಣ್ಣವರ, ವೀಣಾ ಹಲವಾಯಿ ಉಪಸ್ಥಿತರಿದ್ದರು. ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕಾನೂನು ನೆರವು ಕೋಶದ ಸಂಯೋಜಕ ಪ್ರೊ.ಚೇತನಕುಮಾರ್‌

ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಮತ್ತು ಅನುಕೂಲಗಳನ್ನು ವಿವರಿಸಿದರು.

ಕೆಎಲ್‌ಎಸ್ ಆರ್‌ಎಲ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಲಕ್ಷ್ಮಿ ಪೂಜಾರ್, ಶಿವಾನಂದ ಬಿಜ್ಜರಗಿ, ಕಾರ್ತಿಕ್ ರೆಡ್ಡಿ, ರುಚಾ ಅಷ್ಟಪುತ್ರೆ, ಶುಭಾಂಗಿ ಪಾಟೀಲ್, ಸುಜೀತ್ ಕದಂ, ಅನಿಲ್ ಗಿಡಗೌಡರ್ ಮತ್ತು ಮಲ್ಲಿಕಾರ್ಜುನ ಪೂಜಾರಿ ಉಪಸ್ಥಿತರಿದ್ದರು.//////