Belagavi News In Kannada | News Belgaum

ಹುಬ್ಬಳ್ಳಿಯಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಸರ್ವೋದಯ ಪಾದಯಾತ್ರೆ

ಹುಬ್ಬಳ್ಳಿಯಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಸರ್ವೋದಯ ಪಾದಯಾತ್ರೆ

ಶ್ರೀ ಮಾಧವಾನಂದ ಪ್ರಭೂಜಿಯವರ ಜನ್ಮೋತ್ಸವದ ನಿಮಿತ್ಯ ಸರ್ವೋದಯ ಪಾದಯಾತ್ರೆ ಅಕ್ಟೋಬರ 2 ರಂದು ಪ್ರಾರಂಭ

 

ಮಹಾತ್ಮಾ ಗಾಂಧಿಜೀಯವರ ಜಯಂತಿ ವಿಶ್ವ ಅಹಿಂಸೆಯ ದಿನ ಮತ್ತು ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ 107 ನೇ ಜನ್ಮೋತ್ಸವದ ಪ್ರಯುಕ್ತ ಶ್ರೀ ಮಾಧವ ರಥೋತ್ಸವ ಭಾವಕ್ಯ ಸರ್ವಧರ್ಮ ಸಮನ್ವಯ ಸತ್ಸಂಗ ಸರ್ವೋದಯ ಪಾದಯಾತ್ರೆಯು ರವಿವಾರ ದಿನಾಂಕ 2 ಅಕ್ಟೋಬರ್ 2022 ಮಹಾತ್ಮ ಗಾಂಧಿಜೀ ಜಯಂತಿಯಿಂದ ಬುಧವಾರ ದಿನಾಂಕ 2 ನವೆಂಬರ್ 2022 ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಜನ್ಮೋತ್ಸವದವರೆಗೆ ಹುಬ್ಬಳ್ಳಿಯಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠದವರೆಗೆ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2 ರಂದು ಹುಬ್ಬಳ್ಳಿಯ ವಿದ್ಯಾ ನಗರದಲ್ಲಿರುವ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ಬೆಳಿಗ್ಗೆ ಹತ್ತು ಗಂಟೆಗೆ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ತಮ್ಮ ಅಮೃತ ಹಸ್ತದಿಂದ ಶ್ರೀ ಮಹಾತ್ಮ ಗಾಂಧಿಜೀ ಹಾಗೂ ಶ್ರೀ ಸದ್ಗುರು ಸಮರ್ಥ ಮಾಧವಾನಂದಪ್ರಭೂಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಪಾದಯಾತ್ರೆಗೆ ಚಾಲನೆ ನೀಡುವರು . ಅಕ್ಟೋಬರ್ 2 ರಂದು ಹೊರಟ ಪಾದಯಾತ್ರೆಯು ತಿಂಗಳ ಪರ್ಯಂತ ಕರ್ನಾಟಕ ಮಹಾರಾಷ್ಟ್ರದೆಲ್ಲೆಡೆ ಸಂಚರಿಸಿ ನವೆಂಬರ್ 1 ರಂದು ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ತಲುಪಿದ ನಂತರ ನವೆಂಬರ್ 2 ರಂದು ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಹಾಗೂ ವಿವಿಧೆಡೆಯಿಂದ ಆಗಮಿಸಿದ ಮಹಾತ್ಮರ ಸಮ್ಮುಖದಲ್ಲಿ ಭವ್ಯ ಮೆರವಣಿಗೆ ಹಾಗೂ ಶ್ರೀ ಮಾಧವಾನಂದ ಪ್ರಭೂಜಿಯವರ ತೊಟ್ಟಿಲೋತ್ಸವ ಕಾರ್ಯಕ್ರಮದೊಂದಿಗೆ ಮಂಗಲಗೊಳ್ಳುವದು. ಶ್ರೀ ಮಾಧವಾನಂದ ಪ್ರಭೂಜಿಯವರು ಮಹಾತ್ಮ ಗಾಂಧಿಜೀಯವರ ಸತ್ಯವೆ ದೇವರೆಂದು ಸಾಕ್ಷಾತ್ಕರಿಸಿಕೊಂಡು ಸತ್ಯ ಅಹಿಂಸೆಯ ಆಧಾರದಮೇಲೆ ದೇಶಕ್ಕೆ ಸ್ವರಾಜವನ್ನು ತಂದುಕೊಟ್ಟರಲ್ಲದೆ ದೇಶದ ಏಕತೆ ಸಮಗ್ರತೆಗಾಗಿ ಶ್ರಮಿಸಿದರು. ಇಂತಹ ಮಹಾ ಪುರುಷರ ಜನ್ಮೋತ್ಸವನ್ನು ಪ್ರತಿ ವರ್ಷ ದೇಶಾದ್ಯಂತ ಆಚರಿಸಲಾಗತ್ತದೆ . ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆದೇಶದಂತೆ ಈ ಪಾದಯಾತ್ರೆ ಹೊರಡುವದು ಈ ಪಾದಯಾತ್ರೆಯಲ್ಲಿ ಶ್ರೀ ಮಾಧವಾನಂದ ಪ್ರಭೂಜಿಯವರ ತತ್ವ ಆದರ್ಶಗಳಾದ ಸರ್ವ ಧರ್ಮ ಸಮನ್ವಯ,ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆ. ಸರ್ವೋದಯ.ಪಾನ ನಿಷೇಧ. ಸ್ವದೇಶಿ ವಸ್ತುಗಳು ಸ್ವದೇಶಿ ವಸ್ತ್ರಗಳನ್ನು ಬಳಸಲು ಜನಜಾಗ್ರತಿ,ವಿಶ್ವ ಶಾಂತಿ ಮುಂತಾದ ಮಹಾನ್ ವಿಚಾರಗಳನ್ನು ಊರುರಿಗೆ ತಿಳಿಸುವದೆ ಈ ಪಾದಯಾತ್ರೆಯ ಉದ್ದೇಶವಾಗಿದೆ. ಈ ಪಾದಯಾತ್ರೆಯಲ್ಲಿ ಇಂಚಗೇರಿ ಸಂಪ್ರದಾಯದ ನಿಯಮದಂತೆ ನಿತ್ಯ ನೇಮ ಉಪಾಸನೆ ಭಜನೆ ಪುರಾಣ ಪ್ರವಚನ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರಗುವವು ಈ ಪಾದಯಾತ್ರೆ ಹಾಗೂ ಜನ್ಮೋತ್ಸವದ ಕಾರ್ಯಕ್ರಮಗಳಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ .