Belagavi News In Kannada | News Belgaum

ಟೀಮ ಧೋಲಿಯಾ ವತಿಯಿಂದ ಅ.8 ರಂದು ರಾಸ ರಸಿಯಾ -22 ಕಾರ್ಯಕ್ರಮ

ಬೆಳಗಾವಿ : ಬೆಳಗಾವಿಯ ಟೀಮ ಧೋಲಿಯಾ ವತಿಯಿಂದ ಇದೇ ಅಕ್ಟೋಬರ 8 ರಂದು ಭಾಗ್ಯನಗರದಲ್ಲಿರುವ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ರಾಸ ರಸಿಯಾ-22 ಗರಬಾ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಸ ರಸಿಯಾ ಕಾರ್ಯಕ್ರಮದ ಸಂಯೋಜಕಿ ಟ್ವಿಂಕಲ ಗಾಂಧಿ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪುರಷೋತ್ತಮ ರೂಪಾಲಾ ಅವರ ಪ್ರೇರಣೆಯಿಂದ ಹಾಗೂ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಾದ ಮಹಾಂತೇಶ ಕವಟಿಗಿಮಠ , ಸಂಜಯ ಪಾಟೀಲ, ಮತ್ತು ದಿಗ್ವಿಜಯ ಸಿದ್ನಾಳ ಅವರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಸ ಗರಬಾ ನೃತ್ಯ ಇದೊಂದು ಗುಜರಾತ ನೃತ್ಯ ಕಲೆಯಾಗಿದೆ. ವಿಶೇಷವಾಗಿ ನವರಾತ್ರಿಯ ಸಂದರ್ಭದಲ್ಲಿ ಈ ನೃತ್ಯವನ್ನು ಮಾಡಲಾಗುತ್ತಿದೆ. ಇದೀಗ ಬೆಳಗಾವಿಯ ವಿವಿಧ ಕಡೆಗಳಲ್ಲಿ ನವರಾತ್ರಿಯ ದಾಂಡಿಯಾ ಉತ್ಸವಗಳು ನಡೆಯುತ್ತಿವೆ. ಈ ದಾಂಡಿಯಾ ಉತ್ಸವ ಮುಗಿದ ಬಳಿಕ ಅ.8 ರಂದು ರಾಸ ಗರಬಾ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಸ ಗರಬಾ ನೃತ್ಯಕ್ಕಾಗಿ ಗುಜರಾತದಿಂದ ಸಂಗೀತಕಾರರು ಆಗಮಿಸಲಿದ್ದಾರೆ. ಧ್ವನಿ ಬೆಳಕು ಸೇರಿದಂತೆ ವಿಶೇಷ ಆಕರ್ಷಣೆಯ ವೇದಿಕೆಯಲ್ಲಿ ಈ ನೃತ್ಯಗಳು ನಡೆಯಲಿವೆ. ಈ ನೃತ್ಯದಲ್ಲಿ ಭಾಗವಹಿಸಿ ಉತ್ತಮ ನೃತ್ಯ ಮಾಡುವವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಅದಲ್ಲದೇ ಅತ್ಯುತ್ತಮ ನೃತ್ಯ ಮಾಡಿ ಬಹುಮಾನ ಪಡೆದವರಿಗೆ ಐದು ದಿನಗಳ ಕಾಶ್ಮೀರ ಪ್ರವಾಸದ ಅವಕಾಶವನ್ನು ಕಲ್ಪಿಸಲಾಗುವುದೆಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮ ಸಂಯೊಜಕರಾದ ವಿರಾಲ ಗಾಂಧಿ, ರಾಃಉಲ ಗೀತೆ, ದರ್ಶನ ಕಲಂತ್ರಿ, ಮಾನಸಿ ಕಲಂತ್ರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.///////