Belagavi News In Kannada | News Belgaum

21 ಕೋಟಿ 82 ಲಕ್ಷ ರೂ. ಗಳ ವೆಚ್ಚದಲ್ಲಿ ರಾಯಚೂರ-ಬಾಚಿ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಅನಿಲ ಬೆನಕೆ

ಬೆಳಗಾವಿ : ದಿನಾಂಕ 01.10.2022 ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕರವರು ಬೆಳಗಾವಿ ನಗರದ ರಾಯಚೂರ ಬಾಚಿ ರಾಜ್ಯ ಹೆದ್ದಾರಿಯ ರಸ್ತೆ ಸುಧಾರಣೆ ರಾಜ್ಯ ಹೆದ್ದಾರಿ ಅಭಿವ್ರಧ್ದಿ ಯೋಜನೆಡಯಿ ಮಂಜೂರಾದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಯಚೂರ-ಬಾಚಿ ರಸ್ತೆಯು ನಗರದ ಪ್ರಮುಖ ರಸ್ತೆಯಾಗಿದ್ದು, ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಹೋಗುವ ಮುಖ್ಯ ರಸ್ತೆಯಾಗಿರುವುದರಿಂದ ರಸ್ತೆ ಸುಧಾರಣೆ ಮಾಡುವ ಕುರಿತು ಸುಮಾರು ಬಾರಿ ಪತ್ರಿಕೆಗಳಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿರುವುದರಿಂದ ಸತತ ಪ್ರಯತ್ನ ಫಲವಾಗಿ ಇಂದು ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆಯನ್ನು ರಾಜ್ಯ ಸರ್ಕಾರದಿಂದ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ರೂ. 21 ಕೋಟಿ 82 ಲಕ್ಷಗಳ ವೆಚ್ಚದಲ್ಲಿ ಎಸ್. ಸಿ. ಮೋಟಾರ್ಸ ದಿಂದ ಶಿಂದೋಳ್ಳಿಕ್ರಾಸ ವರೆಗಿನ ರಾಯಚೂರ ಬಾಚಿ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟತೆಯನ್ನು ಕಾಯ್ದುಕೊಂಡು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು.
ಅತೀವೃಷ್ಟಿ ಹಾಗೂ ಕೋರೊನಾ ಮಹಾಮಾರಿಯಲ್ಲಿ ಕ್ಷೇತ್ರದ ಜನತೆಯ ಜೊತೆಗೆ ನಿಂತು ಅವರ ಸಮಸ್ಯೆಗಳಿಗೆ ದ್ವನಿಯಾಗಿ ಎದೆಗುಂದದೆ ಕ್ಷೇತ್ರದ ಜನರ ಸೇವೆಯನ್ನು ಮಾಡಿದ್ದು, ಬರುವ ಕೆಲವೇ ದಿನಗಳಲ್ಲಿ ಮತಕ್ಷೇತ್ರದಲ್ಲಿನ ರಸ್ತೆ, ಚರಂಡಿ, ಉದ್ಯಾನವನ ಹಾಗೂ ಇತರೆ ಅಬಿವೃಧ್ದಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಅಭಿವೃಧ್ದಿಯಿಂದ ಕುಂಠಿತಗೊಂಡಿದ್ದ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಇಲ್ಲಿಯ ತನಕ ಹಲವಾರು ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಂಡು ಅಭಿವೃಧ್ದಿ ಪತದತ್ತ ಕೊಂಡೊಯ್ಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರದ ಮುಖ್ಯ ರಸ್ತೆ ಸುಧಾರಣೆ ಕುರಿತು ಶಾಸಕರಿಗೆ ಮನವಿ ಮಾಡಿದರನ್ವಯ ಇಂದು ಸ್ಥಳೀಯರ ಮನವಿಗೆ ಸ್ಪಂದಿಸಿ ರಾಯಚೂರ-ಬಾಚಿ ರಸ್ತೆ ಸುಧಾರಣೆ ಕಾಮಗಾರಿಯನ್ನು ಕೈಗೊಂಡಿದ್ದಕ್ಕೆ ಹಲವಾರು ಗಣ್ಯರು ಅಭಿನಂದನೆಯನ್ನು ಸಲ್ಲಿಸಿ ಶಾಸಕ ಅನಿಲ ಬೆನಕೆ ಅವರನ್ನು ಇದೇ ವೇಳೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕರಾದ ರಾಜಶೇಕರ ಢೋಣಿ, ಬಸವರಾಜ ಮೋದಗೇಕರ, ಶ್ರೇಯಸ ನಾಕಾಡಿ ಅವರೊಂದಿಗೆ ಇತರ ನಗರ ಸೇವಕರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕರಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಯಿಕ, ಸಹಾಯಕ ಅಭಿಯಂತರ ವಾಳ್ವೇಕರ, ಗುತ್ತಿಗೆದಾರ ಮಂಜುನಾಥ ಗರಗ ಹಾಗೂ ನಾಗೇಶ ಲಂಗರಖಂಡೆ, ಸದಾನಂದ ಗುಂಟೆಪ್ಪನ್ನವರ, ಅಶೋಕ ಥೋರಾಟ, ದೀಪಾ ಕುಡಚಿ, ನಿಖಿಲ ಮುರ್ಕುಟೆ, ಮಹಾದೇವ ರಾಠೋಡ, ಗುರುದೇವ ಪಾಟೀಲ, ಪ್ರಸಾದ ದೇವರಮನಿ, ವಿಜಯ ಕದಮ, ವಿನೋದ ಲಂಗೋಟಿ, ಸುನೀಲ ಮಯಾನಾಚೆ ಮತ್ತು ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.//////