Belagavi News In Kannada | News Belgaum

ಗಾಂಧಿ ಜಯಂತಿ : ಅ.02 ರಂದು ಮಾಂಸ ಮಾರಾಟ ನಿಷೇಧ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ ಹಾಗೂ ಮಾಣಸ ಮಾರಾಟದ ಅಂಗಡಿಗಳನ್ನು ಗಾಂಧಿ ಜಯಂತಿ ನಿಮಿತ್ಯ ರವಿವಾರ(ಅ.02) ಬಂದ್ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದು, ಮಾಲೀಕರು ಅಂಗಡಿಗಳನ್ನು ಬಂದ ಮಾಡಿ ಸಹಕರಿಸುವಂತೆ ತಿಳಿಸಲಾಗಿದೆ.
ಅಂಗಡಿ ಮಾಲೀಕರು ಆದೇಶವನ್ನು ಉಲ್ಲಂಘನೆ ಮಾಡಿರುವದು ಕಂಡು ಬಂದಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////