Belagavi News In Kannada | News Belgaum

ದಸರಾ ಹಬ್ಬದ ನಿಮಿತ್ತ ನೃತ್ಯ ಸ್ಪರ್ಧೆ

ಬೆಳಗಾವಿ :  ರೋಟರಿ ಕ್ಲಬ್ ಆಫ್ ಬೆಳಗಾಮ್ ಮಿಡ್ ಟೌನ್ ದವರು ನವರಾತ್ರಿ ನಿಮತ್ತ ದಿನಕೊಂದು ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. ಐದನೇ ದಿನವಾದ ಇಂದು ದಿ. 30 ಶುಕ್ರವಾರದಂದು ಖಾನಾಪೂರ ರಸ್ತೆಯ ಜಕ್ಕೇರಿ ಹೊಂಡದ ಹತ್ತಿರವಿರುವ ಸಂತ ತುಕಾರಾಮ್ ಮಹರಾಜ್ ಸಂಸ್ಕøತಿ ಭವನದಲ್ಲ್ಲಿ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು.
ಇಂದು ಏಕವ್ಯಕ್ತಿ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯ ಹೀಗೆ ಎರಡು ಪ್ರಕಾರದ ನೃತ್ಯಗಳ ಸ್ಪರ್ಧೆಗಳಿದ್ದವು. ಪ್ರಥಮ ಬಹುಮಾನ ರೂ 2000 ದ್ವಿತೀಯ ಬಹುಮಾನ ರೂ. 1500 ಹಾಗೂ ತೃತೀಯ ಬಹುಮಾನ ರೂ. 1000 ಇದೆ. ಸ್ಪರ್ಧೆಯಲ್ಲಿ ವಿಜೇಯಿತರಿಗೆ ದಸರಾ ಉತ್ಸವದ ಕೊನೆ ದಿನದಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು.
ಅಶೋಕ ಬದಾಮಿ, ನೀತಾ ಬಿಡಿಕರ, ಸತೀಸ ನಾಯಕ, ಮನೋಹರ ಜರತಾರಕರ, ಗುಲಾಬಚಂದ ಚೌಗಲಾ, ರಾಜೀವ ದೇಶಪಾಂಡೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು./////