Belagavi News In Kannada | News Belgaum

ತಾಲೂಕು ಕೆಜೆಯು ನೂತನ ಪದಾಧಿಕಾರಿಗಳ ಆಯ್ಕೆ

ಮಾಧ್ಯಮ ಕ್ಷೇತ್ರ ಅನುಭವ ಮಂಟಪ ಪರಿಕಲ್ಪನೆಯಲ್ಲಿ ಬೆಳೆಯಬೇಕು

 

ಹುಣಸಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಕರ್ನಾಟಕ ಜರ್ನಾಲಿಸ್ಟ ಯುನಿಯನ್ ನ ಹುಣಸಗಿ ತಾಲೂಕು ಘಟಕದ ನೂತನ ಪದಾದಿಕಾರಳನ್ನು‌ ಆಯ್ಕೆಮಾಡಲಾಯಿತು.
ಕೆಜೆಯು ರಾಜ್ಯ ಉಪಾಧ್ಯಕ್ಷ ವೀರಣ್ಣ ಕಲಕೇರಿ ರವರ ಸಮ್ಮುಖದಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷ ಈರಣ್ಣ ಹಾದಿಮನಿಯವರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭಗಳಲ್ಲಿ ವೀರಣ್ಣ ಕಲಕೇರಿ ಮಾತನಾಡಿ ಗ್ರಾಮೀಣ ಪತ್ರಕರ್ತರು ವರದಿ ಮಾಡುವ ಪತ್ರಿಕೆ ರಾಜ್ಯ ಪತ್ರಿಕೆಯಾಗಿರಲಿ, ಸ್ಥಳಿಯ ಅಥವಾ ಪ್ರಾದೇಶಿಕ ಯಾವುದೇ ಪತ್ರಿಕೆಯ ವರದಿಗಾರರಾದರೂ ಅವರು ಪತ್ರಕರ್ತರೆ ಪತ್ರಿಕೆ ದೊಡ್ಡದು ಚಿಕ್ಕದು ಎಂಬ ಭಾವನೆ ಸಲ್ಲ ಎಂದ ಅವರು ಸಮಾಜದ ಶುದ್ದಿಕರಣದಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದೆ. ಮಾಧ್ಯಮಕ್ಕೆ ತನ್ನದೆಯಾದ ಹೊಣೆಗಾರಿಕೆ ಇದೆ. ಮಾಧ್ಯಮ ರಂಗವು ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಬೆಳೆಯಬೇಕು ಎಂದರು.
ಕೆಜೆಯು ಯಾದಗಿರಿ ಜಿಲ್ಲಾ ಅಧ್ಯಕ್ಷ ಈರಣ್ಣ ಹಾದಿಮನಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು.

ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಬಾಪುಗೌಡ ಮೇಟಿ, ಗೌರವ ಅಧ್ಯಕ್ಷ ರವಿಕುಮಾರ್ ಭಂಟನೂರ, ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ ಬಿರೆದಾರ, ಹಾಗೂ ರಾಜಶೇಖರ ಹಿರೇಮಠ ಖಜಾಂಚಿಯಾಗಿ ಆಯ್ಕೆಯಾದರು.

ಸಭೆಯಲ್ಲಿ ಪತ್ರಕರ್ತರಾದ ಡಾ. ಯಂಕನಗೌಡ ಪಾಟೀಲ, ಬಸವರಾಜ ಮರೋಳ,
ವೆಂಕಟೇಶ ದೊರೆ. ಕೃಷ್ಣ ದೊರೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.