Belagavi News In Kannada | News Belgaum

ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸಲು ನ್ಯಾಕ್  ಅಗತ್ಯ: ಎಂ. ಹನುಮಂತಪ್ಪ

ಜ್ಞಾನ ವ್ಯಕ್ತಿಯ ಆಂತರಿಕ ಮತ್ತು ಬಾಹಿಕ ಸುಧಾರಣೆಗೆ ಆವಶ್ಯಕ.  ಜ್ಞಾನ ವಿನಿಮಯದಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬಹುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಎಂ. ಹನುಮಂತಪ್ಪ ಆಶಯ ವ್ಯಕ್ತಪಡಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ಆಂತರಿಕ ಗುಣಮಟ್ಟ ಸುಧಾರಣಾ ಕೋಶ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ  ಆಂತರಿಕ ಗುಣಮಟ್ಟ ಸುಧಾರಣಾ ಕೋಶಗಳ ಸಂಯುಕ್ತಾಶ್ರಯದಲ್ಲಿ ರಾಚವಿಯ  ಸಂಯೋಜಿತ ಕಾಲೇಜಿನ  ಸಿಬ್ಬಂದಿಗಾಗಿ ನ್ಯಾಕ್‍ನ ಮೌಲ್ಯಮಾಪನ ಮತ್ತು ಮಾನ್ಯತೆಯ ಪ್ರಕ್ರಿಯೆಯ ಮೇಲೆ ನೆರವು ಎಂಬ ವಿಷಯದ  ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಎಂ. ಹನುಮಂತಪ್ಪ ಅವರು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಬಹು ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಸಮಕಾಲೀನ ಸಂದರ್ಭದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಬೇಕಾದ ಅವಶ್ಯಕತೆ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳು ನ್ಯಾಕ್‍ಗೆ ಒಳಪಡುವುದರಿಂದ  ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ.  ಶಿಕ್ಷಣ ಸಂಸ್ಥೆಗಳ ಭೌತಿಕ ಮತ್ತು ಬೌದ್ಧಿಕ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಲು  ನ್ಯಾಕ್  ಪೂರಕವಾಗಿ ಕೆಲಸಮಾಡುತ್ತದೆ ಎಂದು ಹೇಳಿದರು.

 

ಸಂಪನ್ಮೂಲ ವ್ಯಕ್ತಿಗಳಾದ ನ್ಯಾಕ್‍ನ ಬೆಂಗಳೂರು ವಿಭಾಗದ   ಸಹಾಯಕ ಸಲಹೆಗಾರರಾದ ಡಾ. ಡಿ. ಕೆ. ಕಾಂಬ್ಳೆ ಅವರು ನ್ಯಾಕ್ ಪಡೆಯಲು ಬೇಕಾಗಿರುವ ಮೂಲಭೂತ ಅಂಶಗಳ ಕುರಿತು ವಿವರಿಸಿದರು. ನ್ಯಾಕ್‍ನ ಶ್ರೇಣಿ ಪಡೆಯಲು ಯಾವುದೇ ಅನ್ಯಮಾರ್ಗವಿಲ್ಲ. ತಮ್ಮಲ್ಲಿರುವ ನೈಜ ದತ್ತಾಂಶಗಳಿಂದ ಮಾತ್ರ ಶ್ರೇಣಿಗಳನ್ನು ಪಡೆದುಕೊಳ್ಳಬಹುದು. ನ್ಯಾಕ್ ಪಡೆಯಲು ಪ್ರಾಥಮಿಕ ಹಂತದಿಂದ ಕೊನೆಯವರೆಗಿನ ಪ್ರಕ್ರಿಯೆಗಳನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ನ್ಯಾಕ್ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದರು.

 

ರಾಚವಿಯ ಆಂತರಿಕ ಗುಣಮಟ್ಟ ಸುಧಾರಣಾ ಕೋಶದ ನಿರ್ದೇಶಕ ಪೆÇ್ರ. ಜೆ. ಮಂಜಣ್ಣ ಪರಿಚಯಿಸಿದರು. ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಸ್ವಾಗತಿಸಿದರು. ಸಮರ್ಥ ಎಸ್.  ಹಲಸಗಿ ನಿರೂಪಿಸಿದರು.  ಪೆÇ್ರ. ವಿನಾಯಕ ಬಂಕಾಪುರ ವಂದಿಸಿದರು.

 

ಕಾರ್ಯಕ್ರಮದಲ್ಲಿ ತಾಂತ್ರಿಕ ಸಲಹೆಗಾರ ಉಪನ್ಯಾಸಕ ಚೇತನ್ ಗಂಗಾಯಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು./////