Belagavi News In Kannada | News Belgaum

ದಸರಾ ಹಿನ್ನೆಲೆ ಪ್ರವಾಸಿಗರಿಗೆ ಹೆಚ್ಚಿನ ಬಸ್ ವ್ಯವಸ್ಥೆ

ಬೆಳಗಾವಿ : ದಸರಾ ಹಬ್ಬ ಆಚರಿಸಿ ಮರಳಿ ಬೆಂಗಳೂರಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಗೋಕಾಕ, ರಾಯಬಾಗ ಹಾಗೂ ಅಥಣಿ ಘಟಕಗಳಿಂದ ದಿ:08.10.2022 ರಿಂದ 10.10.2022 ರವರೆಗೆ ಬೆಂಗಳೂರಿಗೆ ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾಸಂಸ್ಥೆ, ಚಿಕ್ಕೋಡಿ ವಿಭಾಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////