Belagavi News In Kannada | News Belgaum

ಕರ್ನಾಟಕ ಮೂರು ಬಾಗ 3 ಮುಖ್ಯಮಂತ್ರಿಯಾಗುತ್ತಾರಂತೆ ಇದು ನಿಜಾನಾ?

ಹಾಸನ: ದೇವರ ಸತ್ಯವಾಗಿ ಹೇಳುತ್ತೇನೆ. 31 ವರ್ಷದೊಳಗೆ ಕರ್ನಾಟಕ  ಮೂರು ಭಾಗ ಆಗಿ, ಮೂರು ಮುಖ್ಯಮಂತ್ರಿ, ಮೂವರು ರಾಜ್ಯಪಾಲರಾಗುತ್ತಾರೆ. ಇದು ಶಿವನ ಆಣೆಗೂ ಸತ್ಯ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.
ಹಾಸನಾಂಬೆ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ದೇಶದ ಬಗ್ಗೆ ಮಾತನಾಡಿದಾಗ ಟ್ರೋಲ್ ಮಾಡುತ್ತಾರೆ. ಪಾರ್ಲಿಮೆಂಟ್ ಏನು ಕಟ್ಟಿದ್ದಾರೆ ಅದು ಭಾರೀ ಘೋರವಾಗಿರುತ್ತದೆ ಎನ್ನುವುದನ್ನು ವೀರ ಬ್ರಹ್ಮಸ್ವಾಮಿ ಚರಿತ್ರೆಯಲ್ಲಿ ಬರೆದಿದ್ದಾರೆ. ತ್ರಿಕೋನಾತ್ಮಿಕ ದೀಪಿಕ, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು, ಇಲ್ಲ ಚೌಕವಾಗಿರಬೇಕು, ಇಲ್ಲ ಚಂದ್ರ ಪೂರ್ತಿಯಾಗಿ ಕುಜನಾಂಶವಾಗಿರಬೇಕು. ತ್ರಿಕೋನ ಮಾಡಿದಾಗ ಉಗ್ರವಾಗಿರುತ್ತದೆ. ಇನ್ಮೇಲೆ ದೇಶದ ಮೇಲೆ, ಜನರ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತದೆ. ಮೊದಲು ಕದ್ದುಮುಚ್ಚಿ ಲಂಚ ತೆಗೆದುಕೊಳ್ಳುತ್ತಿದ್ದರು. ಈಗ ಎಲ್ಲಾ ಓಪನ್. ದಡಂದಶಗುಣಂ ಭಗವಂತ ಆ ಸಮಯಕ್ಕೆ ಬಂದೇ ಬರುತ್ತಾನೆ ಎಂದಿದ್ದಾರೆ.
ಕಲಿಯುಗ ಅಂತ್ಯ ಕಾಲಕ್ಕೆ ರೋಗ ರುಜಿನೆಗಳು ಜಾಸ್ತಿ ಆಗುತ್ತದೆ. ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತದೆ, ಒಂಭತ್ತು ತಿಂಗಳು ಕೂರುತ್ತದೆ. ಎರಡು ಗ್ರಹಣಗಳು ಹತ್ತಿರ ಬರಬಾರದು. ಜನರಿಗೆ ನೀರಿನ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಘರ್ಷಣೆಗಳಾಗುತ್ತವೆ. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ದೇವರ ಸತ್ಯವಾಗಿ ಹೇಳುತ್ತೇನೆ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತದೆ. ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ. ಶಿವನ ಮೇಲೆ ಆಣೆ ಮಾಡುತ್ತೇನೆ ಇದು ಸತ್ಯ ಎಂದು ಹೇಳಿದ್ದಾರೆ.
ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ, ಭಾರತ ಎರಡು ದೇಶವಾಗುತ್ತದೆ. ಎರಡು ರಾಷ್ಟ್ರಪತಿ ಆಗುವುದು ಕೂಡ ಸತ್ಯ. 31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ವೀರ ಬ್ರಮ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ದಾರೆ, ಇದು ನಡೆಯುವುದು ನಿಜ, ಸತ್ಯ. ಈ ಭಾರಿ ಬರುವುದು ಬೆರಕೆ ಸಂಸಾರ ಗ್ಯಾರಂಟಿ. ಯಾರು ಮುಖ್ಯಮಂತ್ರಿ ಆಗುತ್ತಾರೆ ಅಂತ ಬಹಳಷ್ಟು ಗೊಂದಲ ನಡೆಯುತ್ತದೆ ಎಂದಿದ್ದಾರೆ.
ಪೊರಕೆಯಿಂದ ದೆಹಲಿಯನ್ನು ಗುಡಿಸಿರುವ ಪಕ್ಷ ಏನಿದೆ, ಪಂಜಾಬ್, ಗುಜರಾತ್ ಒಂದಿಷ್ಟು ಗುಡಿಸ್ತು. ಚಪ್ಪಲಿ, ಪೊರಕೆಯನ್ನು ಲಕ್ಷ್ಮಿ ಅಂತ ಹೋಲಿಸುತ್ತೇವೆ. ಭಿಕ್ಷೆ ಬೇಡಿ ಒಂದು ಸರ್ಕಾರ ನಡೆಸುವ ಅವಕಾಶಗಳು ಈ ಭಾರೀ ಬರುತ್ತದೆ. ಸುಮಾರು ಏಳು ಪಕ್ಷಗಳು ಸೇರಿಕೊಂಡು ಸರ್ಕಾರ ಮಾಡಬೇಕಾಗುತ್ತದೆ. ಮಾಂಸದ ಊಟ ಹಾಕಿದ, ತೀರ್ಥ ಕೊಟ್ಟರು ಅಂತ ಓಟು ಹಾಕಬೇಡಿ. ಯಾವ ಮನುಷ್ಯ ಕರೆಕ್ಟಾಗಿ ಕೆಲಸ ಮಾಡುತ್ತಾನೋ, ಅಂತಹವನನ್ನು ಶಾಸಕನಾಗಿ ಆಯ್ಕೆ ಮಾಡಿ ಎಂದು ತಿಳಿಸಿದ್ದಾರೆ.