Belagavi News In Kannada | News Belgaum

ಅಥಣಿ ಚುನಾವಣಾ ಅಖಾಡಕ್ಕೆ ಪೊಲೀಸ್‌ ಅಧಿಕಾರಿ ಬಸವರಾಜ ಬಿಸನಕೊಪ್ಪ

ಅಥಣಿ ಚುನಾವಣಾ ಅಖಾಡಕ್ಕೆ ಪೊಲೀಸ್‌ ಅಧಿಕಾರಿ ಬಸವರಾಜ ಬಿಸನಕೊಪ್ಪ


ಬಿಜೆಪಿಗರ ಒಳಜಗಳದ ಲಾಭ ಪಡೆಯಲು ಮುಂದಾದ ಕಾಂಗ್ರೆಸ್ ಮೂವರು ಸ್ವಾಮೀಜಿಗಳ ಲಾಬಿ
ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಕಾವು ಈಗಿನಿಂದಲೇ ಹೆಚ್ಚಾಗುತ್ತಿದ್ದು. ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ತೊಡಗಿಕೊಂಡಿವೆ.ಈ ಸಂದರ್ಭದಲ್ಲಿ ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಒಂದಾದ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಪೊಲೀಸ್ ಅಧಿಕಾರಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡುತ್ತಾರಾ. ? ಎಂಬ ಮಾತು ಎಲ್ಲೆಡೆ ಜೋರಾಗಿದೆ.

 

ಹಾಲಿ ಪೋಲಿಸ್ ಅಧಿಕಾರಿಗಳಾದ ಬಸವರಾಜ
ಬಿಸನಕೋಪ್ಪ ಪರವಾಗಿ ತಂಡ ಕಟ್ಟಿಕೊಂಡ ಯುವಕರು. ಖಡಕ್ ಪೊಲೀಸ್‌ ಅಧಿಕಾರಿ ಎಂದೇ ಕರೆಸಿಕೊಳ್ಳುವ ಸಿಪಿಐ ಬಿಸನಕೊಪ್ಪ ಪರ ಸಾವಿರಾರು ಯುವಕರು ತಾಲೂಕಿನ ತುಂಬಾ ತಂಡ ಕಟ್ಟಿಕೊಂಡು ಸಮಾಜಸೇವೆ ಮಾಡುತ್ತಿದ್ದಾರೆ. ವಿವಿದ ಗ್ರಾಮಗಳಲ್ಲಿ ಸ್ವಯಂ ಕ್ರಿಡಾಕೂಟ ಆಯೋಜಿಸುವ ಮೂಲಕ ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕೆಲವು ತಿಂಗಳುಗಳವರೆಗೆ ಮಾತ್ರ ತಾಲೂಕಿನಲ್ಲಿ ಸೇವೆಸಲ್ಲಿಸಿದ್ದರು ಬಿಸನಕೊಪ್ಪ ಪರವಾದ ರಾಜಕೀಯ ಅಲೆ ಎದ್ದಿರುವುದು ವಿಶೇಷ.ಯುವಕರ ಪಡೆ ಇವರ ಬೆನ್ನಿಗೆ ಇರುವದನ್ನ ಮನಗಂಡು ಕಾಂಗ್ರೆಸ್ ಈ
ಲೆಕ್ಕಾಚಾರ ಹಾಕಿದೆ ಎಂಬ ಮತು ಕೆಳಿಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಮುಖಂಡರಿದ್ದರೂ.ಚುನಾವಣೆಯಲ್ಲಿ ಮತಗಳನ್ನು ಆಕರ್ಷಿಸುವ ಮಟ್ಟಿಗೆ ಬೆಳೆದಿಲ್ಲ ಎಂಬ ಮಾತು ನಾಯಕರಿಗೆ ಮನದಟ್ಟಾಗಿದೆ ಜತೆಗೆ ಪ್ರಬಲ ಪಂಚಮಸಾಲಿ ಸಮುದಾಯದ ಮತಗಳನ್ನು ಕಾಂಗ್ರೆಸನತ್ತ ಒಂದುಗೂಡಿಸಿ ಗೆಲುವು ಸಾಧಿಸುವ ಲೆಕ್ಕಾಚಾರ ಹಾಕಿರುವ ಜಿಲ್ಲಾ ನಾಯಕರು ಬಸವರಾಜ ಬಿಸನಕೊಪ್ಪ ಅವರಿಗೆ ಚುನಾವಣೆ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಎಂಬ ಸುದ್ದಿ ಸಧ್ಯ ಗೌಪ್ಯವಾಗಿ ಉಳಿದಿಲ್ಲ ಜತೆಗೆ ಪೋಲಿಸ್ ಅಧಿಕಾರಿ ಬಸವರಾಜ ಅವರು ಚುನಾವಣೆ ಸ್ಪರ್ದಿಸಬೇಕೆಂದು ಮೂವರು ಸ್ವಾಮೀಜಿಗಳು ಒತ್ತಡ ಹಾಕುತ್ತಿದ್ದರು.

ಈವರೆಗೂ ಇವರು ಯಾವುದೇ ನಿರ್ದಾರ ಪ್ರಕಟಿಸಿಲ್ಲ.
ಶಾಸಕರಾಗಿ ಉದಾಹರಣೆಗೆ ಇರುವಾಗಲೇ, ಮತ್ತೊಬ್ಬ ಪೊಲೀಸ್‌ ಅಧಿಕಾರಿ ರಾಜಕೀಯಕ್ಕೆ ಬರುತ್ತಾರಾ ಎಂಬ ಮಾತು ಕ್ಷೇತ್ರದ ಜನತೆ ತುಂಬಾ ನೀರಿಕ್ಷೆ ಇಟ್ಟಿದ್ದಾರೆ.ಅಥಣಿ- ರಾಜ್ಯ ರಾಜಕಾರಣದಲ್ಲಿ ಅಥಣಿ ಮತಕ್ಷೇತ್ರ ಒಂದು ಪ್ಲೇಯಿಂಗ್ ಪಾಂಯಿಂಟ್, ಅಂದ್ರೆ ತುಂಬ ಮುಖ್ಯವಾದ ಮತಕ್ಷೇತ್ರ, ಒಂದೇ ಬಾರಿಗೆ ಶಾಸಕರಾಗಿ ಸರ್ಕಾರ ಕೆಡವಿದ ಉದಾಹರಣೆ ಇನ್ನೂ ಅಥಣಿ ಮತದಾರರಿಂದ ಮಾಸಿಲ್ಲ, ಅಥಣಿಯ ಮತದಾರರು ಕುಡಚಿಯಿಂದ ಪ್ರೇರಣೆ ಪಡೆದಿದ್ದಾರೋ ಇಲ್ವೋ ಆ ದೇವರೆ ಬಲ್ಲ ಆದರೆ ಅಲ್ಲಿನ ಜನ ಮಾತ್ರ ಸಿಪಿಐ ಬಸವರಾಜ ಬಿಸನಕೊಪ್ಪ ಈ ಬಾರಿ ಶಾಸಕರಾಗಿ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಮೊದಲು ಅಥಣಿಯಲ್ಲಿ ಎಸ್ಐ(ಸಬ್ ಇನ್ಸ್ಪೆಕ್ಟರ್) ಆಗಿ ಕೆಲಸ ಮಾಡುವುದಕ್ಕಿಂತ ಜನ ಸೇವೆಯೇ ಜಾಸ್ತಿ ಮಾಡಿದ್ದಾರೆ ಅಂತಾರೆ ಅಥಣಿಯ ಯುವಕರು, ಅಣ್ಣಾ ಒಂದಿನ ನಾವು ಬೈಕಿನಲ್ಲಿ ನಾಲ್ಕು ಜನ ಹೊರಟಿದ್ವಿ ಆಗ ಬಸವರಾಜ ಬಿಸನಕೊಪ್ಪ ಸಾಹೆಬ್ರು ನಮ್ಮ ಹಿಡಿದ್ರು, ನಾವು ಗಾಬರಿಯಲ್ಲಿ ಇದ್ದಿದ್ದು ನೋಡಿ ಏನಾಯ್ತು ಅಂತ ಕೇಳಿದ್ರು ಆಗ ನಮ್ಮ ಸ್ನೇಹಿತನಿಗೆ ಅಪಘಾತ ಆಗಿ ಆಸ್ಪತ್ರೆಯಲ್ಲಿ ಇದ್ದ ಅಂತ ಹೇಳಿದ ತಕ್ಷಣವೇ ನಮ್ಮ ಬಿಟ್ಟು ಕಳುಹಿಸದ್ರು , ಒಂದು ದಿನ ಮತ್ತೇ ನಾನು ಒಬ್ಬನೇ ನನ್ನ ಸ್ಪಾಲಂಡರ್ ಬೈಕ್ ನಲ್ಲಿ ಹೊರಟಿರುವಾಗ ಪ್ರೀತಿಯಿಂದ ಕರೆದು ಹೇಗಿದಾನಪ್ಪ ನಿನ್ನ ಸ್ನೇಹಿತ ಎಂದು ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು, ಪೋಲಿಸರೆಂದ್ರೆ ಬರಿ ಹೊಡಿ ಬಡಿ ಅಂತ ಅನ್ಕೊಂಡಿದ್ದ ನನಗೆ ಪೋಲಿಸರ ಮೇಲೆ ಗೌರವ ಜಾಸ್ತಿ ಆಯ್ತು ಅಂದ ಅಥಣಿಯ ಯುವಕ.

ಪೋಲಿಸ್ ಅಂದ್ರೆ ಖಡಕ್ ಆಗಿ ಇರ್ತಾರೆ ಖಧರ್ ಆಗಿ ಇರ್ತಾರೆ, ಯಾವಾಗಲೂ ಬೈಯುತ್ತ ಮಾತಾಡ್ತಾರೆ ಎನ್ನುವ ಜನರ ಬಾಯಿ ಮುಚ್ಚಿಸುವಂತೆ ಸೇವೆ ಮಾಡಿದ ಕೀರ್ತಿ ಪೋಲಿಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ ಅವರದ್ದು.

ಬಸವರಾಜ ಬಿಸನಕೊಪ್ಪ ಅವರು ಹಿಂದು ಲಿಂಗಾಯತ ಸಮುದಾಯದವರು, ಅಥಣಿಯಲ್ಲಿ ಭಾಗಷಃ ಅರ್ಧದಷ್ಟು ಮತದಾರರು ಲಿಂಗಾಯತರು ಇನ್ನೂ ಯುವಕರ ಪ್ರಮಾಣ ಜಾಸ್ತಿ ಇದೆ, ಯುವಕರಂತು ಅಥಣಿ ಸಿಂಗ್ಂ ಎಂದು ಬಿರುದು ಕೊಟ್ಟು ಈಗಾಗಲೇ ಅವರನ್ನ ಶಾಸಕರು ಅಂತ ಒಪ್ಪಿಕೊಂಡು ಆಗಿದೆ.

ಒಂದು ವೇಳೆ ಸಿಪಿಐ ಬಸವರಾಜ ಬಿಸನಕೊಪ್ಪ ಅವರು ಚುನಾವಣೆಗೆ ನಿಂತರೆ ಕಡಿಮೆಯೆಂದರು ಮತಗಳ ಲೀಡ್ ನಿಂದ ಗೆಲುವು ಸಾಧಿಸುತ್ತಾರೆ ೪೦ ರಿಂದ ೪೫ ಸಾವಿರ ಮತಗಳ ಅಂತರದಿಂದ ಜಯಬೇರಿ ಕಹಳೆ ಉದುತ್ತಾರೆಂದು. ಬೆಳಗಾವಿ ವರದಿಯ ಗ್ರೌಂಡ್ ರಿಪೋರ್ಟ್.

ಇನ್ನೂ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಗಾಗಿ ಮುಸುಕಿನ ಗುದ್ದಾಟ ಶುರುವಾಗಿದೆ, ಕಾಂಗ್ರೆಸ್ ನಿಂದ ಮುರು ಜನ ಟಿಕೆಟ್ ಗಾಗಿ ಲಾಬಿ ನಡೆಸಿದರೇ ಭಾಜಪಾದಲ್ಲಿ ಎರಡು ಜನ ಲಾಬಿ ನಡೆಸಿದ್ದಾರೆ,

2023 ಕ್ಕೆ ಅಥಣಿ ಮತಕ್ಷೇತ್ರಕ್ಕೆ ಪ್ರಭಾವಿ ಸ್ವಾಮೀಜಿ ಸ್ಪರ್ಧಿಸುತ್ತಾರಾ?

ಪ್ರಭಾವಿ ಸ್ವಾಮೀಜಿ ಒಬ್ಬರು ಚುನಾವಣೆಗೆ ನಿಲ್ಲುವುದು ಖಚಿತವಾಗಿದ್ದು ಆದರೆ ಯಾವ ಪಕ್ಷ ಎಂಬುವುದನ್ನು ಇನ್ನೂ ಖಚಿತಪಡಿಸಿಲ್ಲ ಎನ್ನುತ್ತವೆ ಉನ್ನತ ಮೂಲಗಳು ಎಂ ಬಿ ಪಾಟೀಲ್ ಸತೀಶ್ ಜಾರಕಿಹೊಳಿ ಇಬ್ಬರ ಮೇಲೆ ನಿಂತಿದೆ ಅಥಣಿ ಆಟ ಇನ್ನು ಬಿಜೆಪಿಯ ತಿಕ್ಕಾಟ 900 ಕೋಟಿ ಹಣವನ್ನು ಕ್ಷೇತ್ರಕ್ಕೆ ಅನುದಾನ ತಂದಿರುವಂತಹ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರಾದ ಶಾಸಕ ಮಹೇಶ್ ಕುಮ್ಟಳ್ಳಿ ಯನ್ನು ಹತ್ತಿಕ್ಕಲು ಬಿಜೆಪಿಯ ಇನ್ನೊಂದು ಗುಂಪು ಸತತ ಪ್ರಯತ್ನ ಪಡುತ್ತಿದೆ ಎಂದು ಅಲ್ಲಿಯ ಮತದಾರರ ಮಾತು ಇನ್ನೊಂದೆಡೆ ಲಕ್ಷ್ಮಣ್ ಸವದಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಸತತ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ
ಇನ್ನೂ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಲೆಕ್ಕಾಚಾರ ಸಧ್ಯಕ್ಕೆ ಅಥಣಿ ಮತಕ್ಷೇತ್ರ ದಲ್ಲಿ ಇದೆ.