Belagavi News In Kannada | News Belgaum

“ಹಳೆಯ ವಿದ್ಯಾರ್ಥಿಗಳಿಂದ ಸುನಿತಾ. ಎಸ್. ಪಾಟೀಲ ಶಿಕ್ಷಕಿಯವರಿಗೆ ಸನ್ಮಾನ “

“ಹಳೆಯ ವಿದ್ಯಾರ್ಥಿಗಳಿಂದ ಸುನಿತಾ. ಎಸ್. ಪಾಟೀಲ ಶಿಕ್ಷಕಿಯವರಿಗೆ ಸನ್ಮಾನ ”

ಬೀದರ್ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿಯಗೆ ಆಯ್ಕೆಗೊಂಡು ಪ್ರಶಸ್ತಿಗೆ ಪಾತ್ರರಾದ ಸರಕಾರಿ ಪ್ರೌಢ ಶಾಲೆ ನಿಂಬೂರಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ಸುನಿತಾ. ಶಂಭುಲಿಂಗ.ಪಾಟೀಲ್ ಅವರಿಗೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು

ಹಲವೆಡೆ ಹಲವಾರು ಸನ್ಮಾನಗಳಿಗೆ ಹಾಗೂ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾದ ಇವರಿಗೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣಹಾಗೂ ತರಬೇತಿ ಸಂಸ್ಥೆಯ ವತಿಯಿಂದ ಕೊಡಲ್ಪಡುವ 2022- 23 ನೇ ಸಾಲಿನ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದು ಸರಕಾರಿ ಪ್ರೌಢ ಶಾಲೆ ನಿಂಬೂರ ಶಾಲೆಗೂ ಹಾಗೂ ಊರಿಗೆ ಕೀರ್ತಿಯನ್ನು ತಂದಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಮಾತ್ರ ಕಾರ್ಯ ನಿರ್ವಹಿಸದೇ ಸಾಹಿತ್ಯ ಕ್ಷೇತ್ರದಲ್ಲಿಯೂ ಸಹ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಹಲವು ಕ್ರೀಡೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡುವಲ್ಲಿ ಸಫಲರಾಗಿದ್ದಾರೆ. ತಮ್ಮ ನಿಷ್ಕಲ್ಮಶ ಮನಸ್ಸಿನಿಂದ, ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಅಪಾರ ಪ್ರೀತಿಯನ್ನು ಕೊಡುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದಿದ್ದಾರೆ. ಹಾಗಾಗಿ ಹಳೆಯ ವಿದ್ಯಾರ್ಥಿಗಳು ಅವರಿಗೆ ಗೌರವ ಪೂರ್ವಕವಾಗಿ ಸನ್ಮಾನ ಮಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢ ಶಾಲೆ ನಿಂಬೂರ ಮುಖ್ಯೋಪಾಧ್ಯಾಯರಾದ ಮಹಾದೇವ ಸಜ್ಜನಶಟ್ಟಿ ವಹಿಸಿದ್ದರು ಅಥಿತಿಗಳಾಗಿ ಶಾಲೆಯ ಎಸ್. ಡಿ. ಎಂ. ಸಿ.ಅಧ್ಯಕ್ಷರಾದ ಸೋಮಯ್ಯ ಸ್ವಾಮಿ ಹಾಗೂ ಉಪಾಧ್ಯಕ್ಷರಾದ ಶಶಿಕಲಾ ಹಾಗೂ ಸದಸ್ಯರಾದ ಘಾಳೆಪ್ಪಾ ಅಲಿಪುರ, ಉಪಸ್ತಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಶಿಕ್ಷಕರಾದ ಬಂಡೆಪ್ಪಾ ಅವರು ನಿರ್ವಹಿಸಿದರು. ಊರಿನ ಗಣ್ಯರಾದ ಮಲ್ಲಯ್ಯ ಸ್ವಾಮಿ, ವೈಜಿನಾಥ್ ನಾಗರಾಳೆ,ರಾಜಪ್ಪಾ ಅಲಿಪೂರ ,ಶಾಲೆಯ ಸಿಬ್ಬಂದಿ ವರ್ಗ ಹಾಗೂ ಹಳೆಯ ವಿದ್ಯಾರ್ಥಿಗಳಾದ ರೋಹಿಣಿ, ಅಂಬಿಕಾ, ಮಾಲಾಶ್ರೀ, ಭಾಗ್ಯಶ್ರೀ, ಕಾವ್ಯ, ಸಪ್ನಾ, ಸೋನಮ್ಮ, ಸಚಿನ್, ಅಜಯ್ , ಸನ್ನಿ, ಲೋಕೇಶ್, ಆಜಮ್, ಶಿವಕುಮಾರ್, ಅವಿನಾಶ್, ರಾಹುಲ್, ಅಖಿಲೇಶ್, ವೀರೇಶ್, ಜಗದೀಶ್, ಪ್ರಶಾಂತ್, ಬೀರೆಶ, ಆನಂದ್, ಮಲ್ಲೇಶ್, ನವೀನ್,ಶರಣ ರೆಡ್ಡಿ, ವಿಶಾಲ್, ಅಮರ್ ಮಹೇಶ್,ಹವಗೆಪ್ಪಾ,ರಾಜು, ನಂದಿನಿ, ಅಕ್ಷತಾ, ಸೋನಿ, ಶಿವಾನಿ, ಸಂದೀಪ್, ಹಾಗೂ ಇನ್ನಿತರರು ಭಾಗಿಯಾಗಿ ಹರ್ಷದಿ ಸನ್ಮಾನ ಮಾಡಿದರು.

ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಸುನಿತಾ.ಶಂಭುಲಿಂಗ.ಪಾಟೀಲ್ ರವರು ವಿದ್ಯಾರ್ಥಿಗಳನ್ನು ಮತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಯರಾದ ಮಹಾದೇವ್ ಸಜ್ಜನಶೆಟ್ಟಿ ಹಾಗೂ ಮಲ್ಲಿಕಾರ್ಜುನ ಚಂದಾಪುರೆ ತಮ್ಮ ಅಭಿಪ್ರಾಯದ ಜೊತೆಗೆ ಶುಭಾಷಯಗಳನ್ನು ತಿಳಿಸಿದರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾದ ಸುನೀತಾ ಎಸ್ ಪಾಟೀಲ್ ಅವರ ಬಗ್ಗೆ ಊರಿನ ಗಣ್ಯರಾದ ಮಲ್ಲಿಕಾರ್ಜುನ ಸ್ವಾಮಿ, ಹಾಗೆ ಹಳೆಯ ವಿದ್ಯಾರ್ಥಿಗಳಾದ ರೋಹಿಣಿ,ಮಾಲಾಶ್ರೀ, ಅಖಿಲೇಶ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕೊನೆಯದಾಗಿ ಕೇಕ್ ಕಟ್ ಮಾಡುವುದರ ಮೂಲಕ ವಿಜೃಂಭಣೆಯಿಂದ ಕಾರ್ಯಕ್ರಮ ಯಶಸ್ವಿಗೊಂಡಿತು