Belagavi News In Kannada | News Belgaum

ರೂಲ್ಸ್ ಬ್ರೇಕ್ ಮಾಡಿ ಬೆಳಗ್ಗಿನ ಜಾವದವರೆಗು ಪಬ್ ನಡೆಯುತ್ತಿತ್ತು. ಕ್ರಮ ತೆಗೆದುಕೊಳ್ಳದ ಇನ್ಸ್ಪೆಕ್ಟರ್ ಸಸ್ಪೆಂಡ್

ಬೆಂಗಳೂರು: ಕರ್ತವ್ಯ ಲೋಪ ಆರೋಪದಡಿ ಕೆ.ಆರ್. ಪುರಂ ಇನ್ಸ್ ಪೆಕ್ಟರ್ ನಂದೀಶ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

 

ಕೆ.ಆರ್. ಪುರಂನಲ್ಲಿ ರೂಲ್ಸ್ ಬ್ರೇಕ್ ಮಾಡಿ‌ ಪಬ್ ನಡೆಯುತ್ತಿದ್ದು, ರೂಲ್ಸ್ ಬ್ರೇಕ್ ಮಾಡಿ ಬೆಳಗ್ಗಿನ ಜಾವದವರೆಗು ಪಬ್ ನಡೆಯುತ್ತಿತ್ತು.


ಡಿಜೆ ಹಾಕಿಕೊಂಡು ‌ಬೆಳಗ್ಗಿನ ಜಾವದವರೆಗೂ ಪಬ್ ನಡೆಯುತ್ತಿತ್ತು, ಈ‌ ಮಾಹಿತಿ ತಿಳಿದು ದಿ- ಟಾನೀಕ್ ಪಬ್​ ಮೇಲೆ ಸಿಸಿಬಿ ರೈಡ್ ಮಾಡಿದ್ದಾರೆ.

 

ಕಳೆದ ಸಿಸಿಬಿ ಅಕ್ಟೋಬರ್ 14 ರಂದು ರೈಡ್ ಮಾಡಿದ್ದು, ಈ ಪಬ್ ವಿರುದ್ದ ಯಾವುದೇ ಕ್ರಮಕೈಗೊಳ್ಳದೆ ಇನ್ಸ್ ಪೆಕ್ಟರ್ ನಂದೀಶ್ ಪರ್ಮಿಷನ್ ನೀಡಿದ್ದರು. ಸಿಸಿಬಿ ರೈಡ್ ಹಿನ್ನೆಲೆ ಪೊಲೀಸ್ ಕಮೀಷನರ್ ಪ್ರತಾಪರೆಡ್ಡಿ ವರದಿ ಪಡೆದಿದ್ದು, ಹಿರಿಯ ಅಧಿಕಾರಿಗಳ ವರದಿ ಆಧಾರಿಸಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.