Belagavi News In Kannada | News Belgaum

ಕೆಲಸ ಮಾಡುತ್ತಾ ಅಲ್ಲಿಯೇ ಕಳ್ಳತನ ಮಾಡಿದ ಆರೋಪಿಯ ಬಂಧನ

ಬೆಳಗಾವಿ: ಕೆಲಸ ಮಾಡುತ್ತಾ ಕಳ್ಳತನ ಮಾಡಿದ ಆರೋಪಿಯ ಬಂಧನ. ವಿನಾಂಕ: 23-10-2022 ರಂದು ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಪೊರ್ಟ ರೋಡ, ದೇಶಪಾಂಡೆಗಲ್ಲಿಯಲ್ಲಿ ಠಾಕೂರಶಿಂಗ್ ತಂದೆ ಜಬರಶಿಂಗ್, ಸಾ: ಅಸೊತ್ರಾ, ತಾ: ಪಚ್ಚಪದ್ರಾ ಜಿಲ್ಲೆ: ಬಾಡಮೇರ, ರಾಜ್ಯ: ರಾಜಸ್ಥಾನ, ಇವರ ಕಾವೇಲಿ ಅಟೊ ಮೋಬೈಲ್ಲದಲ್ಲಿ ಕೆಲಸ ಮಾಡುವ ರಾಜಸ್ಥಾನ ಮೂಲದ ಒಬ್ಬನು ಹಣ ಹಾಗೂ ದ್ವೀಚಕ್ರ ವಾಹನಗಳ ಬೀಡಿ ಬಾಗಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 172/2022, ಕಲಂ 381 ಐ.ಪಿ.ಸಿ ನೇ ಪ್ರಕರಣ ದಾಖಲಾಗಿ ತನಿಖೆ ಕೈಕೊಂಡಿದ್ದರು .

ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾನ್ಯ ಎನ್ ದ್ದಿ ಬರಮನಿ, ಎಸಿಪಿ, ಮಾರ್ಕೇಟ್ ಉಪವಿಭಾಗ ಬೆಳಗಾವಿ ನಗರ ರವರ ನೇತೃತ್ವದಲ್ಲಿ ಮಲ್ಲಕಾರ್ಜುನ ತುಳಸಿಗಲಿ, ಪಿಐ, ಶಶಿಕುಮಾರ ಕುರಳೆ, ಪಿ.ಎಸ್.ಐ ಹಾಗೂ ಸಿಬ್ಬಂದಿಯಾದ ಶಿವಪ್ಪ ತೇಲಿ, ಸಿ.ಹೆಚ್.ಸಿ, ಶಂಕರ ಕುಗಳೊಳ್ಳಿ, ಸಿಪಿಸಿ, ರವರ ತಂಡ ಸದರ ಪ್ರಕರಣದಲ್ಲಿಯ ಆರೋಪಿತರ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಿ ಮಹಾರಾಷ್ಟರ ರಾಜ್ಯದ ಮುಂಬೈ ಪೊಲೀಸರ ಸಹಕಾರದಿಂದ ಆರೋಪಿತನಿಗೆ ಪತ್ತೆ ಮಾಡಿ ದಸ್ತಗೀಲಿಯನ್ನು ಮಾಡಿ 1] ಒಂದು ಮೋಬೈಲ ಅಕಿ=3,000/-ರೂ. 2] 2,000/-ರೂ ಹಣ 3] ಯುನಿಕ್ಸ್ ಮಿಂಡಾ, ಸ್ಪಾರ್ಕ, ಕೆ.ಯು.ಕಂಪನಿಯ ಡ್ರಮ್ಸ್, 4]ಕೆ.ಟಿ.ಎಲ್. ಪುಟ್ ರೆಸ್ಟ ಡಿ ಬಾಗ, ಅಕಿ-2,24,791/-ರೂ. ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡು ಈ ದಿವಸ ದಿನಾಂಕ: 28-10-2022 ರಂದು ಆರೋಪಿತರನ್ನು ಮಾನ್ಯ ನ್ಯಾಯಾಲಯಲಕ್ಕೆ ಹಾಜರಪಡಿಸಿದ್ದು ಇರುತ್ತದೆ.

ಸದರಿ ಮಾರ್ಕೇಟ್ ಪೊಲೀಸ್ ಠಾಣಿಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯದಕ್ಷತೆಯನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ರವರು ಮೆಚ್ಚುಗೆ ವ್ಯಕ್ತ ವ್ಯಕ್ತಪಡಿಸಿದ್ದಾರೆ .