Belagavi News In Kannada | News Belgaum

23 ಕೋಟಿ ವೆಚ್ಚದಲ್ಲಿ ರಾಮತೀರ್ಥ ನಗರದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಅನಿಲ ಬೆನಕೆ

ಬೆಳಗಾವಿ:ದಿನಾಂಕ 30.10.2022 ರ ರವಿವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬೆಳಗಾವಿ ನಗರಾಬಿವೃಧ್ದಿ ಪ್ರಾಧಿಕಾರದ ಅನುದಾನದಲ್ಲಿ ರಾಮತೀರ್ಥ ನಗರದ ಸ್ಕೀಮ ನಂ. 35+43+43ಎ ಇಲ್ಲಿ 23 ಕೋಟಿಗಳ ಅನುದಾನದಡಿಯಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ, ನಾಲಾ, ಚರಂಡಿ, ಅಲಂಕಾರಿಕ ಬೀದಿ ದೀಪ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅವರ ಅಮೃತ ಹಸ್ತದಿಂದ ಭೂಮಿ ಪೂಜೆಯನ್ನು ಮಾಡುವುದರೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ರಾಮತೀರ್ಥ ನಗರದ ಸ್ಥಳೀಯ ನಿವಾಸಿಗಳ ಅನೇಕ ವರ್ಷಗಳ ಬೇಡಿಕೆಯ ಅನುಸಾರ ಇಂದು ಬೆಳಗಾವಿ ನಗರಾಬಿವೃಧ್ದಿ ಪ್ರಾದಿಕಾರದ ವತಿಯಿಂದ 27 ಕೋಟಿಗಳ ಅನುದಾನದಲ್ಲಿ ಈಗಾಗಲೇ 4 ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಯನ್ನು ಮಾಡಲಾಗಿದ್ದು, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. ಅದರಂತೆಯೇ 23 ಕೋಟಿಗಳ ಅನುದಾನದಲ್ಲಿ ನಾಗರಿಕರ ಮೂಲಭೂತ ಸೌಲಭ್ಯಗಳಾದ ರಸ್ತೆ, ನಾಲಾ, ಚರಂಡಿ, ಅಲಂಕಾರಿಕ ಬೀದಿ ದೀಪ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದ ಅವರು ಕಾಮಗಾರಿಗಳಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಸಾರ್ವಜನಿಕರು ಕ್ಷೇತ್ರದ ಅಭಿವೃಧ್ದಿ ಸಹಕರಿಸಿ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸುವಂತೆ ತಿಳಿಸಿದರು.

ಎರಡು ವರ್ಷಗಳ ಕೋರೋನಾ ಮಹಾಮಾರಿ ಹಾಗೂ ಅಕಾಲಿಕ ಮಳಿಯಿಂದಾಗಿ ಅಭಿವೃದ್ದಿ ಕಾಮಗಾರಿಗಳ ವೇಗವು ಕಡಿಮೆ ಆಗಿ ಜನರಿಗೆ ಸಮಸ್ಯೆಯಾಗಿತ್ತು. ಆದ್ದರಿಂದ ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಅನುದಾನದಡಿಯಲ್ಲಿ ಬರುವ ದಿನಗಳಲ್ಲಿ ನಗರದ ಎಲ್ಲ ಪ್ರದೇಶಗಳ ಅಭಿವೃಧ್ದಿಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿಯನ್ನು ನೀಡಿದರು. ಒಟ್ಟಾರೆಯಾಗಿ ಉತ್ತರ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಜನರು ಸಹಾಯ ಸಹಕಾರವನ್ನು ನೀಡಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವಂತೆ ಆಶೀರ್ವದಿಸಬೇಕೆಂದು ಮನವಿಯನ್ನು ಮಾಡಿದ ಅವರು ಸಕಾಲಕ್ಕೆ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕೆಂದು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ರಾಮತೀರ್ಥ ನಗರದ ನಿವಾಸಿಗಳು ಹಾಗೂ ಮುಖಂಡರುಗಳು ಶಾಸಕರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬೆಳಗಾವಿ ನಗರಾಭಿವೃಧ್ದಿ ಪ್ರಾಧಿಕಾರದ ಅಧಿಕಾರಿಗಳಾದ ಸಹಾಯಕ ಅಭಿಯಂತರುಗಳಾದ ಎಸ್. ಸಿ. ನಾಯಿಕ, ಪ್ರಸನ್ನಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಿರೇಮಠ, ನಗರ ಸೇವಕ ಹಣಮಂತ ಕೋಂಗಾಲಿ, ವಿಲಾಸ ಕೇರೂರ, ಎನ್. ಬಿ. ನಿರ್ವಾಣಿ, ಎಸ್. ಎಸ್. ಕಿವಡಸನ್ನವರ, ಸುರೇಶ ಯಾಧವ, ಜೈನ, ಎಮ್. ಟಿ. ಪಾಟೀಲ, ಸಂತೋಷ ದೇಸಾಯಿ, ಬಸವರಾಜ ಯರಗಣಿ, ಆನಂದ ದೇಸಾಯಿ, ನವೀನ ಹಿರೇಮಠ, ಮೃತ್ಯುಂಜಯ ಕುಲಕರ್ಣಿ, ಗುರುದೇವ ಪಾಟೀಲ, ಚೌಡಪ್ಪನ್ನವರ, ರಾಮತೀರ್ಥ ನಗರದ ಸಮಸ್ತ ಗುರು ಹಿರಿಯರು ಹಾಗೂ ಗುತ್ತಿಗೆದಾರರಾದ ಯಂಕಂಚಿ, ಕೆ.ಕೆ.ಬಿ. ಕನಸ್ಟ್ರಕ್ಷನ್ ಮತ್ತು ಎನ್.ಎಸ್. ಬಿರಾದಾರ ಉಪಸ್ಥಿತರಿದ್ದರು./////