Belagavi News In Kannada | News Belgaum

ನಾಳೆ ಬೆಳಗಾವಿಯಲ್ಲಿ ಅದ್ದೂರಿ ರಾಜ್ಯೋತ್ಸವಕ್ಕೆ ಪೊಲೀಸ್ ಬಿಗಿ ಬಂದೋಬಸ್ತ

ಬೆಳಗಾವಿ: ಅದ್ದೂರಿ ರಾಜ್ಯೋತ್ಸವದ ಆಚರಣೆಗೆ ಸಿದ್ಧತೆ ನಡೆಸಿದ್ದರೇ, ಬೆಳಗಾವಿ ನಗರ ಪೊಲೀಸರು ರಾಜ್ಯೋತ್ಸವದ ಆಚರಣೆಗೆ ಕಪ್ಪು‌ ಚುಕ್ಕೆ ಬರದಂತೆ ಬಿಗಿ ಬಂದೋಬಸ್ತ ಏರ್ಪಡಿಸಿದ್ದಾರೆ.
ಬೆಳಗಾವಿ ನಗರದಲ್ಲಿ ರಾಜ್ಯೋತ್ಸವದ ಬಂದೋಬಸ್ತ್  ಅಂಗವಾಗಿ  3 ಡಿಸಿಪಿಗಳು, 12 ಎಸಿಪಿಗಳು, 52 ಇನ್ಸ್‌ಪೆಕ್ಟರ್‌ಗಳು, 2500 ಸಿಬ್ಬಂದಿ ಮತ್ತು ಇತರ ಶ್ರೇಣಿಯ ಅಧಿಕಾರಿಗಳು, 9 ಸಿಎಆರ್ ಪ್ಲಟೂನ್‌ಗಳು, 10 ಕೆಎಸ್‌ಆರ್‌ಪಿ ತುಕಡಿಗಳು, 500 ಹೋಮ್ ಗಾರ್ಡ್‌ಗಳು, 8 ಡ್ರೋನ್ ಕ್ಯಾಮೆರಾಗಳು,300 ಸಿಸಿಟಿವಿ, 35 ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.//////