Belagavi News In Kannada | News Belgaum

ನ.1 ರಂದು ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ

ಬೆಳಗಾವಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಂಚಾರ ಮಾರ್ಗ ಬದಲಾವಣೆ ಮಾಡಿ ಪೊಲೀಸ್ ಕಮಿಷನರೇಟ್ ಪ್ರಕಟಣೆ ಹೊರಡಿಸಿದೆ.
ನ.1 ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೆರವಣಿಗೆಯು ನಗರದ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ಕೃಷ್ಣದೇವರಾಯ ವೃತ್ತ, ಡಾ. ಬಿ.ಆರ್.ಅಂಬೇಡ್ಕರ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕಾಕತಿ ವೇಸ್, ಶನಿವಾರ ಖೂಟ, ಗಣಪತ ಗಲ್ಲಿ, ಕಂಬಳಿ ಖೂಟ, ಮಾರುತಿ ಗಲ್ಲಿ, ಹುತಾತ್ಮಾ ಚೌಕ, ಕಿರ್ಲೋಸ್ಕರ ರಸ್ತೆ, ಬೋಗಾರವೇಸ್ ವೃತ್ತ, ಯಂಡೇಖೂಟ, ಕಾಲೇಜ್ ರಸ್ತೆ ಮಾರ್ಗಗಳಲ್ಲಿ ಸಂಚರಿಸಿ ಲಿಂಗರಾಜ ಕಾಲೇಜ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕುರಿತುನ.1 ರಂದು ಬೆಳಿಗ್ಗೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನಂತೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಕೋರಲಾಗಿದೆ.
1) ಚಿಕ್ಕೋಡಿ, ಸಂಕೇಶ್ವರ, ಕೊಲ್ಲಾಪೂರ ಕಡೆಯಿಂದ ಕೆಎಲ್‌ಇ ರಸ್ತೆ, ಕೃಷ್ಣದೇವರಾಯ (ಕೊಲ್ಲಾಪುರ) ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಜಿನಾಬಾಕುಲ್ ಸರ್ಕಲ್ ಹತ್ತಿರ ಬಲತಿರುವು ಪಡೆದುಕೊಂಡು ಬಾಕ್ಸೈಟ್ ರಸ್ತೆ, ಹಿಂಡಲಗಾ ಫಾರೆಸ್ಟ್ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್ (ಅರಗನ ತಲಾಬ್), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಕೇಂದ್ರಿಯ ವಿದ್ಯಾಲಯ ನಂ.2, ಶರ್ಕತ್ ಪಾರ್ಕ್, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಾಗುವುದು.
2) ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಖಡೇಬಜಾರ ರಸ್ತೆ ಮೂಲಕ ಶನಿವಾರ ಖೂಟ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಕೇಂದ್ರ ಬಸ್ ನಿಲ್ದಾಣ ಹತ್ತಿರ ಎಡ ತಿರುವು ಪಡೆದು ಜೀಜಾಮಾತಾ ಸರ್ಕಲ್, ವಿಆರ್‌ಎಲ್ ಲಾಜೆಸ್ಟಿಕ್, ಹಳೆ ಪಿಬಿ ರಸ್ತೆ ಮುಖಾಂತರ ಮುಂದೆ ಸಂಚರಿಸುವುದು.
3) ಜೀಜಾಮಾತಾ ಸರ್ಕಲ್, ದೇಶಪಾಂಡೆ ಪೆಟ್ರೋಲ್ ಪಂಪ್ ಕಡೆಗಳಿಂದ ನರಗುಂದಕರ ಭಾವೆ ಚೌಕ/ಕಂಬಳಿ ಖೂಟ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ರವಿವಾರ ಪೇಠ, ಪಿಂಪಳ ಕಟ್ಟಾ ಹತ್ತಿರ ಎಡತಿರುವು ಪಡೆದುಕೊಂಡು ಪಾಟೀಲ ಗಲ್ಲಿ, ರೈಲ್ವೆ ಸ್ಟೇಶನ್ ರಸ್ತೆ ಮಾರ್ಗವಾಗಿ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಂಚರಿಸುವುದು.
4) ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮೂಲಕ ಗೋವಾ ಹಾಗೂ ಖಾನಾಪುರ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು, ಹಳೆ ಪಿಬಿ ರಸ್ತೆ, ಜೀಜಾಮಾತಾ ವೃತ್ತ, ವಿಆರ್‌ಎಲ್ ಲಾಜಿಸ್ಟಿಕ್, ಹೊಸೂರ ಪಿಂಪಳ ಕಟ್ಟಾ ಡಬಲ್ ರಸ್ತೆ, ಬಸವೇಶ್ವರ ಸರ್ಕಲ್ ಗೋವಾವೇಸ್ ಮಾರ್ಗವಾಗಿ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಾಗುವುದು.
5) ಖಾನಾಪುರ ಹಾಗೂ ಗೋವಾ ಕಡೆಗಳಿಂದ ನಗರ ಪ್ರವೇಶಿಸುವ ಎಲ್ಲ ಮಾದರಿ ವಾಹನಗಳು ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ ಪಾರ್ಕ್ , ಕೇಂದ್ರಿಯ ವಿದ್ಯಾಲಯ ನಂ.2, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಗಾಂಧಿ ಸರ್ಕಲ್ (ಅರಗನ ತಲಾಬ್), ಹಿಂಡಲಗಾ ಗಣೇಶ ಮಂದಿರ, ಹಿಂಡಲಗಾ ಫಾರೆಸ್ಟ ನಾಕಾ, ಬಾಕ್ಸೈಟ್ ರಸ್ತೆ, ಜಿನಾ ಬಾಕುಲ್ ಸರ್ಕಲ್ ಸೇರಿ ಮುಂದೆ ಸಾಗುವುದು. ಕೆಎಸ್‌ಆರ್‌ಟಿಸಿ ಬಸ್ಸುಗಳು ಇಂಡಾಲ್ಕೊ ಸರ್ಕಲ್ ಅಂಡರ್ ಬ್ರಿಜ್, ರಾಷ್ಟ್ರೀಯ ಹೆದ್ದಾರಿ-4, ಕ್ಯಾನ್ಸರ್ ಆಸ್ಪತ್ರೆ ಮುಂದೆ ತಿರುವು ಪಡೆದುಕೊಂಡು ಕನಕದಾಸ ಸರ್ಕಲ್ ಮೂಲಕ ಬಸ್ ನಿಲ್ದಾಣ ಪ್ರವೇಶಿಸುವುದು.
6) ಕೇಂದ್ರ ಬಸ್ ನಿಲ್ದಾಣದಿಂದ ಅಥಣಿ, ಚಿಕ್ಕೋಡಿ, ಕೊಲ್ಲಾಪುರ, ಸಂಕೇಶ್ವರ ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಅಶೋಕ ಪಿಲ್ಲರ್, ಕನಕದಾಸ ವೃತ್ತ, ಕ್ಯಾನ್ಸರ್ ಆಸ್ಪತ್ರೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿ-೪ ರ ಮೂಲಕ ಸಂಚರಿಸುವುದು.
7) ಅಥಣಿ, ಚಿಕ್ಕೋಡಿ. ಕೊಲ್ಲಾಪುರ, ಸಂಕೇಶ್ವರ ಕಡೆಯಿಂದ ನಗರ ಪ್ರವೇಶಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ-4, ಕ್ಯಾನ್ಸರ್ ಆಸ್ಪತ್ರೆ ಮುಂದೆ ತಿರುವು ಪಡೆದುಕೊಂಡು ಕನಕದಾಸ ಸರ್ಕಲ್ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು. ಮಾಳಮಾರುತಿ ಪೊಲೀಸ್ ಠಾಣಾ ಹದ್ದಿಯಿಂದ ರೂಪಕ ವಾಹನಗಳು ಬರುವ ಸಮಯದಲ್ಲಿ ಕ್ಯಾನ್ಸರ್ ಆಸ್ಪತ್ರೆ, ಮುಚ್ಚಂಡಿ ಗ್ಯಾರೇಜ್, ಸಾಂಬ್ರಾ ಅಂಡರ್ ಬ್ರಿಜ್, ಗಾಂಧಿನಗರ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು.
8) ಹಿರೇಬಾಗೆವಾಡಿ ಹಾಗೂ ಮಾರಿಹಾಳ ಪೊಲೀಸ್ ಠಾಣಾ ಹದ್ದಿಯಿಂದ ರೂಪಕ ವಾಹನಗಳು ಬರುವ ಸಮಯದಲ್ಲಿ ಬಾಗಲಕೋಟ, ನೇಸರಗಿ, ಯರಗಟ್ಟಿ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್ ಗಳು ಗಾಂಧಿನಗರ, ಫ್ರುಟ್ ಮಾರ್ಕೆಟ್, ಕನಕದಾಸ ಸರ್ಕಲ್ ಮೂಲಕ ಬಸ್ ನಿಲ್ದಾಣ ಪ್ರವೇಶಿಸುವುದು.
9) ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಕೃಷ್ಣದೇವರಾಯ ವೃತ್ತ ಅಥವಾ ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸುವುದು.
10) ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುತ್ತಿದೆ.
11) ಮೆರವಣೆಗೆ ಸಾಗುವ ಮಾರ್ಗವಾದ ಡಾ. ಬಿ.ಆರ್.ಅಂಬೇಡ್ಕರ ರಸ್ತೆ, ಚನ್ನಮ್ಮಾ ವೃತ್ತ, ಕಾಕತಿ ವೇಸ್, ಶನಿವಾರ ಖೂಟ, ಗಣಪತ ಗಲ್ಲಿ, ಕಂಬಳಿ ಖೂಟ, ನರಗುಂದಕರ ಭಾವೆ ಚೌಕ, ರವಿವಾರ ಪೇಠೆ, ಕರ್ನಾಟಕ ಚೌಕ, ಪಿಂಪಳ ಕಟ್ಟಾ, ಕಲ್ಮಠ ರಸ್ತೆ, ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮಾ ಚೌಕ, ಕಿರ್ಲೋಸ್ಕರ ರಸ್ತೆ, ಬೋಗಾರವೇಸ್ ವೃತ್ತ, ಯಂಡೇಖೂಟ, ಕಾಲೇಜ ರಸ್ತೆಗಳಲ್ಲಿ  ನ.1 ರಂದು ಬೆಳಗ್ಗೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
12) ನ.1ರಂದು ಬೆಳಿಗ್ಗೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳು ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.
ಮೆರವಣಿಗೆ ವೀಕ್ಷಿಸಲು ಬರುವ ಸಾರ್ವಜನಿಕರ ವಾಹನಗಳ ನಿಲುಗಡೆ ಕುರಿತು ಗುರುತಿಸಲಾದ ಸ್ಥಳಗಳ ವಿವರ:
• ಕೆಎಲ್‌ಇ ಆಸ್ಪತ್ರೆ ರಸ್ತೆಯ ಕೆಇಬಿ ಇಲಾಖೆಯವರ ತೆರೆದ ಸ್ಥಳ
• ಧರ್ಮನಾಥ ಭವನ ಹತ್ತಿರದ ಮಹಾನಗರ ಪಾಲಿಕೆಯ ತೆರೆದ ಸ್ಥಳ
• ಹಳೆ ಭಾಜಿ ಮಾರ್ಕೆಟ್
• ಬೆನನ್‌ಸ್ಮಿತ್ ಕಾಲೇಜ್ ಮೈದಾನ, ಕಾಲೇಜ್ ರಸ್ತೆ
• ಸಿಪಿಎಡ್ ಕಾಲೇಜ್ ಮೈದಾನ, ಕ್ಲಬ್ ರಸ್ತೆ
• ಆಸದ್ ಖಾನ್ ದರ್ಗಾ ಹತ್ತಿರದ ತೆರೆದ ಸ್ಥಳ, ಗ್ಲೋಬ್ ಸರ್ಕಲ್ ಹತ್ತಿರ, ಕ್ಯಾಂಪ್
• ಮರಾಠಾ ವಿದ್ಯಾನಿಕೇತನ ಶಾಲೆಯ ಮೈದಾನ [ದೇಶಪಾಂಡೆ ಖೂಟ ಹತ್ತಿರ]///////