Belagavi News In Kannada | News Belgaum

ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ

ಬೆಳಗಾವಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾ ಭವನದಲ್ಲಿ ಶನಿವಾರ (ನ.5) ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಅರಿವು ಮೂಡಿಸಲು ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳ ಆಯ್ಕೆ ಪ್ರೆಕ್ರಿಯೆ ನಡೆಯಿತು.

ಕ್ಷೀರಭಾಗ್ಯ, ಉಚಿತ ಶಿಕ್ಷಣ, ಉಚಿತ ಪುಸ್ತಕಗಳ ವಿತರಣೆ, ಸ್ವಚ್ಚ ಭಾರತ ಅಭಿಯಾನ, ಆರೋಗ್ಯ ಇಲಾಖೆಯ ಆಯುμÁ್ಮನ್ ಭಾರತ, ಮಾತೃಪೂರ್ಣ, ಯಶಸ್ವಿನಿ, ಕೃಷಿ ಸಮ್ಮಾನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ತಂಡಗಳು ಪ್ರದರ್ಶನ ನೀಡಿದವು.

ಈ ವೇಳೆ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸಲು ಕಲಾ ತಂಡಗಳು ಆಯ್ಕೆ ಮಾಡಲಾಗುತ್ತಿದೆ.

ಆಯ್ಕೆಯಾದ ತಂಡಗಳು ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡು, ಜನರಿಗೆ ಸುಲಭವಾಗಿ ಅರ್ಥವಾಗುವ ಮಾದರಿಯಲ್ಲಿ ನಾಟಕ, ಸಂಗೀತ ಕಲೆಗಳನ್ನು ಪ್ರದರ್ಶಿಸಬೇಕು. ಗ್ರಾಮೀಣ ಭಾಗಗಳಲ್ಲಿ ಅನೇಕರಿಗೆ ಯೋಜನೆಗಳ ಕುರಿತು ಮಾಹಿತಿ ಇರುವುದಿಲ್ಲ ತಂಡಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಸರಳ ಮಾದರಿಯಲ್ಲಿ ತಮ್ಮ ಕಲೆಗಳ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಬೀದಿ ನಾಟಕ ಪ್ರದರ್ಶನ:

ಚಿಂಚಲಿಯ ಡಾ. ಅಂಬೇಡ್ಕರ್ ಜನಪದ ಕಲಾಪೆÇೀಷಕರ ಸಂಘ, ಚಿಕ್ಕೋಡಿ ತಾಲೂಕಿನ ಧುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘ, ಚಿಂಚಲಿಯ ಡಾ. ಅಂಬೇಡ್ಕರ್ ಸಾಂಸ್ಕøತಿಕ ಯುವ ನಾಕ ಕಲಾ ಸಂಘ ಬೀದಿ ನಾಟಕ ಕಲಾ ತಂಡಗಳು ಪ್ರದರ್ಶನ ನೀಡಿದವು.

ಸಂಗೀತ ಕಲಾ ತಂಡಗಳ ಪ್ರದರ್ಶನ:

ಅದೇ ರೀತಿಯಲ್ಲಿ ಮೂಡಲಗಿ ತಾಲೂಕಿನ ಕಲ್ಲೋಳ್ಳಿಯ ಶ್ರೀ ವೀರಭದ್ರೇಶ್ವರ ಜಾನಪದ ಕಲಾ ಪೆÇೀಷಕ ಸಂಘ ಹಾಗೂ ಹುಲಕುಂದ ರಾಮಲಿಂಗೇಶ್ವರ ಜಾನಪದ ಕಲಾ ಸಂಘ, ಹಿರೇಅಂಗ್ರೋಳ್ಳಿಯ ಶ್ರೀ ಬಸವೇಶ್ವರ ಗೀಗೀ ಜಾನಪದ ಕಲಾಸಂಘ, ಕಳ್ಳೂರ ರೇಣುಕಾ ಗೀಗಿಮೇಳ ಕಲಾ ತಂಡ, ದುಳಗನವಾಡಿ ರಂಗಳಲಾಶ್ರೀ ಗ್ರಾಮೀಣ ಸೇವಾ ಸಂಘದ ಕಲಾ ತಂಡಗಳು ಸರ್ಕಾರದ ವಿವಿಧ ಯೋಜನೆಗಳ ಕುರಿತು ಕಲೆಗಳನ್ನು ಪ್ರದರ್ಶಿಸಿದವು.

ಸಾಹಿತಿ, ಕಲಾವಿದರಾದ ಶಿರಿμï ಜೋಶಿ, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಳಗೆನ್ನವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿನಿಧಿ ಪಠಾಣ ಮತ್ತಿತರರು ಆಯ್ಕೆ ಸಮಿತಿ ಸದಸ್ಯರಾಗಿ ಪಾಲ್ಗೊಂಡಿದ್ದರು.//////