Belagavi News In Kannada | News Belgaum

3 ಕೋಟಿ 95 ಲಕ್ಷಗಳ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಅನಿಲ ಬೆನಕೆ :

ಬೆಳಗಾವಿ : ದಿನಾಂಕ 07.11.2022 ರ ಸೋಮವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಲೋಕೋಪಯೋಗಿ ಇಲಾಖೆಯಡಿ 3 ಕೋಟಿ 95 ಲಕ್ಷಗಳ ಅನುದಾನದಡಿಯಲ್ಲಿ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಅವರ ಅಮೃತ ಹಸ್ತದಿಂದ ಭೂಮಿ ಪೂಜೆಯನ್ನು ಸಲ್ಲಿಸುವುದರೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ವೇಳೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆಯ ವತಿಯಿಂದ ಬೆಳಗಾವಿ ನಗರದ ಪಾಟೀಲ ಗಲ್ಲಿ, ನರಗುಂದಕರ ಬಾವೆ ಚೌಕದಿಂದ ಶನಿ ಮಂದಿರವರೆಗೆ ರಸ್ತೆ ಅಭಿವೃಧ್ದಿ ಪಡಿಸುವುದು, ಪಾಟೀಲ ಮಾಳಾ ಮತ್ತು ಮುಜಾವರ ಗಲ್ಲಿ, ಕುಲಕರ್ಣಿ ಗಲ್ಲಿ, ಅನಂತಶಯನ ಗಲ್ಲಿ, ಕಲ್ಮಠ ರಸ್ತೆ ಮತ್ತು ಶೇರಿ ಗಲ್ಲಿ, ದೇಶಪಾಂಡೆ ಗಲ್ಲಿ, ಬಸವನ ಗಲ್ಲಿಯ ಒಳರಸ್ತೆಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆಯನ್ನು ಸಲ್ಲಿಸಲಾಗಿದ್ದು, ಸಾರ್ವಜನರಿಕರು ಕಾಮಗಾರಿಗಳಿಗೆ ಸಹಕರಿಸುವಂತೆ ಕೋರಿದರು. ಗುತ್ತಿಗೆದಾರರು ಮತ್ತು ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಾಮಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳಾದ ನಾಯಿಕ, ನಗರ ಸೇವಕರಾದ ಪೂಜಾ ಪಾಟೀಲ, ವೈಶಾಲಿ ಭಾತಖಂಡೆ, ಸಂತೋಷ ಫೆಡ್ನೇಕರ, ಜಯತೀರ್ಥ ಸವದತ್ತಿ, ಸ್ಥಳಿಯರಾದ ಇಂದ್ರಜಿತ ಪಾಟೀಲ, ಸಿದ್ದಾರ್ಥ ಭಾತಖಂಡೆ, ಪ್ರಸಾದ ಚೌಗುಲೆ, ಅರುಣ ಬೆಲ್ಲದ, ವಿಜಯ ಭದ್ರಾ, ರಾಜು ವೈಜನ್ನವರ, ಬಾಳು ತೋಪಿನಕಟ್ಟಿ, ಈಶ್ವರ ತೋಪಿನಕಟ್ಟಿ, ಚಾಣಕ್ಯ ಯುವಕ ಮಂಡಳ ಸದಸ್ಯರು, ಸತೀಶ ಗೌರಗೊಂಡಾ, ಭರತ ಕರೆನ್ನವರ, ಹರಿಶ ಉಪರಾಣಿ, ಮಹಿಳಾ ಮಂಡಳ ಸದಸ್ಯರು ಹಾಗೂ ಸ್ಥಳೀಯ ಎಲ್ಲ ಹಿರಿಯರು ಮತ್ತು ಕಾರ್ಯಕರ್ತರು ಗುತ್ತಿಗೆದಾರ ಎನ್.ಎಸ್. ಚೌಗುಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು//////