Belagavi News In Kannada | News Belgaum

ಬೈಕ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಬೈಕ್ ಸವಾರ ಮತ್ತು ಹಿಂಬದಿ ಯುವಕ ಗಂಭೀರ ಗಾಯ

ಕೊಪ್ಪಳ: ಗಂಗಾವತಿ ಬೈಕ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಬೈಕ್ ಸವಾರ ಮತ್ತು ಹಿಂಬದಿ ಯುವಕ ಗಂಭೀರ ಗಾಯಗೊಂಡಿದ್ದು ಬೈಕ್ ವಾಹನ ಸಂಖ್ಯೆ KA37 EF2667 ಹಾಗೂ ಟ್ರ್ಯಾಕ್ಟರ ಸಂಖ್ಯೆ KA37TB4076 ಇದ್ದು ಕೊಪ್ಪಳ ಜಿಲ್ಲಾಆಸ್ಪತ್ರೆಗೆ ಸ್ಥಳಿಯರಿಂದ ಅಂಬ್ಯೂಲೆನ್ಸಗೆ ಪೋನ ಮಾಡಿ ಅಪಘಾತದಲ್ಲಿ ಗಂಭಿರ ಗಾಯಗೊಂಡಿದ್ದ ಯುವಕರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಗೊಂಡ ಒರ್ವ ವ್ಯಕ್ತಿ ಬೆಳಗಾವಿ ಮೂಲದ ಬೆಳಗಾವಿ ದಿನಪತ್ರಿಕೆಯ ವಿಜಿಟಿಂಗ ಕಾರ್ಡ ಇಟ್ಟುಕೊಂಡಿದ್ದು ನಂತರ ಸ್ಥಳಿಯರು ಈ ನಂಬರಿಗೆ ಕಾಲ್ ಮಾಡುವ ಮುಖಾಂತರ ಸರ್ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರ ಬೀಕರ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು.ಇವರ ಮೊಬೈಲ್ ಹಿಂದುಗಡೆ ನಿಮ್ಮ ಪತ್ರಿಕೆಯ ವಿಜಿಟಿಂಗ ಕಾರ್ಡ ಇತ್ತು ಆದ್ದರಿಂದ ನಿಮಗೆ ಸಂಪರ್ಕ ಮಾಡಿದ್ದೆವೆ ಸರ್ ನಿಮಗೇನಾದ್ರು ಪರಿಚಯ ಇದ್ದಾರೆ ಅಂತ ಕೇಳಿದರು ಆದರೆ ಮಾನವೀಯತೆ ದ್ರಷ್ಟಿಯಿಂದ ಈ ವಿಚಾರ ತಿಳಿದು ಬೆಳಗಾವಿ ವರದಿ ದಿನಪತ್ರಿಕೆ ಸಂಪಾದಕರು ಈ ವಿಷಯವನ್ನ ಪತ್ರಿಕೆಯಲ್ಲಿ ಹಾಕಿ ಗಾಯಗೊಂಡವರ ಬಗ್ಗೆ ಮಾಹಿತಿ ಪಡೆಯಲು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಇವರ ಸಂಬದಿಕರು ಆಸ್ಪತ್ರೆ ಕಡೆ ಹೋಗಬೇಕಾಗಿದೆ ಎಂದು ಪತ್ರಿಕೆಯಲ್ಲಿ ಪ್ರಕಟಪಡಿಸಿದ್ದಾರೆ. ಇನ್ನು ಅಪಘಾತದ ಸ್ಥಳಕ್ಕೆ ಸಮೀಪದ ಪೋಲಿಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.