Belagavi News In Kannada | News Belgaum

ರಾಷ್ಟ್ರೀಯ  ಹೆದ್ದಾರಿ 4ರಲ್ಲಿ ಸರಣಿ ಅಪಘಾತ

ಬೆಳಗಾವಿ: ರಾಷ್ಟ್ರೀಯ  ಹೆದ್ದಾರಿ 4ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಅಬ್ಬರಕ್ಕೆ ಟ್ರ್ಯಾಕ್ಟರ್ ಚಾಲಕ ಮೃತಪಟ್ಟಿದ್ದು,  ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಹಿರೇಬಾಗೆವಾಡಿಯ ಬಡೆಕೊಳ್ಳಮಠದ ವ್ಯಾಪ್ತಿಯಲ್ಲಿ ಮದ್ಯಾಹ್ನ ನಡೆದಿದೆ.

ಚ.ಕಿತ್ತೂರಿನ ಮೆಹಬೂಬ್ ಸುಬಾನಿ ಮುಗುಟಸಾಬ್ ಜಮಾದಾರ (20) ಮೃತ ಚಾಲಕ.  ಬೈಕ್‌ ಸವಾರರಾದ ಗಾಯಾಳು ಪ್ರಜ್ವಲ ಗಣೇಶ ಕಲ್ಲೂರ, ಶಿವಾನಂದ  ಕಲ್ಲೂರ.   ಬೆಳಗಾವಿಯಿಂದ ಧಾರವಾಡ ಕಡೆಗೆ ಸಾಗುತ್ತಿರುವ ಲಾರಿಯೊಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು,  ಟ್ರ್ಯಾಕ್ಟರ್ ಸಹ  ಪಕ್ಕದಲ್ಲಿದ್ದ  ಬೈಕ್‌ ಸವಾರಿಗೆ ಡಿಕ್ಕಿ ಹೊಡೆದಿದೆ.

ಒಂದಕ್ಕೊಂದು ಅಪ್ಪಳಿಸಿ   ಲಾರಿ ಪಲ್ಟಿಯಾಗಿದೆ. ಟ್ರ್ಯಾಕ್ಟರ್ ಎರಡು ದುಂಡಾಗಿದ್ದು, ಬೈಕ್‌ ಸವಾರರ ಸ್ಥತಿ ಚಿಂತಾಜನಕವಾಗಿದೆ. ಅಲ್ಲದೇ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.