Belagavi News In Kannada | News Belgaum

ಮಲ್ಲವ್ವ ಅಜ್ಜಿ ಸಸ್ಪೆಕ್ಟೆಡ್ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿದ ಹುಕ್ಕೇರಿ ಪೊಲೀಸರು

ಹುಕ್ಕೇರಿ: ಬೆಲ್ಲದ ಬಾಗೇವಾಡಿ ಮಲ್ಲವ್ವ ಅಜ್ಜಿ ಸಸ್ಪೆಕ್ಟೆಡ್ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿದ ಹುಕ್ಕೇರಿ ಪೊಲೀಸರು
ದಿನಾಂಕ 06-10-2022 ರಂದು ರಾತ್ರಿ ವೇಳೆಯಲ್ಲಿ ಹುಕ್ಕೇರಿ ಪೊಲೀಸ್ ಠಾಣಾ ಹದ್ದಿಯ ಬೆಲ್ಲದಬಾಗೇವಾಡಿ ಗ್ರಾಮದಲ್ಲಿ ಮಲ್ಲಪ್ಪಾ ಜೀವಪ್ಪಾ ಕಮತೆ, ವಯಸ್ಸು: 75 ವರ್ಷ ಸಾ| ಕಡಹಟ್ಟಿ ಹಾಲಿವಸ್ತಿ ಬೆಲ್ಲದಬಾಗೇವಾಡಿ ತಾ|| ಹುಕ್ಕೇರಿ ಇವಳು ವಾಸಿಸುವ ಮನೆಯಲ್ಲಿ ಅನುಮಾನಸ್ಪಾದ ರೀತಿಯಲ್ಲಿ ಮೃತಪಟ್ಟ ಬಗ್ಗೆ ಮೃತಳ ಮೊಮ್ಮಗ ವಿಠಲ ಸಿದಲಿಂಗ ಹೂನೂರ ಸಾ|| ಕಡಹಟ್ಟೆ ಇವನು ಕೊಟ್ಟ ದೂರನ್ನು ಆಧರಿಸಿ ಹುಕ್ಕೇರಿ ಪೊಲೀಸ್ ಠಾಣಾ ಯುಡಿ ಸಂಖ್ಯೆ: 37/2022, ಕಲಂ 174(ಸಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಾಗಿ ನಂತರ ಮೃತಳ ಪಿ.ಎಂ.ವರದಿಯಲ್ಲಿ ವೈದ್ಯಾಧಿಕಾರಿಗಳು ಕೊಟ್ಟ ಅಭಿಪ್ರಾಯದ ಮೇಲಿಂದ ಹುಕ್ಕೇರಿ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 180/2022, ಕಲಂ 302, ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇತ್ತು.

ಸದರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಶ್ರೀ ಮನೋಜಕುಮಾರ ನಾಯಿಕ ಡಿ.ಎಸ್.ಪಿ. ಗೋಕಾಕ ಇವರು ಸದರಿ ಪ್ರಕರಣವನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ಮೊಹ್ಮದ್‌ರಫೀಕ್ ತಹಶೀಲ್ದಾರ ಪಿ.ಐ ಹುಕ್ಕೇರಿ ಮತ್ತು ಹಾಗೂ ಶ್ರೀ ಪ್ರಲ್ಲಾಹದ ಚೆನ್ನಗರಿ ಪಿ.ಐ ಸಂಕೇಶ್ವರ ಪೊಲೀಸ ಠಾಣೆ ಮತ್ತು ಸಿಬ್ಬಂದಿ ಜನರಾದ ಮಂಜುನಾಥ ಕಬ್ಬೂರೆ ಅಪ್ಪಾಹುಸೇನ ಸನದಿ ಅಜೀತ ನಾಯಿಕ ಉಮೇಶ ಅರಭಾಂವಿ ಗಜಾನನ ಕಾಂಬಳೆ ಮೂಸಾ ಅತ್ತಾರ ರವಿ ಢಂಗ ತಂಡವನ್ನು ನೇಮಿಸಿದ್ದು ಸದರಿ ತಂಡವು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದಿನಾಂಕ: 12-11-2022 ರಂದು ಇಬ್ಬರೂ ಆರೋಪಿತರಾದ 1] ಶಂಕರ ರಾಮಪ್ಪಾ ಪಾಟೀಲ, ಸಾ ಝಂಗಟಿಹಾಳ, ತಾ ಹುಕ್ಕೇರಿ, 2] ಮಹೇಶ ಸದಾಶಿವ ಕಬಾಡಗೆ, ಸಾ|| ನಂದಿಕುರಳಿ, ತಾ|| ರಾಯಬಾಗ ಇವರಿಗೆ ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಆರೋಪಿ-01 ಶಂಕರ ರಾಮಪ್ಪಾ ಪಾಟೀಲ, ಸಾ ಝಂಗಟಿಹಾಳ, ತಾ|| ಹುಕ್ಕೇರಿ ಇವನು ಮೃತಳಿಂದ 50,000/- ರೂಪಾಯಿ ಸಾಲ ಪಡೆದುಕೊಂಡಿದ್ದು ಅವಳಿಗೆ ಕೊಲೆ ಮಾಡಿದರೆ ಸಾಲ ಹಾಗೂ ಬಡ್ಡಿ ಕೊಡುವುದು ತಪ್ಪುತ್ತದೆ ಹಾಗೂ ಅವಳ ಮೈ ಮೇಲಿನ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗುವ ಬಗ್ಗೆ ಆರೋಪಿತರಿಬ್ಬರೂ ಸಂಚು ಮಾಡಿ ದಿನಾಂಕ: 06-10-2022 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಮೃತಳಿಗೆ ಸಾಲದ ಬಡ್ಡಿಕೊಡುವ ನೆಪ ಮಾಡಿಕೊಂಡು ಅವಳು ವಾಸಿಸುವ ಮನೆಗೆ ಬಂದು ಮೃತಳ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಅವಳ ಮೈ ಮೇಲಿದ್ದ ಸುಮಾರು 20 ಗ್ರಾಂ ತೂಕದ 1,00,000/- ರೂಪಾಯಿ ಬೆಲೆಯುಳ್ಳ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಸಾಕ್ಷಿಪುರಾವೆ ನಾಶಪಡಿಸುವ ಉದ್ದೇಶದಿಂದ ಅವಳ ಶವದ ಮೇಲೆ ನೀರು ಹಾಕಿ ಕೊಲೆ ಮಾಡಲು ಉಪಯೋಗಿಸಿದ ಹಗ್ಗ ಒಂದು ಕೈಚೀಲದಲ್ಲಿ ಹಾಕಿ ಅದನ್ನು ಮತ್ತು ಮೃತಳ ಕೈ ಚೀಲಗಳನ್ನು ಕಡಹಟ್ಟಿ ಹದ್ದಿಯಲ್ಲಿ ಮೃತಳ ಜಮೀನ ದಂಡಯಲ್ಲಿ ಇಟ್ಟು ಹೋದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಇಬ್ಬರೂ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಸದರಿ ಆರೋಪಿತರಿಗೆ ಪೊಲೀಸ್‌ ಕಸ್ಟಡಿ ಪಡೆದುಕೊಂಡು ಅವರು ಮೃತಳಿಗೆ ಕೊಲೆ ಮಾಡಿ ತೆಗೆದುಕೊಂಡು ಹೋದ ಬಂಗಾರದ ಆಭರಣಗಳನ್ನು ಹಾಗೂ ಮೋಟಾರ ಸೈಕಲ್ಲ ವಶಪಡಿಸಿಕೊಳ್ಳುವುದು ವಗೈರೆ ತನಿಖೆಯ ಕೆಲಸ ಬಾಕಿ ಇರುತ್ತದೆ. ಈ ಕೊಲೆ ಪ್ರಕರಣವನ್ನು ಅತೀ ಚಾಣಾಕ್ಷತನದಿಂದಾ ಪ್ರಕರಣ ಬೇದಿಸಿದ ಗೋಕಾಕ ಉಪವಿಭಾಗದ ಡಿ.ಎಸ್.ಪಿ ಶ್ರೀ ಮನೋಜ್‌ಕುಮಾರ್ ನಾಯ್ಕ ಮತ್ತು ಅವರ ತಂಡದ ಕಾರ್ಯ ವೈಖರಿಯನ್ನು ಎಸ್‌.ಪಿ ಬೆಳಗಾವಿ ರವರು ಶ್ಲಾಘಿಸಿರುತ್ತಾರೆ.