Belagavi News In Kannada | News Belgaum

ಬೆಳಗಾವಿ ತಾಲೂಕು ಸಿರಿಗನ್ನಡ ಮಹಿಳಾ ವೇದಿಕೆಯ ಉದ್ಘಾಟನಾ ಸಮಾರಂಭ

ಬೆಳಗಾವಿ:”ಪುಸ್ತಕದ ವಿದ್ಯೆಯೇ ವಿದ್ಯೆಯಲ್ಲ. ಅದರೊಂದಿಗೆ ಬದುಕಿನ ವಿದ್ಯೆಯೂ ಅಗತ್ಯ.ಇನ್ನೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಬಡ ಜನರಿಗೆ ದಾನ ಧರ್ಮ ಮಾಡುವ ಮಾನವವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ” ಎಂದು ಸಿರಿಗನ್ನಡ ಮಹಿಳಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷೆ ಜಯಶ್ರೀ ಚುನಮರಿ ಅಭಿಪ್ರಾಯ ಪಟ್ಟರು.
ಶಿಂಧೊಳ್ಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜರುಗಿದ ‘ಸಿರಿಗನ್ನಡ ಮಹಿಳಾ ವೇದಿಕೆಯ ತಾಲೂಕಾ ಘಟಕ ಉದ್ಘಾಟಿಸಿ’ ಮಾತನಾಡಿದ ಅವರು ಇಂದಿನ ಮಕ್ಕಳು ಇಂಗ್ಲಿಷ ಭಾμÉ ಕಲಿತರೂ ಕನ್ನಡದ ಅಸ್ಮಿತೆಯನ್ನು ಉಳಿಸುವತ್ತ ಸಾಗಬೇಕಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಎ. ಎ. ಸನದಿ ಅವರು ಮಾತನಾಡಿ, ” ಕನ್ನಡ ಒಂದು ಭಾμÉ ಮಾತ್ರವಲ್ಲ, ಜೀವನ ಕ್ರಮ, ಜೀವನ ಸಂಸ್ಕøತಿ. ಕನ್ನಡ ಭಾμÉ ನಾಶವಾದರೆ ನಮ್ಮ ಸಂಸ್ಕೃತಿಯೇ ನಾಶವಾಗುತ್ತದೆ. ಹೀಗಾಗಿ ಕನ್ನಡ ಭಾμÉ ಉಳಿದು ಬೆಳಗಲು ಪ್ರಜ್ಞಾವಂತ ಕನ್ನಡಿಗರೆಲ್ಲರೂ ಕೈಜೋಡಿಸಬೇಕಿದೆ” ಎಂದು ಹೇಳಿದರು.
ವೇದಿಕೆಯ ರಾಜ್ಯಧ್ಯಕ್ಷೆ ರಜನಿ ಜೀರಗ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಜನಿ ಜೀರಗ್ಯಾಳ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಹೊಳೆನ್ನವರ, ಹಮೀದಾಬೇಗಂ ದೇಸಾಯಿ, ಜಯಶೀಲಾ ಬ್ಯಾಕೋಡ, ಸುಶ್ಮಿತಾ ಶೆಟ್ಟಿ, ಭಾರತಿ ಮಠದ, ಸುನಿತಾ ಪಾಟೀಲ, ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಊರಿನ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಸದಸ್ಯರುಗಳಾದ ಹೀರಾ ಚೌಗಲಾ , ಸುನಿತಾ ಸೊಲ್ಲಾಪುರೆ, ಸಿಂದೋಳಿಯಿಂದ ನೀಲವ್ವ ಮನೆಕಟ್ಟಿ, ರುಕ್ಮಿಣಿ ತಳವಾರ, ಪದ್ಮಾ ಕರಡೆಣ್ಣವರ, ಸವಿತಾ ಗಾಗೆ ಉಪಸ್ಥಿತರಿದ್ದರು. ಶಾಲೆಯ ಮಕ್ಕಳು ಹಾಡಿದ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಿರಿಜಾ ಮುಳಗುಂದ ಸ್ವಾಗತಿಸಿದರು.ಸಿರಿಗನ್ನಡ ಮಹಿಳಾ ವೇದಿಕೆಯ ತಾಲ್ಲೂಕಿನ ಅದ್ಯಕ್ಷ ಜ್ಯೋತಿ ಮಾಳಿ ನಿರೂಪಿಸಿದರು.
ಶುಭಾ ತೇಲಸಂಗ ವಂದಿಸಿದರು.//////