Belagavi News In Kannada | News Belgaum

ಇಂದಿರಾ ಗಾಂಧಿ ಅವರ 105ನೇ ಜನ್ಮ ದಿನ: ಗೌರವ ಸಲ್ಲಿಸಿದ   ಬೆಳಗಾವಿ ಕಾಂಗ್ರೆಸ್‌ ನಾಯಕರು

ಬೆಳಗಾವಿ:  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 105ನೇ ಜನ್ಮ ದಿನವನ್ನು ಶನಿವಾರ ಆಚರಿಸಲಾಯಿತು.

ಬೆಳಗಾವಿಯ ಖಾಸಗಿ ಹೋಟೆಲ್‌ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ   ಹಾಗೂ ಕಾಂಗ್ರೆಸ್ ನಾಯಕರು  ಸೇರಿದಂತೆ ಇತರ ನಾಯಕರು  ದಿ. ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ  ಪುಷ್ಪ ನಮನ ಸಲ್ಲಿಸಿದರು.

ಇಂದಿರಾ ಗಾಂಧಿ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳೆದರು,  ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಇಂದಿರಾಜಿಯವರು 17 ವರ್ಷ ಈ ದೇಶದ ಪ್ರಧಾನಿಯಾಗಿ ಬಡವರು, ದೀನ ದಲಿತರು, ಹಿಂದುಳಿದ ವರ್ಗಗಳ ಅಪಾರ ಪ್ರೀತಿ ಗಳಿಸಿದ್ದರು. ಕೆಳವರ್ಗದ ಜನರಿಗಾಗಿ ರೋಟಿ,   ಪಡಿತರ ಚೀಟಿ, ವೃದ್ಧಾಪ್ಯ ವೇತನ ಮುಂತಾದ ಜನಪರ ಯೋಜನೆಗಳನ್ನು ರೂಪಿಸಿದ್ದರು.

ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ ಊಳುವವನೆ ಭೂಮಿಯ ಒಡೆಯ ಮುಂತಾದ ಯೋಜನೆಗಳನ್ನು ಜಾರಿಗೆ ತಂದರು. ಅವರ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳೋಣ ಅವರ ದಾರಿಯಲ್ಲಿ ನಾವೆಲ್ಲರೂ ಸಾಗೋಣ ಎಂದು  ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಎಮ್‌ಎಲ್‌ ಸಿ ಪ್ರಕಾಶ ಹುಕ್ಕೇರಿ, ಶಾಸಕಿ  ಲಕ್ಷ್ಮೀ ಹೆಬ್ಬಾಳಕರ್‌, ಎಮ್‌ಎಲ್‌ ಸಿ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ವಿನಯ  ಕುಲಕರ್ಣಿ, ಅಶೋಕ ಪಟ್ಟಣ,  ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ,  ವಿನಯ ನಾವಲಗಟ್ಟಿ ಹಾಗೂ ಇತರರು ಇದ್ದರು.///////