110 ಕೆ.ವ್ಹಿ. ನೆಹರು ನಗರ ಉಪಕೇಂದ; ನ.20 ರಂದು ವಿದ್ಯತ್ ಸ್ಥಗಿತ

ಬೆಳಗಾವಿ : 110 ಕೆ.ವ್ಹಿ. ನೆಹರು ನಗರ ಉಪಕೇಂದ್ರದಲ್ಲಿ ನವೆಂಬರ್ 20 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 33 ಕೆ.ವ್ಹಿ. ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ವಾಟರ್ ಸಪ್ಲಾಯ್, ಕಂಗ್ರಾಳಿ ಕೆ.ಎಚ್, ಅಲತಗಾ, ಅಂಬೇವಾಡಿ, ಮನ್ನೂರ, ಗೋಜಗಾ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.//////