Belagavi News In Kannada | News Belgaum

ಅಪರಿಚಿತ ಶವ ಪತ್ತೆ ಮುರಗೋಡ ಪೊಲೀಸ ಪ್ರಕಟಣೆ

ಮುರಗೋಡ: ಅಪರಿಚಿತ ಶವ ಪತ್ತೆ ಮುರಗೋಡ ಪೊಲೀಸ ಪ್ರಕಟಣೆ
ದಿನಾಂಕ: 21/11/2022 ರಂದು ಮಾಹಾದೇವ ಸಂಗಪ್ಪ ಮದಗುನಕಿ, ಜಾತಿ: ಹಿಂದೂ ಉಪ್ಪಾರ, ವಯಸ್ಸು: 42 ವರ್ಷ, ಉದ್ಯೋಗ: ಒಕ್ಕಲುತನ ಸಾ|| ಗೋರಕೊಪ್ಪ ತಾ ಯರಗಟ್ಟಿ ಇವರು ಮುರಗೋಡ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ವರದಿ ಕೊಟ್ಟಿದ್ದರಲ್ಲಿ, ಸುಮಾರು 60-65 ವರ್ಷ ವಯಸ್ಸಿನ ಅಪರಿಚಿತ ಗಂಡಸು (ಭಿಕ್ಷುಕ) ವ್ಯಕ್ತಿ ಅವನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ ಅವನು ಸೊಪ್ಪಡ್ಡ ಹಾಗೂ ಕೋರಕೊಪ್ಪ ಗ್ರಾಮಗಳಲ್ಲಿ ಭಿಕ್ಷೆ ಬೇಡುತ್ತಾ ತಿರುಗಾಡುತ್ತಿದ್ದಾಗ ದಿನಾಂಕ: 19/11/2022 ರಂದು 1900 ಗಂಟೆಯಿಂದ ದಿನಾಂಕ: 20/11/2022 ರಂದು 1600 ಗಂಟೆ ನಡುವಿನ ಅವಧಿಯಲ್ಲಿ ಕೋರಕೊಪ್ಪ ಗ್ರಾಮದ ಹದ್ದಿಯಲ್ಲಿ ಬೆಳಗಾವಿ-ಬಾಗಲಕೋಟ ರಸ್ತೆ ಪಕ್ಕದಲ್ಲಿ ಎಸ್‌.ಎಸ್‌. ಗ್ರೀನ್‌ ಬಿಲ್ಡ್ ಬ್ಲಾಕ್ ಇಂಟರಗಿ ಪ್ಯಾಕ್ಟರಿ ಹತ್ತಿರ ಮೃತನು ಆಕಸ್ಮಾತ ಪಿಟ್ಲ ಕಾಯಿಲೆಯಿಂದಾಗಲಿ, ಹೃದಯಘಾತದಿಂದಾಗಲಿ ಅಥವಾ ಇನ್ಯಾವುದೋ ಕಾಯಿಲೆಯಿಂದ ಬಳಲಿ ಒದ್ದಾಡಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ನಮೂದ ಇದ್ದು ಸದರಿ ವರದಿಯನ್ನು ಮುರಗೋಡ ಪಿಎಸ್ ಯುಡಿ ನಂ: 63/2022: ಕಲಂ: 171

ಸಿಆರ್ ಪಿಸಿ ನೇದ್ಯಕ್ಕೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಮೃತನ ವರ್ಣನೆ ಈ ಕೆಳಕಂಡಂತೆ ಇರುತ್ತದೆ. 01) ಹೆಸರು ವಿಳಾಸ & ವಾರಸುದಾರರ ಬಗ್ಗೆ ತಿಳಿದು ಬಂದಿರುವದಿಲ್ಲ.

(12) ವಯಸ್ಸು : ಸುಮಾರು 60-65 ವರ್ಷ 03) ಎತ್ತರ: ಸುಮಾರು 5 ಸೂಟ 3 ಇಂಚು

04) ಚಹರೆ: ಉದ್ದ ಮುಖ, ಉದ್ದ ಮೂಗು, ಕಪ್ಪು ಮೈಬಣ್ಣ ಮುಖದ ಮೇಲೆ ಬಿಳಿ ಮೀಸೆ ದಾಡಿ ಇದ್ದು

ತಲೆಯಲ್ಲಿ ಮೆಹಂದಿ ಹಚ್ಚಿದ 2 ಬಿಳಿ ಕೂದಲು ಇರುತ್ತವೆ. 05) ಬಟ್ಟೆಗಳು: ಬಿಳಿ ಬಣ್ಣದ ಹಾಫ್ ಶರ್ಟ ಚಿಕ್ಕಿ ಚಿಕ್ಕಿ ಡಿಜೈನ ಇದ್ದು, ಚಾಕಲೇಟ ಬಣ್ಣದ ಹಾಫ್ ಬರ್ಮೊಡಾ ಇರುತ್ತವೆ.

ಈ ಪ್ರಕಾರ ಔಪರೆಯುಳ್ಳ ವ್ಯಕ್ತಿಯ ಬಗ್ಗೆ, ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮುರಗೋಡ ಪೊಲೀಸ ಠಾಣೆಗೆ ಅಂತಾ ಪೊಲೀಸ್ ಕಂಟ್ರೋಲ್ ರೂಮ್ ಬೆಳಗಾವಿ ರವರಿಗೆ ತಿಳಿಸಲು ವಿನಂತಿ ಆದೆ, ಮುರಗೋಡ ಪೊಲೀಸ್ ಠಾಣೆ ದೂರವಾಣಿ: ಸಂ-08337-265533, 4. ಮುರಗೋಡ ಪಿ.ಎಸ್.ಮೋಬೈಲ ನಂಬರ-9480804079 ನೇದ್ದವುಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಸಂಪರ್ಕಿಸಬೇಕಾದ ವಿಳಾಸ
ಮುರಗೋಡ ಠಾಣೆ ನಂ-(08337) 265533, ಪಿ.ಐ ರವರ ಮೊ. ನಂ: 9480804079,