Belagavi News In Kannada | News Belgaum

ಟಿಳಕವಾಡಿ ಶಾಖಾ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಆಚರಣೆ

 

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದ ಟಿಳಕವಾಡಿ ಶಾಖಾ ಗ್ರಂಥಾಲಯದಲ್ಲಿ ‘ಗ್ರಂಥಾಲಯ ಸಪ್ತಾಹ’ ವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಉಪನಿರ್ದೇಕರಾದ ಶ್ರೀ ರಾಮಯ್ಯ ಅವರು ‘ಪುಸ್ತಕ ಪ್ರದರ್ಶನ’ವನ್ನು ಉದ್ಘಾಟಿಸಿ ಮಾತನಾಡುತ್ತಾ, ಗ್ರಂಥಾಲಯಗಳು ಈಗ ಓದುಗ ಸ್ನೇಹಿ ಆಗಿರುವುದಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯಕ ಪುಸ್ತಕಗಳು ಸಾಕಷ್ಟು ಇರುವುದಲ್ಲದೆ ಅವುಗಳ ಉಪಯೋಗ ಪಡೆಯಬಹುದು ಎಂದು ಹೇಳಿದರು.

 

ಸಿಬ್ಬಂದಿಗಳು ಸಾರ್ವಜನಿಕ ಸ್ನೇಹಿ ಆಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅತಿಥಿಗಳಾಗಿ ಶ್ರಿಮತಿ ಸುಮನ್ ದೇಶಪಾಂಡೆ, ಶ್ರೀ ಸತೀಶ್ ಪಾಟೀಲ್ ಅವರು ಹಾಜರಿದ್ದರು. ಶಿಕ್ಷಕರಾದ ಶ್ರೀ ಜಿ ಎಮ್ ಕಮ್ಮಾರ ಅವರು ಇದ್ದರು. ಶಾಖಾ ಮುಖ್ಯಸ್ಥರಾದ ಎಚ. ಆರ್. ಬಿಲಕೆರಿ ಅವರು ಗಣ್ಯಮಾಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಪ್ರಕಾಶ ಇಚಲಕರಂಜಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನಾಗೇಂದ್ರ ಕೊಡ್ಲಿ, ಮತ್ತು ಶಿವಕುಮಾರ್ ಅವರನ್ನು ‘ ಉತ್ತಮ ಓದುಗ ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸುನೀಲ,ರೂಪಾ ರಾಣೆ ಬೆನ್ನುರಕರ್,ರೇಷ್ಮಾ ಗುಂಡ್ಯಗೋಳ, ಮಜಗಾಂವ, ಚೆನ್ನಮ್ಮನಗರ, ಗಾಂಧಿಭವನ ಸೇವಾಕೆಂದ್ರಗಳ ಮೇಲ್ವಿಚಾರಕಿಯರಾದ ರೇಷ್ಮಾ ಅನಗೊಳಕರ್,ಗೀತಾ ಕುಲಕರ್ಣಿ, ಮತ್ತು ಸುಶೀಲಾ ಕಾಟಕರ್ ಮತ್ತು ಓದುಗರು ಹಾಜರಿದ್ದರು.