Belagavi News In Kannada | News Belgaum

ಅಬಕಾರಿ ಇಲಾಖೆ ದಾಳಿ ಅಕ್ರಮ ಮದ್ಯ ವಶ ಒಂದೇ ಊರು ಒಬ್ಬನೇ ಟಾರ್ಗೇಟ್ ಒರ್ವ ಅಂದರ್ ಇಬ್ಬರು ಪರಾರಿ

ಸಂಕೇಶ್ವರ: ಅಬಕಾರಿ ಇಲಾಖೆ ದಾಳಿ ಅಕ್ರಮ ಮಧ್ಯ ವಶ ಹುಕ್ಕೇರಿ ತಾಲೂಕಿನ ಘೊಡಗೇರಿ ಗ್ರಾಮದಲ್ಲಿ ದಿನಾಂಕ 21/11/2022 ರಂದು ಡಾ.ವಾಯ್ ಮಂಜುನಾಥ ಅಬಕಾರಿ ಅಪರ ಆಯುಕ್ತರು ಬೆಳಗಾವಿ. ಶ್ರೀ ಫಿರೋಜಕನ ಕಿಲ್ಲದಾರ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಬೆಳಗಾವಿ. ಶ್ರೀ ಜಗದೀಶ ಕುಲಕರ್ಣಿ ಅಬಕಾರಿ ಉಪ ಆಯುಕ್ತರು ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ಶ್ರೀ ಅನಿಲಕುಮಾರ ನಂದಿಶ್ವರ ಅಬಕಾರಿ ಅಧಿಕ್ಷಕರು ಉಪ ವಿಭಾಗ ಚಿಕ್ಕೋಡಿ ಇವರ ಮಾರ್ಗದರ್ಶನದಲ್ಲಿ ಅಬಕಾರಿ ನೀರಕ್ಷಕಾರದ ಶ್ರೀ ವಿಜಯಕುಮಾರ ಸಿ ಮೇಳವಂಕಿ ಹುಕ್ಕೇರಿ ವಲಯ ರವರ ನೇತೃತ್ವದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ ಕೂಡಿಕೊಂಡು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಜನತಾ ಪ್ಲಾಟಿನಲ್ಲಿರುವ ಆರ್ ಆರ್ ನo 3820 ರ ಮನೆಯ ಮೇಲೆ ಅಬಕಾರಿ ದಾಳಿ ನಡೆಸಿದ ಕಾಲಕ್ಕೆ ಅಕ್ರಮವಾಗಿ ಲೈಸನ್ಸ್ ವ ಪರ್ಮಿಟ್ ಇಲ್ಲದೆ ಒರ್ಜಿನಲ್ ಚಾಯ್ಸ್ ವಿಸ್ಕಿ ತುಂಬಿದ 90/ಎಮ್ ಎಲ್ 14 ಬಾಕ್ಸಗಳು 120.96ಲೀಟರ್ ಹಾಗೂ ಅಮೃತ ಕೆಪ ರೇರ ಇಂಡಿಯನ್ಸ್ 2 ಬಾಕ್ಸ್ ಗಳು 17.28ಲೀ. ಹೀಗೆ ಒಟ್ಟು 138. ಲೀ ಭಾರತೀಯ ಮಧ್ಯವನ್ನು ಮಾರಾಟಕ್ಕಾಗಿ ಸಂಗ್ರಹಿಸಿ ವಿಟ್ಟಾಗ ಸಿಕ್ಕಿದರಿಂದ ಸದರಿ ಮಧ್ಯವನ್ನು ಜಪ್ತು ಮಾಡಿಕೊಂಡು ಅಬಕಾರಿ ನೀರಕ್ಷಕರಾದ ವಿಜಯಕುಮಾರ ಸಿ ಮೇಳವಂಕಿ ಹುಕ್ಕೇರಿ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ಆರೋಪಿತರಾದ (1)ಬಸವರಾಜ ಅಲಿಯಾಸ್ ಅಜಿತ್ ನಿರಂಜನ ತೆಗ್ಗಿನಮನಿ ವಯಸ್ಸು 28. ಸಾ. ಘೋಡಗೇರಿ ತಾ. ಹುಕ್ಕೇರಿ ಜಿ. ಬೆಳಗಾವಿ ಈತನನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಮತ್ತೊರ್ವ ಆರೋಪಿ(2)ಚಂದ್ರಪ್ಪ ತಳವಾರ ಓಡಿ ಪರಾರಿ ಆಗಿದ್ದು ಪತ್ತೆ ಹಚ್ಚಿ ಬಂದಿಸಬೇಕಾಗಿದೆ ಹಾಗೂ ಆರೋಪಿತನಾದ ಕೃತ್ಯ ನಡೆದ ಮನೆಯ ಮಾಲೀಕನನ್ನು ಪತ್ತೆ ಹಚ್ಚಿ ಬಂದಿಸಬೇಕಿದೆ. ಸದರಿ ಜಪ್ತಾದ ಮದ್ಯದ ಮೌಲ್ಯ ಒಟ್ಟು 52588/. ರೂ ಆಗಿದೆ.ಆದರೆ ತಾಲೂಕಿನಾದ್ಯಂತ ಅಕ್ರಮ ಸರಾಯಿ ಮಾರಾಟ ಹಾವಳಿ ಹೆಚ್ಚಾಗಿದ್ದು ಮಾಹಿತಿ ಕೊಟ್ಟರು ಸ್ಥಳಕ್ಕೆ ಬಾರದ ಅಬಕಾರಿ ಅಧಿಕಾರಿಗಳ ಆಟ ನಮ್ನ ನ್ಯೂಜ ಚಾನಲ್ ಗೆ ಸಂಪೂರ್ಣ ಮಾಹಿತಿ ಇದ್ದು ಸದರಿ ಒಂದೆ ಊರಿನಲ್ಲಿ ದಾಳಿ ಮಾಡಿ ಇನ್ನೋರ್ವರಿಗೆ ಪರ್ಮಿಶನ್ ಇಲ್ಲದೆ ಮಾರಾಟಕ್ಕೆ ಅನುವು ಮಾಡಿ ಕೊಡುತ್ತಿರುವ ಇಲಾಖೆ.ಮೇಲೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೆ ಎಂದು ಕಾದು ನೋಡಬೇಕಿದೆ ಅಥವಾ ನಮಗೂ ಮಾರಲು ಪರ್ಮಿಶನ್ ಇಲ್ಲದೆ ಮಾರಾಟ ಮಾಡಲು ಅನುಮತಿ ಕೊಡಿ ಎಂದು ಹುಕ್ಕೇರಿ ತಾಲೂಕಿನಲ್ಲಿ ಗ್ರಾಮಸ್ಥರು ಕಿಡಿಕಾರಿದ್ದಾರೆ. ಸದರಿ ದಾಳಿಯಲ್ಲಿ ಅಬಕಾರಿ ಉಪ ನೀರಕ್ಷಕರಾದ ಶ್ರೀ ಸುನಿಲಕುಮಾರ ಡಿ ಹಾಗೂ ಸಿಬ್ಬಂದಿ ಜನರಾದ ಶ್ರೀ ಶಾಮರಾಯ ತಳವಾರ ಶ್ರೀನಿವಾಸ್ ಗುಂಜಿಕರ. ಬಸವರಾಜ ಡಿ ಬಸಗೌಡ ಪಾಟೀಲ ಶಂಕರಾನಂದ ಮುದೋಳ ಕಾಡೆಶ ಗಡದ ರಾಜು ಅಂಬಾರಿ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು