Belagavi News In Kannada | News Belgaum

ರಾಜ್ಯ ಮಟ್ಟದ ಕಲಾ ಪ್ರದರ್ಶನ

ಹಿರಿಯ ಪತ್ರಿಕಾ ಛಾಯಾಗ್ರಾಹಕ ಪಿ.ಕೆ ಬಡಿಗೇರ ಅವರಿಗೆ ಗೌರವ, ಸನ್ಮಾನ

ಬೆಳಗಾವಿ:  ಶಿರಾಸಂಗಿಯ ರಾಜ್ಯ ಮಟ್ಟದ ಕಲಾ ಪ್ರದರ್ಶನದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಪಿ.ಕೆ ಬಡಿಗೇರ ಅವರನ್ನು ಪ್ರಮಾಣ ಪತ್ರ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ (ರಿ), ವಿಶ್ವಕರ್ಮ ಪ್ರತಿಷ್ಠಾನ (ರಿ), ಸಹಯೋಗದಲ್ಲಿ ಶ್ರೀ ವಿಶ್ವಕರ್ಮ ಮಹೋತ್ಸವದ ಅಂಗವಾಗಿ ಶಿರಸಂಗಿಯಲ್ಲಿ ಬುಧವಾರ (ನ.23) ಆಯೋಜಿಸಲಾದ 2 ದಿನದ ಕಲಾ ಪ್ರದರ್ಶನದ ಛಾಯಾಚಿತ್ರ ವಿಭಾಗದಲ್ಲಿ ಭಾಗವಹಿಸಿದ್ದಕ್ಕೆ ಸನ್ಮಾನಿಸಲಾಯಿತು.
ಕಲಾ ಪ್ರದರ್ಶನದಲ್ಲಿ ಲೋಹ ಶಿಲ್ಪಿ, ಛಾಯಾಚಿತ್ರ, ಚಿತ್ರಕಲೆ ಸೇರಿದಂತೆ ವಿವಿಧ ಕಲಾ ಶಿಲ್ಪಿಗಳು ಭಾಗವಹಿಸಿದ್ದರು. ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ (ರಿ), ಅಧ್ಯಕರಾದ ಪ್ರೊ. ಪಿ. ಬಿ ಬಡಿಗೇರ, ಪ್ರಧಾನ ಕಾರ್ಯದರ್ಶಿ ಅರುಣ ಸೋನಾರ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.//////