Belagavi News In Kannada | News Belgaum

ಯಮಕನಮರಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ  : ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ  ಜಾರಕಿಹೊಳಿ

ಬೆಳಗಾವಿ:  ಬೆಳಗಾವಿ  ತಾಲೂಕಿನ ಕೇದನೂರು, ಮಣ್ಣಿಕೇರಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ  ಜಾರಕಿಹೊಳಿ ಅವರು  ಬುಧವಾರ ಚಾಲನೆ ನೀಡಿದರು.

ಯಮಕನಮರಡಿ ಮತಕ್ಷೇತ್ರದ   ಶಾಸಕರಾದ ಸತೀಶ ಜಾರಕಿಹೊಳಿ ಅವರ ವಿಶೇಷ ಅನುದಾನದಲ್ಲಿ  ಅಂದಾಜು 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ವೇಳೆ   ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ  ಜಾರಕಿಹೊಳಿ ಅವರು  ಮಾತನಾಡಿ,  ಕ್ಷೇತ್ರಾದ್ಯಂತ ರಸ್ತೆಗಳ ಅಭಿವೃದ್ಧಿಪಡಿಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಬಹುತೇಕ ರಸ್ತೆಗಳನ್ನು ಸುವ್ಯವಸ್ಥಿತಗೊಳಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಜನತೆಯ ಸಹಕಾರ ಅಗತ್ಯ ಎಂದು ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಸಮಗ್ರ  ಅಭಿವೃದ್ಧಿಗೆ ನಿರಂತರ ಶ್ರಮಿಸಲಾಗುವುದು. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ,  ಕ್ಷೇತ್ರದ  ಜನತೆ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಿ ಕೂಡುವ ಜವಾಬ್ದಾರಿ ಗ್ರಾಪಂ ಸದಸ್ಯರ ಮೇಲಿದೆ ಎಂದರು.

ಮಣ್ಣಿಕೇರಿ ಗ್ರಾಮದ ಜನತೆ ಬಹು ದಿನಗಳ ಹೋರಾಟದ ಫಲದಿಂದ ಸರ್ಕಾರಿ ಪ್ರೌಡಶಾಲೆ ನಿರ್ಮಾಣವಾಗಿದೆ. ಅಂಗನವಾಡಿ ಕೇಂದ್ರ ಅದ್ಬುತವಾಗಿ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಅವರು, ಮಕ್ಕಳಿಗೆ ಕುಡಿಯುವ ನೀರಿನ ಜತೆ ಆಟದ ಮೈದಾನ ಸುಸಜ್ಜಿತವಾಗಿ ನಿರ್ಮಾಣವಾಗಲಿ ಎಂದು  ಹೇಳಿದರು.

ಮಣ್ಣಿಕೇರಿ ಹಾಗೂ ಕೇದನೂರ ಗ್ರಾಮದ ವಿವಿಧ ಕಾಮಗಾರಿ: ಈ ವೇಳೆ ಮಣ್ಣಿಕೇರಿ ಗ್ರಾಮದಲ್ಲಿ  15 ಲಕ್ಷ ರೂ ವೆಚ್ಚದಲ್ಲಿ  ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು. ಮತ್ತು  25 ಲಕ್ಷ ರೂ. ಸಿಸಿ ರಸ್ತೆ  ಕಾಮಗಾರಿ ಚಾಲನೆ ನೀಡಿದರು.

ಕೇದನೂರ ಗ್ರಾಮದ 3.50 ಕೋಟಿ ರೂ. ವೆಚ್ಚದಲ್ಲಿ ಕೇದನೂರ ದಿಂದ ಹೈವೆ ರಸ್ತೆ ವರೆಗೆ ಡಾಂಬರೀಕರಣ, ಬ್ರಹ್ಮಲಿಂಗ ಗಲ್ಲಿ 20 ಲಕ್ಷ ರೂ.  ಸಿ ಸಿ ರಸ್ತೆ, ಪಾಟೀಲ ಗಲ್ಲಿ  15 ಲಕ್ಷ ರೂ. ಸಿ ಸಿ ರಸ್ತೆ , ಕೇದನೂರ ರಿಂದ ಮಣ್ಣಿಕೇರಿ ವರೆಗೆ     50 ಲಕ್ಷ ರೂ, ಡಾಂಬರೀಕರಣ,  ಜೆ ಜೆ ಎಮ್ ಕೇದನೂರ ತೀರ್ಥ ಬಾವಿಯಿಂದ ಟ್ಯಾಂಕ್‌ ವರೆಗೆ ಪೈಪ ಲೈನ್‌  40 ಲಕ್ಷ ರೂ.,  ಮರಾಠಾ ಪ್ರಾಥಮಿಕ ಶಾಲೆಗೆ  3 ಲಕ್ಷ ರೂ. ಬೋರವೆಲ್, ಶಾಲೆಗೆ  5 ಲಕ್ಷ ಟೈಲ್ಸ್ ಸೇರಿದಂತೆ ವಿವಿಧ ಕಾಮಗಾರಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸತೀಶ  ಜಾರಕಿಹೊಳಿ  ಆಪ್ತ ಸಹಾಯಕ ಮಲಗೌಡ ಪಾಟೀಲ,  ಮಣ್ಣಿಕೇರಿ ಗ್ರಾಪಂ ಅಧ್ಯಕ್ಷರು  ಕಾಶವ್ವಾ ಕಲ್ಲಪ್ಪಾ ಹೊಸಮನಿ,  ಉಪಾಧ್ಯಕ್ಷ ಸುಮನ್ ಸಿದ್ದರಾಯ ಬುಕ್ಯಾಳ, ಮಲ್ಲಪ್ಪಾ  ದಡ್ಡಿಕರ್‌ , ಬಾಳು ಗುಡಾಜಿ, ಸಾವಿತ್ರಿ ಹಡಲಗಿ, ಪರಶುರಾಮ ಗುಂಡಗನಟ್ಟಿ, ಸವಿತಾ ಸಂಬಾಜಿ, ಜ್ಯೋತಿ ರಾಜಾಯಿ,ಲಕ್ಷ್ಮೀ ಬೆಳಗಾವಿ, ಗೌಡೆ ಬಿರ್ಜೆ,‌ಮದು ಸಂಭಾಜಿ, ಹಾಲಗೌಡ ಬುರಲೆ ಹಾಗೂ ಇತರರು ಇದ್ದರು./////