Belagavi News In Kannada | News Belgaum

“5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ದಾಪುಗಾಲು ಇಡುತ್ತಿರುವ ಭಾರತ”

“ಅಸಮಾನತೆ, ನಿರುದ್ಯೋಗ ಹಾಗೂ ಹಣದುಬ್ಬರ ಕಡಿಮೆ ಮಾಡಲು ಸಲಹೆ”ಪ್ರೊ. ಎಸ್. ಆರ್. ಕೇಶವ

“5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ದಾಪುಗಾಲು ಇಡುತ್ತಿರುವ ಭಾರತ”
“ಅಸಮಾನತೆ, ನಿರುದ್ಯೋಗ ಹಾಗೂ ಹಣದುಬ್ಬರ ಕಡಿಮೆ ಮಾಡಲು ಸಲಹೆ”
ಪ್ರೊ. ಎಸ್. ಆರ್. ಕೇಶವ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ದಿನಾಂಕ: 23.11.2022 ರಂದು ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಭಾರತದ ಹಾದಿಯಲ್ಲಿ ಸವಾಲುಗಳು ಮತ್ತು ಮುಂದಿನ ದಾರಿ”ಯ ಕುರಿತು, ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್. ಆರ್. ಕೇಶವ ಇವರು ಮೇಲಿನ ಉಕ್ತಿಯ ಬಗ್ಗೆ ಬೆಳಕು ಚೆಲ್ಲುತ್ತ ಭಾರತವು 2 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು 67 ವರ್ಷ ತಎಗೆದುಕೊಂಡು ನಂತರ 1 ಟ್ರಿಲಿಯನ್ ಸೇರಿ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಕೇವಲ 7 ವರ್ಷ ತೆಗೆದುಕೊಂಡಿದೆ. ಕೋವಿಡ್-19 ರ ಕಾರಣದಿಂದಾಗಿ 2023 ರವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕಿದ್ದ ಬಾರತ ಈಗ ಅದನ್ನು 2027 ಕ್ಕೆ ಸಾಧಿಸುತ್ತದೆ. ಕೋವಿಡ್-19 ಸಂಕಷ್ಟದ ಪರಿಣಾಮದಿಂದ ಬೇಗನೆ ಹೊರಬಂದು ಈಗ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಸರ್ಕಾರ ಕೈಗೊಂಡ ಆತ್ಮನಿರ್ಭರ ಅಭಿಯಾನ ಯಶಸ್ವಿಯಾಗಿರುವುದರಿಂದ ಕೃಷಿ ಮೂಲಸೌಕರ್ಯದಲ್ಲಿ ಹೆಚ್ಚಳವಾಗಿದೆ, ಒSಒಇ ಗಳು ಪುನರುಜ್ಜೀವನಗೊಳ್ಳುತ್ತಿವೆ. ಜಿ.ಎಸ್.ಟಿ. ಸಂಗ್ರಹದಲ್ಲಿ ಹಾಗೂ ಆದಾಯ ತೆರಿಗೆಯಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಸರ್ಕಾರದ ಅಚಿಠಿex ನ ಹೆಚ್ಚಳದಿಂದಾಗಿ ಸಾರಿಗೆ, ರೈಲ್ವೇ, ವಿಮಾನ ಹಾಗೂ ಬಂದರಿನ ಮೂಲ ಸೌಕರ್ಯದಲ್ಲಿ ಹೆಚ್ಚಳವಾಗಿದ್ದನ್ನು ನೋಡಬಹುದಾಗಿದೆ. ಪ್ರತಿದಿನ 40 ಕೀ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ವಂದೇಭಾರತ ರೈಲು ಸ್ವದೇಶಿ ನಿರ್ಮಾಣದಲ್ಲಾಗಿ ರೈಲ್ವೇನ ವೇಗ ಗಣನೀಯವಾಗಿ ಹೆಚ್ಚಳವಾಗಿದೆ. ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 140 ಕ್ಕೆ ಏರಿಕೆಯಾಗಿದ್ದು ಶೀಘ್ರದಲ್ಲಿ 220 ಕ್ಕೆ ಏರಿಕೆಯಾಗಲಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗಿದ್ದು 2021 ರಲ್ಲಿ 10.25 ಟ್ರಿಲಿಯನ್ ಆನ್‍ಲೈನ್‍ನಲ್ಲಿ ವಹಿವಾಟು ನಡೆದಿದೆ. ಭಾರತದಲ್ಲಿ ಜನಸಾಮನ್ಯರು ಸೇರಿದಂತೆ 72 ಕೋಟಿ ಜನ ಇಂಟರ್‍ನೆಟ್ ಬಳಸುತ್ತಿದ್ದಾರೆ.

ಆದರೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆ, ನಿರುಧ್ಯೋಗ ಹಾಗೂ ಹಣದುಬ್ಬರವನ್ನು ಕಡಿಮೆ ಮಾಡಬೇಕಿದೆ ಎಂದರು. ಭಾರತವು ಗುಣಮಟ್ಟದ ಆರೋಗ್ಯ ಹಾಗೂ ಶಿಕ್ಷಣದಲ್ಲಿ ತನ್ನ ಜಿ.ಡಿ.ಪಿ. 10% ಹೆಚ್ಚು ಮಾಡಬೇಕು, ಪೆಟ್ರೊಲ್, ಡಿಸೆಲ್ ಹಾಗೂ ಆಯಿಲ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕು ಹಾಗೂ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಯಾಗುವತ್ತ ಇನ್ನು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ. ಡಿ. ಎನ್. ಪಾಟೀಲ, ಇವರು ಅಧ್ಯಕ್ಷತೆ ವಹಿಸಿದ್ದರು, ಸಹಾಯಕ ಪ್ರಾಧ್ಯಾಪಕರಾದ ಡಾ. ಕಿರಣ ಕುಮಾರ ಪಿ, ಇವರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.