Belagavi News In Kannada | News Belgaum

ಶೀಘ್ರವೇ ಡಿಜಿಟಲ್ ಮಾಧ್ಯಮ ಪತ್ರಕರ್ತರಿಗೂ ಮಾನ್ಯತೆ : ಸಚಿವ ಅನುರಾಗ್ ಠಾಕೂರ್

ಜೈಪುರ್: ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಾನೂನನ್ನು ತರಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ನಿನ್ನೆ ಜೈಪುರದಲ್ಲಿ ಪತ್ರಿಕೆಯೊಂದರ ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಠಾಕೂರ್, ಇನ್ನು ಮುಂದೆ ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ಪತ್ರಕರ್ತರಿಗೂ ಮಾನ್ಯತೆ ನೀಡಲಾಗುವುದು. ಈ ಹಿಂದೆ ಏಕಮುಖವಾಗಿ ಸುದ್ದಿ ಸಂವಹನ ನಡೆಯುತ್ತಿತ್ತು, ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯಿಂದ ಈಗ ಬಹು ಆಯಾಮಗಳಲ್ಲಿ ಸುದ್ದಿ ಸಂವಹನ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರಾ, ಮಾಧ್ಯಮಗಳು ಪ್ರಜಾಪ್ರಭುತ್ವದ ದೊಡ್ಡ ಸಂದೇಶವಾಹಕಗಳು. ಸಾಂವಿಧಾನಿಕ ಮೌಲ್ಯ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಬಲಪಡಿಸುವುದು ಪತ್ರಿಕೋದ್ಯಮದ ಗುರಿಯಾಗಬೇಕು ಎಂದರು.//////