Belagavi News In Kannada | News Belgaum

ಮನರೇಗಾ ಕೂಲಿ‌ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸವದತ್ತಿ:  ತಾಲೂಕಿನ ಭಂಡಾರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಿರೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮನರೇಗಾ ಯೋಜನೆಯ ಐಇಸಿ ಚಟುವಟಿಕೆಯಡಿ ಮಂಗಳವಾರ ನರೇಗಾ ಕೂಲಿಕಾರರಿಗೆ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ  ಕಾರ್ಯಕ್ರಮವನ್ನು ಮಾನ್ಯ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಶ್ರೀ ಸಂಗನಗೌಡ ಹಂದ್ರಾಳ ರವರು ಸಸಿಗೆ ನೀರು ಹಾಕುವುರ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಈಗಿನ ಸಂದರ್ಭದಲ್ಲಿ ಯಾರು ಕೂಡಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು.

ಗ್ರಾಮೀಣ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಆರೋಗ್ಯದ ಕಾಳಜಿ ವಹಿಸುವುದು ಕೂಡ ನರೇಗಾ ಯೋಜನೆಯ ಭಾಗವಾಗಿದೆ. ಮನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳ ಜೊತೆ  ದನದ ಶೆಡ್, ಕುರಿ ಶೆಡ್, ಕೃಷಿ ಹೊಂಡ, ಬದುನಿರ್ಮಾಣ ಸೇರಿದಂತೆ ಇನ್ನೂ ಹಲವಾರು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ ಆದುದರಿಂದ ಪ್ರತಿಯೊಬ್ಬರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಡರಾಗುವಂತೆ ತಿಳಿಸಿದರು.

ನರೇಗಾ ಯೋಜನೆಯಡಿ ಗಂಡು-ಹೆಣ್ಣಿಗೆ ಸಮಾನ ಕೆಲಸವನ್ನು ನೀಡಿ ಸಮಾನ ಕೂಲಿಯನ್ನು ನೀಡಲಾಗುತ್ತಿದೆ ಆದುದರಿಂದ ಗ್ರಾಮದ ಎಲ್ಲ ಮಹಿಳೆಯರು ಕೂಡಾ ಕೂಲಿ ಕೆಲಸಕ್ಕೆ ಬಂದು ತಮ್ಮ ಆರ್ಥಿಕ ಮಟ್ಟವನ್ನು ಅಭಿವೃದ್ದಿ ಪಡಿಸಿಕೊಂಡು ನೆಮ್ಮದಿಯುತ ಜೀವನವನ್ನು ನಡೆಸಿ ಎಂದರು. ಇನ್ನೂ  ಪ್ರತಿಯೊಬ್ಬ ಕೂಲಿಕಾರರು ಇ-ಶ್ರಮ ಕಾರ್ಡ, ಆಯುಷ್ಮಾನ ಕಾರ್ಡ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಬಳಿಕ ಸಮುದಾಯ ಆರೋಗ್ಯ ಅಧಿಕಾರಿ ಮಂಜುನಾಥ ಜಡಗನ್ನವರ ಮಾತನಾಡಿ ಎಲ್ಲಾ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿ ವಹಿಸಿ, ಉತ್ತಮ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಜೊತೆಗೆ ನೆಮ್ಮದಿಯ ಜೀವನಕ್ಕೆ ನಾವು ಉತ್ತಮ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ ಆರೋಗ್ಯ ಶಿಬಿರದಲ್ಲಿ ಮನರೇಗಾ ಕೂಲಿಕಾರರಿಗೆ ಉದ್ಯೋಗ ಚೀಟಿಯನ್ನು ವಿತರಣೆ ಮಾಡಲಾಯಿತು. ಮತ್ತು  ಉಚಿತವಾಗಿ ಇ-ಶ್ರಮ ಕಾರ್ಡ ಹಾಗೂ ಆಯುಷ್ಮಾನ ಕಾರ್ಡ ಮಾಡಿಸಲಾಯಿತು

ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ  ಬಿ ಆರ್ ಧಾರವಾಡ, ಕಾರ್ಯದರ್ಶಿ ಎನ್ ಎಸ್ ಕೊಡ್ಲಿವಾಡ, ತಾಪಂ ತಾಂತ್ರಿಕ ಸಂಯೋಜಕರಾದ  ಮಹಾದೇವ ಕಾಮನ್ನವರ, ತಾಪಂ ಐಇಸಿ ಸಂಯೋಜಕರಾದ  ಮಲೀಕಜಾನ ಮೋಮಿನ, ತಾಂತ್ರಿಕ ಸಹಾಯಕರಾದ  ಆನಂದ ನರಗುಂದ, ಗ್ರಾಪಂ ಸದಸ್ಯರುಗಳಾದ  ಫಕೀರಪ್ಪ ಚಂದರಗಿ,  ಮೌಲಾಸಾಬ ಧಾರವಾಡ,  ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಡಾ. ಕಾರ್ತಿಕ ವಾಲಿ,  ಹಣಮಂತರಾವ ಸಿ. ಪಚ್ಚಿನವರ, ಬಿಎಫ್ ಟಿ ಸಿದ್ದಪ್ಪ ಪತ್ರಾವಳಿ, ಉಮೇಶ  ಗೋರವನಕೊಳ್ಳ, ಗ್ರಾಪಂ ಡಿಇಒ ಎಸ್ ಎಸ್ ಕರೀಕಟ್ಟಿ,  ಆಶಾ ಕಾರ್ಯಕರ್ತೆಯರು, ಕೂಲಿಕಾರರು, ಕಾಯಕ ಬಂಧುಗಳು ಇನ್ನಿತರರು ಹಾಜರಿದ್ದರು. ಐಇಸಿ ಸಂಯೋಜಕರಾದ ಶ್ರೀ ಮಲೀಕಜಾನ ಮೋಮಿನ ನಿರೂಪಿಸಿದರು.//////