Belagavi News In Kannada | News Belgaum

ಅಂತರಾಷ್ಟ್ರೀಯ ಮಟ್ಟದ ಕ್ಯಾಸ್ಟ್ರೋಬಾಲ್ ಟೊರ್ನಾಮೆಂಟ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಪ್ರೋತ್ಸಾಹ ಧನ

ಬೆಳಗಾವಿ: ಅಂತರಾಷ್ಟ್ರೀಯ ಮಟ್ಟದ ಕ್ಯಾಸ್ಟ್ರೋಬಾಲ್ ಟೊರ್ನಾಮೆಂಟ್ ಆಯ್ಕೆಯಾದ ಗೋಗಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ  ಜಾರಕಿಹೊಳಿ ಆಪ್ತ ಸಹಾಯಕ ಮಲಗೌಡ ಪಾಟೀಲ ಅವರು ಆರ್ಥಿಕ ಪ್ರೋತ್ಸಾಹ ನೀಡಿ ಗೌರವಿಸಿದರು.
ಈ ವೇಳೆ ಶಾಸಕ ಸತೀಶ  ಜಾರಕಿಹೊಳಿ ಆಪ್ತ ಸಹಾಯಕ ಮಲಗೌಡ ಪಾಟೀಲ ಮಾತನಾಡಿ, ಎಲೆ ಮರಿ ಕಾಯಿಯಂತೆ ಸಾಧನೆ ತೋರಿಸುತ್ತಿರುವ ಪ್ರತಿಭೆಗಳಿಗೆ ಹಲವು ವರ್ಷಗಳಿಂದ ಪ್ರತಿಭೆಗಳನ್ನು ಗುರುತಿಸಿ ಶಾಸಕ ಸತೀಶ್ ಜಾರಕಿಹೊಳಿ ಅವರು ಆರ್ಥಿಕ ಮತ್ತು ಹೆಚ್ಚಿನ ತರಬೇತಿಗಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಗ್ರಾಮೀಣ ಕ್ರೀಡೆಗಳಾಗಲಿ, ವಿವಿಧ ಪ್ರತಿಭೆಗಳಿಗೆ ಸತೀಶ್ ಜಾರಕಿಹೊಳಿ ಅವರು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯನ್ನು ಸೃಷ್ಟಿ ಮಾಡಿ ಕ್ರೀಡೆ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಲು ಮುಂದಾಗಬೇಕು ಎಂದು ತಿಳಿ ಹೇಳಿದರು.
ಇನ್ನು ಗೋಗಟೆ ಕಾಲೇಜಿನ ಆರು ವಿದ್ಯಾರ್ಥಿಗಳಾದ ನಮೃತಾ ಕಾಮು, ರವಿರಾಜ್ ನಾಯಕ್, ಶ್ರೇಯಾ ಗೋನಿ ಓಂಕಾರ ಗೌರವ, ಶುಭಂ ಯಾದವ್, ಅಧಿತಿ ಬಾಳಿಗ್ ಅವರ ತಂಡಕ್ಕೆ  50,000 ರೂ. ಪ್ರೋತ್ಸಾಹ ಧನ ನೀಡಿ ಅವರ ಉಜ್ವಲ ಭವಿಷ್ಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ  ಜಾರಕಿಹೊಳಿ ಶುಭ ಕೋರಿದ್ದಾರೆ.ಈ ವೇಳೆ ಬಸವರಾಜ ಪುಠಾಣಿ ಸೇರಿದಂತೆ ಇತರರು ಇದ್ದರು.//////