Belagavi News In Kannada | News Belgaum

ಭ್ರಷ್ಟರ ತಾಣವಾದ ಗ್ರಹರಕ್ಷಕ ಇಲಾಖೆ

ಬೆಳಗಾವಿ: ಭ್ರಷ್ಟರ ತಾಣವಾದ ಗ್ರಹರಕ್ಷಕ ಇಲಾಖೆ ಎಂದು ಆರೋಪಿಸಿದ ಘಟಕಾಧಿಕಾರಿಗಳು ಲಂಚಬಾಖ ಅಧಿಕಾರಿಗಳ ತಾಂಡವ ಜಿಲ್ಲಾ ಗೃಹರಕ್ಷಕರ ದಳದ ಇಲಾಖೆಯಲ್ಲಿ ಮತ್ತು ಬೆಳಗಾವಿ ಗೃಹರಕ್ಷಕ ದಳದ
ಕಛೇರಿಯಲ್ಲಿ ಕಿರಣ ರುದ್ರಾನಾಯಕ ಭ್ರಷ್ಟಾಚಾರದ ಕುರಿತು.

ದೂರು ನೀಡಲಾಗಿದೆ ದೂರಿನಲ್ಲಿ ಏನಿದೆ ಹೌದು
ಬೆಳಗಾವಿ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಮತ್ತು ಪ್ರವಾರಿ ಘಟಕಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲೆಯ ಎಲ್ಲಾ ಗೃಹರಕ್ಷಕ/ಕಿ ಯವರಿಗೆ ತಿಳಿಸುವುದೇನೆಂದರೆ ಬೆಳಗಾವಿ ಜಿಲ್ಲೆಯ ಸಮಾದೇಷರಾದ ಡಾ. ಕಿರಣ ಆರ್ ನಾಯಕರವರು ಗೃಹರಕ್ಷಕ ದಳದ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಎಸೆಗಿರುತ್ತಾರೆ ಎಂದು ಈ ಮೂಲಕ ತಿಳಿಸುತ್ತೇವೆ. ಅದರ ಸಾಕ್ಷಿ ಆಧಾರಗಳು ನಮ್ಮಲ್ಲಿ ಇರುತ್ತದೆ. ಇದರಲ್ಲಿ ಯಾವ ವೈಯಕ್ತಿಕ ಸ್ವಾರ್ಥಕತೆ ಇರುವುದಿಲ್ಲ. ಹಾಗೆ ಯಾರವೇ ದುರದ್ದೇಶ ಇರುವುದಿಲ್ಲಾ ಗೃಹರಕ್ಷಕ ದಳ ಒಂದು ಸಮವಸ್ತ್ರದಾರ ಇಲಾಖೆ ಇರುವುದು ನಿಜ ಆದರೆ ಬೆಳಗಾವಿ ಜಿಲ್ಲೆಯ ಗೃಹರಕ್ಷಕ ದಳದ ಇಲಾಖೆಯಲ್ಲಿ ಯಾವುದೇ ಕಾರ್ಯಕರ್ತವ್ಯಗಳು ಸರ್ಕಾರದ ನಿಯಮಗಳು ಕಾನೂನು ಬದ್ಧವಾಗಿ ನಡೆಯುತ್ತಿಲ್ಲಾ, ಆದರೆ ಬೆಳಗಾವಿ: ಇಲಾಖೆಯಲ್ಲಿ ಹಣ ಕಿರಣ ರುದ್ರನಾಯಕ ರವರು ತಮಗೆ ಬೇಕಾದ ಸರ್ವಾಧಿಕಾರವನ್ನು ನಡೆಸುತ್ತಿದ್ದಾರೆ, ಅದು ಹೀಗೆ ಅಂದರೆ ಜಿಲ್ಲೆಯಲ್ಲಿ ಎಲ್ಲಾ ಗೃಹರಕ್ಷಕರಿಂದ ಲಂಚವನ್ನು ಸ್ವೀಕರಿಸುತ್ತಿದ್ದಾರೆ. ಪ್ರತಿ ತಿಂಗಳ ಕರ್ತವ್ಯಗಳಿಗೆ ರೂ. 5,000/- ರಿಂದ 6,000/- ರೂ.ಗಳ ರವರೆಗೆ ಹೋಲಿಸ ಠಾಣೆಗಳಿಗೆ ಚಾಲಕ ಅಂತಾ ಕರ್ತವ್ಯಕ್ಕೆ ನೀಡುತ್ತಾರೆ. ಹಾಗೂ ಇನ್ನೂಳಿದ ಎಲ್ಲಾ ಇಲಾಖೆಯಲ್ಲಿ ಕರ್ತವ್ಯಕ್ಕೆ ಡಾ. ಕಿರಣ ರುದ್ರ ನಾಯಕರವರು ಹಾಗೂ ಇಲಾಖೆಯ ಕೆಲವು ಸಿಬ್ಬಂದಿಗಳಾದ 1) ರಾಜಶೇಖರ ಪರುಶೆಟ್ಟಿ ಗೋಕಾಕ ಘಟಕಾಧಿಕಾರಿಗಳು 2) ರವಿ ಕೋಳಿ- ಆವಣಿ ಘಟಕಾಧಿಕಾರಿಗಳು 3) ದಿನಕರ ಹುದಲಿ-ಚಿಂಚಲಿ ಘಟಕಾಧಿಕಾರಿಗಳು 1) ಬಸವರಾಜ ಮೇಳವಂತೆ- ಹುಣಸಿಕಟ್ಟಿ ಘಟಕಾಧಿಕಾರಿಗಳು ಹಾಗೂ 5) ಕಲ್ಲಪ್ಪಾ ಅಂಗಡಿ-ಗೃಹರಕ್ಷಕ ವಾಹನ ಚಾಲಕರು 6) ಶಿವಲಿಂಗಯ್ಯ ಹಿರೇಮಠ ಗೃಹ ರಕ್ಷಕ ವಾಹನ ಚಾಲಕರು, ಇವರೆಲ್ಲರ ಮುಖಾಂತರ ಹಣವನ್ನು ಪಡೆಯುತ್ತಾರೆ. ಹಾಗೂ ಡಾ. ಕಿರಣ ರುದ್ರನಾಯಕರವರು ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕರು ಹಣವನ್ನು ಯಾರೂ ಕೊಡುವುದಿಲ್ಲ ಆ ಘಟಕದವರಿಗೆ ಹಾಗೂ ಗೃಹರಕ್ಷಕ/ಕಿ ಯವರಿಗೆ ಯಾವುದೇ ಇಲಾಖೆಗಳಿಗೆ ಕರ್ತವ್ಯಕ್ಕೆ ನಿಯೋಜಿಸಿರುವುದಿಲ್ಲ ಮತ್ತು ಮಾನಸಿಕವಾಗಿ ಕಿರುಕೂಳ ನೀಡುತ್ತಾರೆ, ಮತ್ತು ಘಟಕದ ಗೃಹರಕ್ಷಕ ಕಿ ರಿಂದ ಘಟಕಾಧಿಕಾರಿಗಳಿಗೆ ಮೇಲೆ ಎಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವರಿಗೆ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಾರೆ. ಹಾಗೂ ಘಟಕಾಧಿಕಾರಿ ಹಾಗೂ ಪ್ರಭಾರಿ ಘಟಕಾಧಿಕಾರಿಗಳಿಗೆ ಮಾಹಿತಿ ಇಲ್ಲದೆ ಹೊಸ ಗೃಹರಕ್ಷಕರನ್ನು ಭರ್ತಿ ಮಾಡಿಕೊಂಡಿರುತ್ತಾರೆ. ಅವರುಗಳಿಂದ ಪ್ರತಿಯೊಬ್ಬರಿಂದ ರೂ. 1.00 ಲಕ್ಷದಿಂದ 2.00 ಲಕ್ಷಗಳವರೆಗೆ ಹಣವನ್ನು ಪಡೆದುಕೊಂಡು ಭರ್ತಿ ಮಾಡಿಕೊಂಡಿರುತ್ತಾರೆ. ಹಾಗ ಸುಮಾರು ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಘಟಕಾಧಿಕಾರಿ ಹಾಗೂ ಪ್ರಭಾರಿ ಘಟಕಾಧಿಕಾರಿಗಳಿಗೆ ಮತ್ತು ಗೃಹರಕ್ಷಕ/ಕಿಯರಿಗೆ ಬೆಳಗಾವಿ ಜಿಲ್ಲೆ ಬಂದು ಸುಮಾರು 4 ವರ್ಷಗಳಾದರೂ ಕೂಡ ಇನ್ನೂವರೆಗೆ ಗುರ್ತಿನ ಚೀಟಿಯನ್ನು (ID. Card) ಗಳನ್ನು ನೀಡಿರುವುದಿಲ್ಲ. ಅಲ್ಲದೇ ನವೀಕರಣ ಮಾಡಲು ಪ್ರತಿಯೊಬ್ಬ ಘಟಕಾಧಿಕಾರಿ ಪ್ರಭಾರಿ ಘಟಕಾಧಿಕಾರಿ ಮತ್ತು ಗೃಹರಕ್ಷಕ/ಕಿ ಇವರುಗಳ ಕಡೆಯಿಂದ ಹಣ ಕೊಟ್ಟರೇ ಮಾತ್ರ ನವೀಕರಣ ಮಾಡುತ್ತಾರೆ ಇಲ್ಲವಾದರೆ ಇಲ್ಲ ಅಂತಾ ಹೇಳುತ್ತ ಬಂದಿರುತ್ತಾರೆ.

ಆದಕಾರಣ ಇವರುಗಳ ಮೇಲೆ ಇದೆ ತರಹ ಇನ್ನೂ ಹೆಚ್ಚಿನ ಆರೋಪಗಳು ಕಂಡು ಬರುತ್ತವೆ. ಇದರ ಎಲ್ಲ ತರಹದ ಸಾಕ್ಷಾಧಾರಗಳು ನಮ್ಮ ಹತ್ತಿರ ಇರುತ್ತೇವೆ. ಇದು ಸತ್ಯ ಮತ್ತು ನಿಜವಾದವುಗಳು ಇರುತ್ತವೆ. ಈ ಎಲ್ಲ ಆರೋಪಗಳ ಬಗ್ಗೆ ಮಾನ್ಯ ಶ್ರೀ ಡಿ.ಜಿ. ಸಾಹೇಬರು, ಕೂಲಂಕುಷವಾಗಿ ಪರಿಗಣಿಸಿ ಇಲಾಖೆಯ ನಿಷ್ಠಾವಂತ ಗೃಹರಕ್ಷಕ/ಕಿಯರು ಮತ್ತು ಘಟಕಾಧಿಕಾರಿಗಳು ಮತ್ತು ಪ್ರವಾ ಘಟಕಾಧಿಕಾರಿಗಳ ಹಿತದೃಷ್ಟಿಯಿಂದ ಪರಿಗಣಿಸಿ ಡಾಟ ಕಿರಣ ರುದ್ರಾ ನಾಯಕ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಮಾನ್ಯರವರಲ್ಲಿ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ. ವಂದನೆಗಳೊಂದಿಗೆ,